Part -43
ಮೂಲ:
ಅಹಂ
ಮಮೇತಿ ಪ್ರಥಿತಂ ಶರೀರಂ
ಮೋಹಾಸ್ಪದಂ
ಸ್ಥೂಲಮಿತೀರ್ಯತೇ ಬುಧೈಃ |
ನಭೋನಭಸ್ವದ್ದಹನಾಂಬು_ಭೂಮಯಃ
ಸೂಕ್ಷ್ಮಾಣಿ
ಭೂತಾನಿ ಭವಂತಿ ತಾನಿ ||೭೩||
ಪ್ರತಿಪದಾರ್ಥ:
ಅಹಂ
ಮಮ ಇತಿ=
ನಾನು
ನನ್ನದು ಎಂದು,
ಪ್ರಥಿತಂ=ಪ್ರಸಿದ್ಧವಾಗಿರುವ,
ಮೋಹಾಸ್ಪದಂ=ಮೋಹಕ್ಕೆ
ಕಾರಣವಾಗುವ,
ಶರೀರಂ=ದೇಹವು,
ಸ್ಥೂಲಮ್
ಇತಿ=ಸ್ಥೂಲವಾದುದೆಂದು,
ಬುಧೈಃ=ವಿದ್ವಾಂಸರಿಂದ,
ಈರ್ಯತೇ=ವಿವರಿಸಲ್ಪಟ್ಟಿದೆ,
ನಭಃ=ಆಕಾಶ,
ನಭಸ್ವತ್=ವಾಯು,
ದಹನ=ಅಗ್ನಿ,
ಅಂಬು_ಭೂಮಯಃ=ನೀರು
ಮತ್ತು ಭೂಮಿ,
ತಾನಿ
ಸೂಕ್ಷ್ಮಾಣಿ ಭೂತಾನಿ ಭವಂತಿ=ಆ
ಸೂಕ್ಷ್ಮ ಭೂತಗಳಾಗಿವೆ.
ತಾತ್ಪರ್ಯ:
ನಾನು,
ನನ್ನದು
ಎಂದು ಪ್ರಸಿದ್ಧವಾಗಿ,
ಮೋಹಕ್ಕೆ
ಕಾರಣವಾಗಿರುವ ಇದನ್ನು ಸ್ಥೂಲ
ಶರೀರವೆಂದು ಜ್ಞಾನಿಗಳು ಹೇಳುತ್ತಾರೆ.
ಆಕಾಶ,
ವಾಯು,
ಅಗ್ನಿ,
ನೀರು,
ಭೂಮಿ
ಇವು ಸೂಕ್ಷ್ಮಭೂತಗಳು.
ವಿವರಣೆ:
ಸಪ್ತಧಾತುಗಳು
ಹಾಗೂ ವಿವಿಧ ಅಂಗೋಪಾಂಗಗಳಿಂದ
ಕೂಡಿ ನಾನು,
ನನ್ನದು,
ಎಂದು
ಮೋಹಕ್ಕೆ ಕಾರಣವಾಗುವ ಈ ಆಕೃತಿಯನ್ನೇ
ಸ್ಥೂಲಶರೀರವೆಂದು ತಿಳಿದವರು
ಹೇಳುತ್ತಾರೆ.
ಸೂಕ್ಷ್ಮವಾಗಿರುವ
ಪಂಚ ಭೂತಗಳಿಂದ ಅಂದರೆ ಆಕಾಶ,
ವಾಯು,
ಅಗ್ನಿ,
ನೀರು
ಹಾಗೂ ಭೂಮಿ ಇವುಗಳೇ ಸ್ಥೂಲಶರೀರ
ರಚನೆಗೆ ಕಾರಣವಾಗುತ್ತದೆ.
(ಇದರ
{ಪಂಚೀಕರಣ}ಬಗ್ಗೆ
ಮುಂದಿನ ಶ್ಲೋಕಗಳಲ್ಲಿ ವಿವರಗಳು
ಬರಲಿವೆ).
ಹಾಗಾಗಿ
ದೇಹವು ಭೋಗಕ್ಕೆ ಸೀಮಿತವಾಗುತ್ತದೆ,
ಇಂದ್ರಿಯ
ಗ್ರಾಹ್ಯ ವಿಷಯಗಳ ಅನುಭವಕ್ಕೆ
ಕಾರಣವಾಗುವುದರಿಂದ ಶರೀರವನ್ನು
ಸ್ಥೂಲ ಎಂದು ನಿರೂಪಿಸಲಾಗಿದೆ.
...........
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ