ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Part -30

ಮೂಲ ಅವಿಜ್ಞಾತೇ ಪರೇ ತತ್ವೇ ಶಾಸ್ತ್ರಾಧೀತಿಸ್ತು ನಿಷ್ಫಲಾ | ವಿಜ್ಞಾತೇsಪಿ ಪರೇ ತತ್ವೇ ಶಾಸ್ತ್ರಾಧೀತಿಸ್ತು ನಿಷ್ಫಲಾ ||60|| ಪ್ರತಿಪದಾರ್ಥ ಅವಿಜ್ಞಾತೇ ತು = ತಿಳಿದುಕೊಳ್ಳದ, ಅರಿವುಂಟಾಗದ. ಪರೇತತ್ವೇ = ಪರತತ್ವ (ಕೇವಲ ಜ್ಞಾನ) , ಶಾಸ್ತ್ರಾಧೀತಿಃ = ಶಾಸ್ತ್ರಾಧ್ಯಯನವು, ನಿಷ್ಫಲಾ = ಉಪಯೋಗವಿಲ್ಲದ್ದು. ವಿಜ್ಞಾತೇ ಅಪಿ = ತಿಳಿದುಕೊಂಡರೂ,  ತಾತ್ಪರ್ಯ ಪರತತ್ವವನ್ನು (ಜ್ಞಾನ) ತಿಳಿವು ಉಂಟಾಗದಿದ್ದರೆ ಶಾಸ್ತ್ರಾಧ್ಯಯನವು ವ್ಯರ್ಥವು , ಅಂತೆಯೇ ಜ್ಞಾನೋದಯದ(ಪರತತ್ತ್ವ) ಬಳಿಕ ಶಾಸ್ತ್ರಾಧ್ಯಯನಗಳು ನಿರರ್ಥಕ. ವಿವರಣೆ ವಿರೋಧಾಭಾಸದ ರೀತಿಯಲ್ಲಿ ಮೇಲಿನ‌ ಶ್ಲೋಕದ ರಚನೆಯು ಕಂಡುಬರುತ್ತದೆ.  ಸಾಧನಾ ಚತುಷ್ಟಯ ಸಂಪನ್ನನಾಗಿ, ಶಾಸ್ತ್ರ ವಿದ್ಯೆಗಳಲ್ಲಿ ಪಾರಂಗತನಾಗಿದ್ದರೂ ಒಬ್ಬನಲ್ಲಿ ಬ್ರಹ್ಮ(ಜ್ಞಾನಿ)ವಾಗುವ ಇಚ್ಚೆ ಹುಟ್ಟದಿದ್ದರೆ ಆತನ ಅಧ್ಯಯನ ಸಾಧನೆಗಳೆಲ್ಲವೂ ನಿಷ್ಪ್ರಯೋಜಕವಾಗುತ್ತವೆ. ಹಾಗೆಯೇ ಜ್ಞಾನೋದಯವಾಗಿ ಅಥವಾ ಬ್ರಹ್ಮವೇ ತಾನಾದ ಬಳಿಕ ವೇದ, ವೇದಾಂತ-ಶಾಸ್ತ್ರಾರ್ಥಗಳೆಲ್ಲವೂ ಉಪಯೋಗಕ್ಕೆ ಬಾರದಂತಾಗುತ್ತದೆ. ಅಭ್ಯಾಸ, ಸಾಧನೆ-ಅಧ್ಯಯನಗಳೆಲ್ಲವೂ ಜ್ಞಾನಿಯಾಗಲು ಮಾತ್ರ, ಅದು ಸಾಕ್ಷಾತ್ಕಾರವಾದ ಬಳಿಕ (ಒಡನೆಯೇ, ತತ್ಕ್ಷಣ) ಮಿಕ್ಕಿದ್ದಲ್ಲವೂ ( ಹಾಗೆ ಕಾಣುವ) ಅರ್ಥವಿಹೀನವಾಗುತ್ತದೆ ಅಥವಾ ನಿರರ್ಥಕವಾಗುತ್ತದೆ ಎಂದು ಆಚಾರ್ಯರು ಹೇಳುತ್ತಾರೆ. ಒಂದು ಚಲನಚಿತ್ರದ ಎಲ್ಲ ರೂಪಗಳೂ ಚೆನ್ನಾಗಿದ್ದಾಗ ನಾವು ಅದರ ಆಸ್ವಾದನೆಯಲ್ಲಿ ಮುಳುಗುತ್ತೇ

Part - 29

ಮೂಲ ವಾಗ್ವೈಖರೀ ಶಬ್ದಝರೀ ಶಾಸ್ತ್ರವ್ಯಾಖ್ಯಾನ - ಕೌಶಲಮ್ | ವೈದುಷ್ಯಂ ವಿದುಷಾಂ ತದ್ವದ್ ಭುಕ್ತಯೇ ನ ತು ಮುಕ್ತಯೇ ||59|| ಪ್ರತಿಪದಾರ್ಥ ವಾಗ್ವೈಖರೀ = ಮಾತಿನ ಬೆಡಗು , ಶಬ್ದಝರೀ = ಪದಗಳ ಹರಿವು ( ಪ್ರಯೋಗ ) , ಶಾಸ್ತ್ರ ವ್ಯಾಖ್ಯಾನ ಕೌಶಲಮ್ = ಶಾಸ್ತ್ರಗಳನ್ನು ವಿವರಿಸುವ ಬುದ್ಧಿಮತ್ತೆ , ತದ್ವತ್ = ಹಾಗೇ , ವೈದುಷ್ಯಾಂ ವಿದುಷಾಂ =  ವಿದ್ವಾಂಸರ  ಪಾಂಡಿತ್ಯವು , ಭುಕ್ತಯೇ = ಭೋಗಕ್ಕಾಗಿ , ನ ತು ಮುಕ್ತಯೇ = ಮೋಕ್ಷಕ್ಕಾಗಿ ಅಲ್ಲ . ತಾತ್ಪರ್ಯ ಪಂಡಿತರ ಅಥವಾ ವಿದ್ವಾಂಸರ ಮಾತಿನ ಚಾತುರ್ಯ , ಬೆರಗು - ಬೆಡಗು , ಪದಪ್ರಯೋಗದ ಸೌಂದರ್ಯ - ಲಾಲಿತ್ಯ , ಶಾಸ್ತ್ರ ವಿವರಣೆಯ ಕುಶಲತೆ , ಇವೆಲ್ಲವೂ ಭೋಗಕ್ಕೆ ಸಾಧನವಾಗಬಲ್ಲುದೇ ಹೊರತು ಮುಕ್ತಿಗೆ ಆಗುವುದಿಲ್ಲ . ವಿವರಣೆ ಅಧ್ಯಯನ - ಅಧ್ಯಾಪನದಿಂದ ಸಂಪಾದಿಸಿದ ವಿಷಯ ಜ್ಞಾನವು ಹೊಟ್ಟೆಪಾಡನ್ನು ನಡೆಸುವುದರ ಜತೆಗೆ ಶಿಷ್ಯರಿಗೆ ಕಲಿಯಿಸಿಕೊಡಲೂ ಸಹಾಯಕವಾಗುತ್ತದೆ . ಶಾಸ್ತ್ರ , ವೇದ - ವೇದಾಂತಗಳನ್ನು  ಓದಿ ಪಾಂಡಿತ್ಯ ಪಡೆದಿರುವ ಪಂಡಿತರ ಮಾತಿನ ಚತುರತೆ , ವಿಷಯ ಮಂಡನೆ ಮತ್ತು ಅನೇಕ ಮನ ಮೋಹಕ ಪದಪುಂಜಗಳ ಪ್ರಯೋಗದ ಮೂಲಕ ಅಲಂಕಾರ , ಛಂದಸ್ಸುಗಳ ಸಹಿತ ವಿವರಿಸುವ ವಿಧಾನ , ಇವೆಲ್ಲವೂ ಭೋಗಕ್ಕಾಗಿ ಉಪಯೋಗವಾಗುತ್ತದೆಯೇ ಹೊರತು ಸಾಕ್ಷಾತ್ಕಾರಕ್ಕೆ ಅಲ್ಲ ಎಂದು ಶಂಕರರು ಹೇಳುತ್ತಾರೆ . ಅನೇಕ ವರ್ಷಗಳ ಕಠಿಣ ಅಧ್ಯಯನ , ತಪಸ್ಸಿನಿಂದ ಪಡೆದ ವಿಷಯ ಜ್ಞಾನವ