ಪೋಸ್ಟ್‌ಗಳು

ಅಕ್ಟೋಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Part - 68

ಮೂಲ : ಸರ್ವವ್ಯಾಪೃತಿ _ ಕರಣಂ _ ಲಿಂಗಮಿದಂ ಸ್ಯಾಚ್ಚಿದಾತ್ಮನಃ ಪುಂಸಃ | ವಾಸ್ಯಾದಿಕಮಿವ ತಕ್ಷ್ಣಸ್ತೇನೈವಾತ್ಮಾ ಭವತ್ಯಸಂಗೋ s ಯಮ್ || ೯೯ || ಪ್ರತಿಪದಾರ್ಥ : ತಕ್ಷ್ಣಃ = ಬಡಗಿಗೆ , ವಾಸ್ಯಾದಿಕಮ್ ಇವ = ಉಳಿ ಮೊದಲಾದವುಗಳಿಂದ , ಚಿದಾತ್ಮನಃ = ಚಿತ್ ಸ್ವರೂಪನಾದ , ಪುಂಸಃ = ಮನುಷ್ಯನಿಗೆ , ಇದಂ ಲಿಂಗಂ = ಈ ಸೂಕ್ಷ್ಮ ಶರೀರವು , ಸರ್ವವ್ಯಾಪೃತಿಕರಣಂ ಸ್ಯಾತ್ = ಸಮಸ್ತ ಪ್ರವೃತ್ತಿಗೆ ಸಾಧನವಾಗಿರುತ್ತದೆ ; ತೇನ ಏವ = ಆದುದರಿಂದಲೇ , ಅಯಮ್ ಆತ್ಮಾ = ಈ ಆತ್ಮನು , ಅಸಂಗಃ ಭವತಿ = ನಿರ್ಲಿಪ್ತನಾಗಿರುತ್ತಾನೆ . ತಾತ್ಪರ್ಯ : ಬಡಗಿಗೆ ಉಳಿ , ಸುತ್ತಿಗೆ ಮುಂತಾದ ಸಾಧನಗಳಂತೆ ಚಿದ್ರೂಪನಾದ ಆತ್ಮನಿಗೆ ಎಲ್ಲ ಪ್ರವೃತ್ತಿಗಳಿಗೂ ಸಾಧನವಾಗಿರುವುದು ಈ ಲಿಂಗಶರೀರವು . ಆದುದರಿಂದ ಆತ್ಮನು ನಿಸ್ಸಂಗನಾದವನೆಂದು ಸಂದೇಹವಿಲ್ಲದೆ ತಿಳಿಯಬಹುದು . ವಿವರಣೆ : ಬಡಗಿಯು ಎಷ್ಟೇ ಅತ್ಯುತ್ತಮ ಕೆಲಸಗಾರನಾಗಿದ್ದರೂ ಉಳಿ , ಸುತ್ತಿಗೆ ಮುಂತಾದ ಸಾಧನಗಳಿಲ್ಲದೆ ಏನೂ ಮಾಡಲಾಗುವುದಿಲ್ಲ . ಕೈಚಳಕವಿದ್ದ ಮಾತ್ರಕ್ಕೆ ಮಲಗುವ ಮಂಚ ತಾನೇ ತಯಾರಾಗುದಿಲ್ಲ , ಅದಕ್ಕೆ ಸರಿಯಾದ ಮರ , ಗರಗಸ , ನಟ್ _ ಬೋಲ್ಟ್ ಎಲ್ಲವೂ ಹೊಂದಿಕೆಯಾದಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ . ಮರಗೆಲಸಗಾರನ ತಿಳಿವಳಿಕೆಗೆ ಆಯುಧಗಳು ಸಾಧನಗಳಾಗುತ್ತವೇ ಹೊರತು , ಜ್ಞಾನಕ್ಕೆ ಪ್ರೇರಣೆಯಾಗುವುದಿಲ್ಲ . ಹಾಗೆಯೇ , ಚಿದ್ರೂಪನಾದ ಆತ್ಮನ ಎಲ್ಲ ವ್ಯಾಪಾರಕ್ಕ

Part - 67

ಮೂಲ : ಧೀಮಾತ್ರ ಕೋಪಾಧಿರಶೇಷಸಾಕ್ಷೀ ನ ಲಿಪ್ಯತೇ ತತ್ಕೃತ _ ಕರ್ಮಲೇಶೈಃ | ಯಸ್ಮಾದಸಂಗಸ್ತತ ಏವ ಕರ್ಮಭಿಃ _ ರ್ನ ಲಿಪ್ಯತೇ ಕಿಂಚಿದುಪಾಧಿನಾ ಕೃತೈಃ || ೯೮ || ಪ್ರತಿಪದಾರ್ಥ : ಧೀಮಾತ್ರಕ _ ಉಪಾಧಿಃ = ಕೇವಲ ಅಂತಃಕರಣವೆಂಬ ಉಪಾಧಿಯನ್ನು ಹೊಂದಿದವನಾದ , ಅಶೇಷ ಸಾಕ್ಷೀ = ಎಲ್ಲದಕ್ಕೂ ಸಾಕ್ಷಿಯಾದ , ( ಆತ್ಮನು ) ; ತತ್ಕೃತ _ ಕರ್ಮ _ ಲೇಶೈಃ = ಅಂತಃಕರಣದಿಂದಾದ ಕರ್ಮಲೇಶದಿಂದಲೂ , ನ ಲಿಪ್ಯತೇ = ಲಿಪ್ತನಾಗುವುದಿಲ್ಲ , ಯಸ್ಮಾತ್ = ಯಾವ ಕಾರಣದಿಂದ , ಅಸಂಗಃ = ಸಂಗರಹಿತನೊ , ತತಃ ಏವ = ಆ ಕಾರಣದಿಂದಲೇ , ಉಪಾಧಿನಾ = ಉಪಾಧಿಯಿಂದ , ಕೃತೈಃ = ಮಾಡಲಾದ , ಕರ್ಮಭಿಃ = ಕರ್ಮಗಳಿಂದ , ಕಿಂಚಿತ್ = ಸ್ವಲ್ಪವಾದರೂ , ನ ಲಿಪ್ಯತೇ = ಲಿಪ್ತನಾಗುವುದಿಲ್ಲ . ತಾತ್ಪರ್ಯ : ಕೇವಲ ಅಂತಃಕರಣವೆಂಬ ಉಪಾಧಿಯನ್ನು ಹೊಂದಿರುವ ಸರ್ವಸಾಕ್ಷಿಯಾದ ಆತ್ಮನಿಗೆ ಬುದ್ಧಿಯಿಂದ ಮಾಡಲಾಗುವ ಕರ್ಮಗಳು ಸಂಬಂಧಪಡುವುದಿಲ್ಲ ( ಅಂಟುವುದಿಲ್ಲ ). ಅವನು ( ಆತ್ಮನು ) ಸರ್ವಸಂಗ ಶೂನ್ಯವಾಗಿರುವ ಕಾರಣದಿಂದಲೇ ಉಪಾಧಿಯಿಂದ ಮಾಡಲಾಗುವ ಕರ್ಮಲೇಪವು ಕಿಂಚಿತ್ತೂ ಇರುವುದಿಲ್ಲ . ವಿವರಣೆ : ಕನಸಿನಲ್ಲಿ ( ಸ್ವಪ್ನಾವಸ್ಥೆಯಲ್ಲಿ ) ಅಂತಃಕರಣವು ಅನುಭವಗಳಿಗೆ ಸಾಕ್ಷಿಯಾಗುತ್ತದೆ , ಅಲ್ಲಿ ಎಲ್ಲ ಅವಸ್ಥೆಗಳಿಗೂ ಸಾಕ್ಷಿಯಾಗುವ ಆತ್ಮನು ಬೇರೆಯೇ ಆಗಿದ್ದುಕೊಂಡು ಪ್ರಕಾಶಿಸುತ್ತಿರುತ್ತಾನೆ ಎಂದು ಹಿಂದಿನ ಶ್ಲೋಕದಲ್ಲಿ ತಿಳಿದೆವು . ಕೇವಲ ಸಾಕ್ಷಿರೂ

Part -66

ಮೂಲ : ಸ್ವಪ್ನೋ ಭವತ್ಯಸ್ಯ ವಿಭಕ್ತ್ಯವಸ್ಥಾ ಸ್ವಮಾತ್ರಶೇಷೇಣ ವಿಭಾತಿ ಯತ್ರ | ಸ್ವಪ್ನೇತು ಬುದ್ಧಿಃ ಸ್ವಯಮೇವ ಜಾಗ್ರತ್ _ ಕಾಲೀನ _ ನಾನಾವಿಧ _ ವಾಸನಾಭಿಃ | ಕರ್ತ್ರಾದಿಭಾವಂ ಪ್ರತಿಪದ್ಯ ರಾಜತೇ ಯತ್ರ ಸ್ವಯಂಜ್ಯೋತಿರಯಂ ಪರಾತ್ಮಾ || ೯೭ || ಪ್ರತಿಪದಾರ್ಥ : ಅಸ್ಯ = ಇವನ , ವಿಭಕ್ತಿ _ ಅವಸ್ಥಾ = ಬೇರೆ ರೀತಿಯು , ಸ್ವಪ್ನಃ ಭವತಿ = ಸ್ವಪ್ನವೆನಿಸುತ್ತದೆ , ಯತ್ರ = ಎಲ್ಲಿ , ಸ್ವಮಾತ್ರಶೇಷೇಣ = ತಾನೊಬ್ಬನೇ ಶೇಷವಾಗಿ , ವಿಭಾತಿ = ಪ್ರಕಾಶಿಸುವನೋ , ಸ್ವಪ್ನೇತು = ಸ್ವಪ್ನದಲ್ಲಿ , ಬುದ್ಧಿಃ = ಅಂತಃಕರಣವು , ಸ್ವಯಮೇವ = ತಾನೊಂದೇ , ಜಾಗ್ರತ್ _ ಕಾಲೀನ = ಜಾಗ್ರದಾವಸ್ಥೆಯ , ನಾನಾವಿಧ _ ವಾಸನಾಭಿಃ = ಬೇರೆ ಬೇರೆ ವಾಸನೆಗಳಿಂದ , ಕರ್ತ್ರಾದಿಭಾವಂ = ಕರ್ತೃವೇ ಮೊದಲಾದ ಭಾವವನ್ನು ಹೊಂದಿ , ರಾಜತೇ = ಪ್ರಕಾಶಿಸುತ್ತದೆ , ಯತ್ರ = ಎಲ್ಲಿ , ಅಯಂ ಪರಾತ್ಮಾ = ಈ ಪರಮಾತ್ಮನು , ಸ್ವಯಂಜ್ಯೋತಿಃ = ಸ್ವಯಂಜ್ಯೋತಿಯು . ತಾತ್ಪರ್ಯ : ಜೀವನಿಗೆ ಸ್ವಪ್ನವು ಜಾಗ್ರತ್ತಿಗಿಂತ ಬೇರೆಯಾದ ಅವಸ್ಥೆ ; ಅಲ್ಲಿ ಅವನು ತಾನೋಬ್ಬನೇ ತೋರಿಕೊಂಡು ಪ್ರಕಾಶಿಸುತ್ತಾನೆ . ಸ್ವಪ್ನದಲ್ಲಿ ಅಂತಃಕರಣವು ತಾನೊಂದೇ ಆಗಿ ಜಾಗ್ರದಾವಸ್ಥೆಯ ನಾನಾವಿಧವಾದ ಅನುಭವಗಳ ವಾಸನೆಯಿಂದ ಕರ್ತೃವೇ ಮೊದಲಾದ ಭಾವವನ್ನು ಹೊಂದಿ ಪ್ರಕಾಶಿಸುತ್ತದೆ ; ಆದರೆ ಅಲ್ಲಿ ಪರಮಾತ್ಮನು ಸ್ವಯಂಜ್ಯೋತಿಯಾಗಿರುತ್ತಾನೆ . ವಿವರಣೆ : ಶರೀರವು ಸಾಮಾನ್ಯವ

Part - 65

ಮೂಲ : ಇದಂ ಶರೀರಂ ಶ್ರು ಣು ಸೂಕ್ಷ್ಮ ಸಂಜ್ಞಿತಂ ಲಿಂಗಂ ತ್ವಪಂಚೀಕೃತಭೂತ _ ಸಂಭವಮ್ | ಸವಾಸನಂ ಕರ್ಮಫಲಾನುಭಾವಕಂ ಸ್ವಾಜ್ಞಾನತೋ s ನಾದಿರುಪಾಧಿರಾತ್ಮನಃ || ೯೬ || ಪ್ರತಿಪದಾರ್ಥ : ಸೂಕ್ಷ್ಮ ಸಂಜ್ಞಿತಂ = ಸೂಕ್ಷ್ಮವೆಂಬ ಹೆಸರುಳ್ಳ , ಅಪಂಚೀಕೃತಭೂತ _ ಸಂಭವಂ = ಪಂಚೀಕೃತವಾಗದ ಭೂತಗಳಿಂದ ಹುಟ್ಟಿದ , ಸವಾಸನಂ = ವಾಸನೆಯಿಂದ ಕೂಡಿರುವ , ಕರ್ಮಫಲಾನುಭಾವಕಂ = ಕರ್ಮಫಲಗಳ ಅನುಭವವನ್ನು ಉಂಟುಮಾಡುವ , ಇದಂ ಲಿಂಗಂ ಶರೀರಂತು , ಈ ಲಿಂಗಶರೀರದ ವಿಷಯವನ್ನು , ಶ್ರು ಣು = ಕೇಳು , ಸ್ವ _ ಜ್ಞಾನತಃ = ( ಇದು ) ತನ್ನ ಸ್ವರೂಪವನ್ನು ತಿಳಿಯದಿರುವುದರಿಂದ , ಆತ್ಮನಃ = ಆತ್ಮನಿಗೆ , ಅನಾದಿಃ = ಅನಾದಿಯಾದ , ಉಪಾಧೀಃ = ಉಪಾಧಿಯು . ತಾತ್ಪರ್ಯ : ಸೂಕ್ಷ್ಮಶರೀರವೆಂಬ ಹೆಸರುಳ್ಳ , ಪಂಚೀಕೃತವಾಗದ ಭೂತಗಳಿಂದ ಹುಟ್ಟಿದ , ವಾಸನೆಯಿಂದ ಕೂಡಿರುವ ಮತ್ತು ಕರ್ಮಫಲಗಳ ಅನುಭವವನ್ನು ಉಂಟುಮಾಡುವ ಈ ಲಿಂಗಶರೀರದ ವಿಷಯವನ್ನು ಕೇಳು ; ಇದು ಸ್ವಸ್ವರೂಪವನ್ನು ತಿಳಿಯದೇ ಇರುವುದರಿಂದ ಆತ್ಮನಿಗೆ ಎಂದೂ ಉಪಾಧಿ ಎನಿಸಿದೆ . ವಿವರಣೆ : ಸ್ಥೂಲಶರೀರದ ನಿರೂಪಣೆಯ ಬಳಿಕ ಗುರುವು 'ಇದಂ ‌ಶರೀರಂ..' ಎಂಬ ಶ್ಲೋಕದ ಮೂಲಕ ಸೂಕ್ಷ್ಮ ಶರೀರದ ವಿವರಣೆಗೆ ಮುಂದಾಗುತ್ತಾರೆ.  ಪಂಚೀಕೃತವಾಗದ ಎಂದರೆ , ಬಿಡಿಯಾಗಿರುವ ಪಂಚಭೂತಗಳಿಂದ ಹುಟ್ಟಿರುವುದು ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ . ಆಕಾಶ , ಪೃಥ್ವಿ , ಬೆಂಕಿ , ಗಾಳಿ , ನೀರು ಇ

Part - 64

ಮೂಲ : ವಾಗಾದಿ ಪಂಚ ಶ್ರವಣಾದಿ ಪಂಚ ಪ್ರಾಣಾದಿ ಪಂಚಾಭ್ರಮುಖಾನಿ ಪಂಚ | ಬುದ್ಧ್ಯಾದ್ಯ ವಿದ್ಯಾಪಿ ಚ ಕಾಮ _ ಕರ್ಮಣೀ ಪುರ್ಯಷ್ಟಕಂ ಸೂಕ್ಷ್ಮಶರೀರಮಾಹುಃ || ೯೫ || ಪ್ರತಿಪದಾರ್ಥ : ವಾಗಾದಿ ಪಂಚ = ವಾಕ್ಕು ಮೊದಲಾದ ಐದು , ಶ್ರವಣಾದಿ ಪಂಚ = ಕಿವಿ  ಮೊದಲಾದ ಐದು , ಪ್ರಾಣಾದಿ ಪಂಚ = ಪ್ರಾಣವೇ ಮೊದಲಾದ ಐದು , ಅಭ್ರಮುಖಾನಿ ಪಂಚ = ಆಕಾಶವೇ ಮೊದಲಾದ ಐದು , ಬುದ್ಧ್ಯಾದಿ = ಬುದ್ಧಿಯೇ ಮೊದಲಾದ , ಅವಿದ್ಯಾ = ಅವಿದ್ಯೆ ( ಅಜ್ಞಾನ ), ಕಾಮ _ ಕರ್ಮಣೀ = ಕಾಮ ಮತ್ತು ಕರ್ಮ , ಪುರ್ಯಷ್ಟಕಂ = ಈ ಎಂಟು ಪುರಗಳನ್ನು , ಸೂಕ್ಞ್ಮ ಶರೀರಂ = ಸೂಕ್ಷ್ಮ ಶರೀರವೆಂದು , ಆಹುಃ = ಹೇಳುತ್ತಾರೆ . ತಾತ್ಪರ್ಯ : ವಾಕ್ ಮೊದಲಾದ ಐದು , ಕಿವಿ ಮೊದಲಾದ ಐದು , ಪ್ರಾಣವೇ ಮೊದಲಾದ ಐದು ,   ಆಕಾಶವೇ ಮೊದಲಾದ ಐದು , ಬುದ್ಧಿ ಮೊದಲಾದ ನಾಲ್ಕು , ಅವಿದ್ಯಾ , ಕಾಮ ಮತ್ತು ಕರ್ಮ ; ಈ ಎಂಟು ಪುರಗಳಿಂದ ಆಗಿರುವುದನ್ನು ಸೂಕ್ಷ್ಮ ಶರೀರವೆಂದು ಹೇಳುತ್ತಾರೆ . ವಿವರಣೆ : ಆತ್ಮಾನಾತ್ಮ ವಿವೇಕವನ್ನು ಹೇಳುತ್ತೇನೆ ಕೇಳು ಎಂದು ಆರಂಭಿಸಿದ ಗುರುವು ಮೊದಲಿಗೆ ಸೂಕ್ಷ್ಮ ವು ಸ್ಥೂಲವಾಗುವುದನ್ನು ವರ್ಣಿಸಿ , ವಿಷಯನಿಂದನೆ , ದೇಹಾಸಕ್ತಿಯ ನಿಂದನೆಯ ಮೂಲಕ ಶರೀರವು ಆತ್ಮನಿಂದ ಬೇರೆಯಾದುದು ಎಂಬುದನ್ನು ನಿರೂಪಿಸುತ್ತಾರೆ . ಸೂಕ್ಷ್ಮ ಶರೀರವು ಕರ್ಮೇಂದ್ರಿಯಗಳು ಹಾಗೂ ಜ್ಞಾನೇಂದ್ರಿಯಗಳ ಹಂಗಿಗೆ ಒಳಪಡುವುದರಿಂದ ಆತ್ಮನ ಸ

Part -63

ಮೂಲ : ಪ್ರಾಣಾಪಾನ _ ವ್ಯಾನೋದಾನ _ ಸಮಾನಾ _ ಭವತ್ಯಸೌ ಪ್ರಾಣಃ | ಸ್ವಯಮೇವ ವೃತ್ತಿಭೇದಾದ್ವಿಕೃತೇರ್ಭೇದಾತ್ ಸುವರ್ಣಸಲಿಲವತ್ || ೯೪ || ಪ್ರತಿಪದಾರ್ಥ : ವಿಕೃತೇಃ ಭೇದಾತ್ = ವಿಕಾರಭೇದದಿಂದ , ಸುವರ್ಣ_ ಸಲಿಲವತ್ = ಬಂಗಾರ _ ನೀರು ಇವುಗಳಂತೆ , ಅಸೌ ಪ್ರಾಣಃ = ಈ ಪ್ರಾಣವು , ವೃತ್ತಿ ಭೇದಾತ್ = ವೃತ್ತಿ ಭೇದದಿಂದ , ಸ್ವಯಮ್ ಏವ = ತಾನೊಂದೇ , ಪ್ರಾಣ _ ಅಪಾನ _ ವ್ಯಾನ _ ಉದಾನ _ ಸಮಾನಾಃ = ಪ್ರಾಣ _ ಅಪಾನ _ ವ್ಯಾನ _ ಉದಾನ _ ಸಮಾನ , ಭವತಿ = ಆಗುತ್ತದೆ . ತಾತ್ಪರ್ಯ : ಬಂಗಾರ , ನೀರು ಇವು ಹೇಗೆ ಆಕಾರ _ ವಿಕಾರ ಭೇದದಿಂದ ಕೂಡಿವೆಯೋ , ಹಾಗೆಯೆ ಈ ಪ್ರಾಣವು ತಾನೊಂದೇ ಆಗಿದ್ದರೂ ಕ್ರಿಯಾ ಭೇದದಿಂದ ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬ ಹೆಸರುಗಳನ್ನು ಪಡೆಯುತ್ತದೆ . ವಿವರಣೆ : ಪಂಚಭೂತಗಳ ವ್ಯಷ್ಟಿಯಿಂದ ಹುಟ್ಟುವ ಸೂಕ್ಷ್ಮ ಶರೀರಕ್ಕೆ ಸೇರಿದ ಪಂಚಪ್ರಾಣಗಳ ನಿರೂಪಣೆಯನ್ನು ' ಪ್ರಾಣಾಪಾನ ...’ ಎಂಬ ಶ್ಲೋಕದ ಮೂಲಕ ಮಾಡುತ್ತಾರೆ . ಬಂಗಾರವನ್ನು ಸುಮ್ಮನೆ ಚಿನ್ನ ಅಥವಾ ಸುವರ್ಣ ಎಂದ ಮಾತ್ರಕ್ಕೆ ಅದರ ಆಕಾರ ನಮಗೆ ತಿಳಿಯುವುದಿಲ್ಲ . ಬಳೆ , ಓಲೆ , ಕೊರಳಸರ , ಗೆಜ್ಜೆ ಮುಂತಾದ ಹೆಸರುಗಳಿಂದ ಕರೆದಾಗ ಅದರ ರೂಪ ಮತ್ತು ಬೆರಗು ನಮಗೆ ಗೊತ್ತಾಗುತ್ತದೆ . ನೀರನ್ನು ಯಾವ ಪಾತ್ರೆಯಲ್ಲಿ ಅಥವಾ ಪಾತ್ರದಲ್ಲಿ ಕಲ್ಪಿಸಿಕೊಳ್ಳುವೆವೋ , ಅದೇ ಆಕಾರದಲ್ಲಿ ನಮಗೆ ಕಾಣುತ್ತದೆ . ತ