ಪೋಸ್ಟ್‌ಗಳು

ಆಗಸ್ಟ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Part - 49

ಮೂಲ : ಅಪಾತ _ ವೈರಾಗ್ಯವತೋ ಮುಮುಕ್ಷೂನ್ ಭವಾಬ್ದಿಪಾರಂ ಪ್ರತಿಯಾತುಮುದ್ಯತಾನ್ | ಆಶಾ _ ಗ್ರಹೋ ಮಜ್ಜಯತೇಂತರಾಲೇ ನಿಗೃಹ್ಯ ಕಂಠೇ ವಿನಿವರ್ತ್ಯ ವೇಗಾತ್ || ೭೯ || ಪ್ರತಿಪದಾರ್ಥ : ಭವಾಬ್ದಿಪಾರಂ = ಸಂಸಾರ ಸಾಗರ ವನ್ನು , ಪ್ರತಿಯಾಂತು = ಹೊಂದಲು , ಉದ್ಯತಾನ್ = ಪ್ರಯತ್ನಿಸುತ್ತಿರುವ , ಅಪಾತ _ ವೈರಾಗ್ಯವತಃ = ಮಂದ ವೈರಾಗ್ಯವುಳ್ಳ , ಮುಮುಕ್ಷೂನ್ = ಬಂಧನದಿಂದ ಬಿಡಿಸಿಕೊಳ್ಳುತ್ತಿರುವವರು ( ಸಾಧನ ಚತುಷ್ಟಯದ ಸಾಧಕರು ), ಆಶಾ _ ಗ್ರಹಃ = ಆಸೆಯೆಂಬ ಮೊಸಳೆಯ , ಕಂಠೇ = ಕೊರಳಿನಲ್ಲಿ , ನಿಗೃಹ್ಯ = ಹಿಡಿದು , ವೇಗಾತ್ = ವೇಗದ ಕಾರಣದಿಂದ , ವಿನಿವರ್ತ್ಯ = ಹಿಂದಿರುಗಿಸಿ , ಅಂತರಾಲೇ = ಮಧ್ಯದಲ್ಲಿ , ಮಜ್ಜಯತೇ = ಮುಳುಗಿಸುತ್ತದೆ . ತಾತ್ಪರ್ಯ : ಸಂಸಾರ ಸಾಗರವನ್ನು ದಾಟಲು ಆಸಕ್ತನಾಗಿದ್ದರೂ ( ಆ ದಾರಿಯಲ್ಲೇ ನಡೆದು ಬಂದಿದ್ದರೂ ) ವಿಷಯಗಳ ಪ್ರತಿ ತೀವ್ರವಾದ ವೈರಾಗ್ಯವಿಲ್ಲದಿದ್ದರೆ ಅನರ್ಥವಾಗುತ್ತದೆ . ಮಂದ ವೈರಾಗ್ಯದಿಂದ ಮುನ್ನೆಡೆಯುವವರನ್ನು ' ಆಸೆ ' ಎಂಬ ಮೊಸಳೆಯು ತನ್ನ ಹಿಡಿತಕ್ಕೆ ತೆಗೆದುಕೊಂಡು ಯಾವ ವೇಗದಲ್ಲಿ ಸಾಗಿ ಬಂದಿರುತ್ತಾರೋ ಅಷ್ಟೇ ಬೇಗ ( ಹಿಮ್ಮುಖವಾಗಿ ) ಸಾಗರ ( ಸಂಸಾರ ) ದ ಮಧ್ಯದಲ್ಲಿ ಮುಳುಗಿಸುತ್ತದೆ . ವಿವರಣೆ: ಜ್ಞಾನಿಯಾಗುವವನಿಗೆ ವೈರಾಗ್ಯ ಅಥವಾ ಜಿಗುಪ್ಸೆಯು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ನಾವು ಈಗಾಗಲೇ   ಮಂದ_ಮಧ್ಯಮ_

Part - 48

ಮೂಲ : ವಿಷಯಾಶಾ _ ಮಹಾಪಾಶಾದ್ಯೋ ವಿಮುಕ್ತಃ ಸುದುಸ್ತ್ಯಜಾತ್ | ಸ ಏವ ಕಲ್ಪತೇ ಮುಕ್ತ್ಯೈ ನಾನ್ಯಃ ಷಟ್ _ ಶಾಸ್ತ್ರವೇದ್ಯಪಿ || ೭೮ || ಪ್ರತಿಪದಾರ್ಥ : ಸುದುಸ್ತ್ಯಜಾತ್ = ಬಿಡಿಸಿಕೊಳ್ಳಲು ಅಶಕ್ಯವಾಗಿರುವ , ವಿಷಯಾಶಾ _ ಮಹಾಪಾಶಾತ್ = ವಿಷಯಾಭಿಲಾಷೆ ಎಂಬ ಮಹಾಪಾಶದಿಂದ , ಯಃ = ಯಾರು , ವಿಮುಕ್ತಃ = ಮುಕ್ತನಾಗುತ್ತಾನೋ , ಸಃ ಏವ = ಅವನೇ , ಮುಕ್ತ್ಯೈ = ಮುಕ್ತಿಗೆ , ಕಲ್ಪತೇ = ಅರ್ಹನಾಗುತ್ತಾನೆ , ಷಟ್ _ ಶಾಸ್ತ್ರವೇದೀ ಅಪಿ = ಆರು ಶಾಸ್ತ್ರಗಳನ್ನು ಬಲ್ಲವನಾದರೂ , ಅನ್ಯಃ = ಮತ್ತೊಬ್ಬನು , ನ = ಆಗುವುದಿಲ್ಲ ( ಅರ್ಹ ). ತಾತ್ಪರ್ಯ : ತ್ಯಜಿಸಲು ಸರ್ವಥಾ ಅಶಕ್ಯವಾಗಿರುವ ವಿಷಯಾಭಿಲಾಷೆಯಿಂದ ಯಾರು ಬಿಡುಗಡೆ ಹೊಂದುವನೋ ಅವನೇ ಮೋಕ್ಷಕ್ಕೆ ಅರ್ಹನಾಗುತ್ತಾನೆ . ಆರು ಶಾಸ್ತ್ರಗಳನ್ನು ತಿಳಿದವನಿಗೂ ಇಂತಹ ಅರ್ಹತೆಯು ದುರ್ಲಭವಾಗಿರುತ್ತದೆ . ವಿವರಣೆ : ಅನರ್ಥಕಾರಿಯಾದ ವಿಷಯಗಳಲ್ಲೂ ಮನುಷ್ಯನು ಮೋಹವನ್ನಿಟ್ಟುಕೊಳ್ಳುತ್ತಾನೆ . ಅದರಿಂದ ಪಾಠವನ್ನು ಕಲಿತರೂ ವಿಷಯಾಭಿಲಾಷೆಯನ್ನು ಬಿಡಲು ಅಶಕ್ಯನಾಗುತ್ತಾನೆ . ಇಂತಹ ಪುರುಷನು ( ಪುರುಷತ್ವದ ಬಗ್ಗೆ ಮೊದಲನೆಯ ಭಾಗದಲ್ಲೇ ವಿವರಣೆಯಿದೆ ) ಆರು ಶಾಸ್ತ್ರಗಳನ್ನು ಬಲ್ಲವನಾದರೂ ಮೋಕ್ಷಕ್ಕೆ ಅರ್ಹನಾಗುವುದಿಲ್ಲ . ಬಿಡಲು ಅಸಾಧ್ಯವಾದ ವಿವಿಧ ರೀತಿಯ ಪ್ರಲೋಭನೆಗಳಿಂದ ಯಾರು ವಿಮುಖನಾಗುತ್ತಾನೋ ಆತನೇ ಸಾಕ್ಷಾತ್ಕಾರದ ಚಿಂತನೆಗೆ ಅರ್ಹನಾಗು

Part - 47

ಮೂಲ : ದೋಷೇಣ ತೀವ್ರೋ ವಿಷಯಃ ಕೃಷ್ಣಸರ್ಪವಿಷಾದಪಿ | ವಿಷಂ ನಿಹಂತಿ ಭೋಕ್ತಾರಂ ದ್ರಷ್ಟಾರಂ ಚಕ್ಷುಷಾ s ಪ್ಯಯಮ್ || ೭೭ || ಪ್ರತಿಪದಾರ್ಥ : ದೋಷೇಣ = ದೋಷದಿಂದ , ತೀವ್ರಃ = ತೀಕ್ಷ್ಣವಾದದ್ದು , ವಿಷಯಃ = ವಿಷಯಗಳು , ಕೃಷ್ಣಸರ್ಪವಿಷಾತ್ _ ಅಪಿ = ಕಾಳಸರ್ಪದ ವಿಷಕ್ಕಿಂತಲೂ , ವಿಷಂ = ವಿಷವು , ನಿಹಂತಿ = ಕೊಲ್ಲುವುದು , ಭೋಕ್ತಾರಂ = ತಿನ್ನುವವನನ್ನು , ಅಯಂ = ಇದು , ಚಕ್ಷುಷಾ = ಕಣ್ಣಿನಿಂದ , ದ್ರಷ್ಟಾರಮ್ _ ಅಪಿ = ನೋಡುವವನನ್ನು ಸಹ . ತಾತ್ಪರ್ಯ : ಕಾಳಸರ್ಪದ ವಿಷಕ್ಕಿಂಲೂ ವಿಷಯ ( ಭೋಗವಸ್ತು ) ವು ದೋಷದಲ್ಲಿ ತೀಕ್ಷ್ಣವಾದುದು . ವಿಷವು ತಿಂದವನನ್ನು ಮಾತ್ರ ಕೊಲ್ಲುತ್ತದೆ . ವಿಷಯವು ಕಣ್ಣಿನಿಂದ ನೋಡಿದವರನ್ನೂ ನಾಶಮಾಡುತ್ತದೆ . ವಿವರಣೆ : ವಿಷಯವಸ್ತುಗಳ ( ಶಬ್ದಾದಿ ಪಂಚ ) ಅನುಭವವು ಹೇಗೆ ನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಹಿಂದಿನ ಶ್ಲೋಕದಲ್ಲಿ ತಿಳಿದುಕೊಂಡೆವು . ಇಲ್ಲಿ ಇನ್ನೂ ಮುಂದುವರಿದು , ಅಂತಹ ಗುಣಗಳನ್ನು ಕಣ್ಣಾರೆ ಕಂಡರೂ ಸಾಕು ಮೃತ್ಯುವಿನ ಮನೆಯ ಬಾಗಿಲು ತಟ್ಟಬೇಕಾಗುತ್ತದೆ , ಏಕೆಂದರೆ ಕಾಳಸರ್ಪದ ವಿಷಕ್ಕಿಂತಲೂ ಹೆಚ್ಚು ಪರಿಣಾಮವು ಭೋಗವಸ್ತುಗಳನ್ನು ನೋಡುವುದರಿಂದಲೇ ಆಗುತ್ತದೆ ಎನ್ನುತ್ತಾರೆ . ಕಾಳಿಂಗಸರ್ಪದ ವಿಷವು ಅತ್ಯಂತ ಘೋರವಾದುದೆಂಬುದು ತಿಳಿದಿರುವ ಸಂಗತಿಯೇ ಆಗಿದೆ . ಇಂದ್ರಿಯ ಗ್ರಾಹ್ಯವಾದ ರೂಪಾದಿ ಗುಣಗಳಿಂದ ಹುಟ್ಟುವ ಭೋಗವಸ್ತುಗಳ ಮೇಲಿನ

Part - 46

ಮೂಲ : ಶಬ್ದಾದಿಭಿಃ ಪಂಚಭಿರೇವ ಪಂಚ ಪಂಚತ್ವಮಾಪುಃ ಸ್ವಗುಣೇನ ಬದ್ಧಾಃ | ಕುರಂಗ _ ಮಾತಂಗ _ ಪತಂಗ _ ಮೀನ _ ಭೃಂಗಾ ನರಃ ಪಂಚಭಿರಂಚಿತಃ ಕಿಮ್ || ೭೬ || ಪ್ರತಿಪದಾರ್ಥ : ಶಬ್ದಾದಿಭಿಃ = ಶಬ್ದವೇ ಮೊದಲಾದ , ಪಂಚಭಿಃ _ ಏವ _ ಪಂಚ = ಐದು ವಿಷಯಗಳಿಂದ , ಪಂಚತ್ವಂ = ಸಾವನ್ನು , ಆಪುಃ = ಹೊಂದುತ್ತವೆ , ಸ್ವಗುಣೇನ = ತಮ್ಮ ವಿಷಯಾಭಿಲಾಷೆಯ , ಬದ್ಧಾಃ = ಪಾಶದಿಂದ ಬಂಧಿತವಾಗಿ , ಕುರಂಗ _ ಮಾತಂಗ _ ಪತಂಗ = ಜಿಂಕೆ , ಆನೆ , ಚಿಟ್ಟೆ ( ಮಿಡತೆ ), ಮೀನ _ ಭೃಂಗಾ = ಮೀನು ಮತ್ತು ದುಂಬಿ , ಪಂಚಭಿಃ _ ಅಂಚಿತಃ = ಪಂಚೇಂದ್ರಿಯಗಳಿಂದ ಉತ್ತೇಜಿತನಾಗುವ ( ಕೂಡಿರುವ ), ನರಃ _ ಕಿಂ = ಮಾನವನ ಬಗ್ಗೆ ಹೇಳುವುದೇನಿದೆ ? ತಾತ್ಪರ್ಯ : ಜಿಂಕೆ , ಆನೆ , ಚಿಟ್ಟೆ , ಮೀನು ಮತ್ತು ದುಂಬಿಯು ಶಬ್ದವೇ ಮೊದಲಾದ ಪಂಚ ವಿಷಯಗಳ ಪಾಶಕ್ಕೆ ಸಿಲುಕಿ , ತಮ್ಮನ್ನು ಸೆಳೆಯುವ ಯಾವುದೋ ಒಂದು ಗುಣಕ್ಕೆ ಮನಸೋತು ಸಾವಿಗೀಡಾಗುತ್ತವೆ . ಹಾಗಾಗಿ ವಿವಿಧ ಇಂದ್ರಿಯಗಳಿಂದ ಕೂಡಿರುವ ಮನುಷ್ಯನ ಬಗ್ಗೆ ಏನು ಹೇಳುವುದು ?. ವಿವರಣೆ : ಜಿಂಕೆಯನ್ನು ಹಿಡಿಯಲು ಅಥವಾ ಬೇಟೆಯಾಡಲು ಅದು ಓಡದಂತೆ ತಡೆಯುವುದು ತುಂಬ ಮುಖ್ಯವಾಗುತ್ತದೆ . ಬೇಟೆಗಾರರು ಹರಿಣವು ಮನಸೋಲುವ ಶಬ್ದಗಳನ್ನು ಹೊರಡಿಸಿ ಅದು ಆಲಿಸುತ್ತಾ ನಿಲ್ಲುವಂತೆ ಮಾಡಿ ಹೊಡೆಯುತ್ತಾರೆ ( ಶಾಸ್ತ್ರೀಯ ಸಂಗೀತವನ್ನು ಜಿಂಕೆಗಳು ತದೇಕಚಿತ್ತದಿಂದ ಆಲಿಸುತ್ತವೆ ಎಂಬ ಮಾತಿದೆ ) . ಕಾ

Part - 45

ಮೂಲ : ಯ ಏಷು ಮೂಢಾ ವಿಷಯೇಷು ಬದ್ಧಾ ರಾಗೋರುಪಾಶೇನ ಸುದುರ್ದಮೇನ | ಆಯಾಂತಿ ನಿರ್ಯಾಂತ್ಯಧ ಊರ್ಧ್ವಮುಚ್ಚೈಃ ಸ್ವಕರ್ಮದೂತೇನ ಜವೇನ ನೀತಾ || ೭೫ || ಪ್ರತಿಪದಾರ್ಥ : ಯೇ ಮೂಢಾಃ = ಯಾವ ಮೂರ್ಖರು , ಏಷು ವಿಷಯೇಷು = ಈ ವಿಷಯಗಳಲ್ಲಿ , ಸುದುರ್ದಮೇನ = ಪ್ರಬಲವಾದ , ರಾಗೋರುಪಾಶೇನ = ರಾಗವೆಂಬ ಬಲವಾದ ಪಾಶದಿಂದ , ಬದ್ಧಾಃ = ಬಂಧಿತರಾಗಿರುತ್ತಾರೋ , ಸ್ವಕರ್ಮ = ತಮ್ಮ ಕರ್ಮವೆಂಬ , ದೂತೇನ = ದೂತನಿಂದ , ಜವೇನ ನೀತಾ = ಶೀಘ್ರವಾಗಿ ಒಯ್ಯಲ್ಪಟ್ಟು , ಉಚ್ಚೈಃ = ವಿಷೇಶವಾಗಿ , ಊರ್ಧ್ವಂ ನಿರ್ಯಾಂತಿ = ಮೇಲಕ್ಕೆ ಹೋಗುತ್ತಾರೆ , ಅಧಃ ಆಯಾಂತಿ = ಕೆಳಕ್ಕೆ ಬರುತ್ತಾರೆ . ತಾತ್ಪರ್ಯ : ಯಾವ ಮೂರ್ಖರು ಈ ( ಇಂದ್ರಿಯ ಗ್ರಾಹ್ಯ ) ವಿಷಯಗಳಲ್ಲಿ ಪ್ರಬಲವಾದ ' ರಾಗ ' ಎಂಬ ಪಾಶದಲ್ಲಿ ಬಂಧಿತರಾಗುತ್ತಾರೋ ಅವರು ಸ್ವಕರ್ಮವೆಂಬ ದೂತನಿಂದ ವೇಗವಾಗಿ ಒಯ್ಯಲ್ಪಟ್ಟು ಮೇಲಕ್ಕೂ , ಕೆಳಕ್ಕೂ ಅಲೆಯುತ್ತಿರುತ್ತಾರೆ . ವಿವರಣೆ : ಸ್ಥೂಲ ಶರೀರದ ವರ್ಣನೆಯ ಬಳಿಕ , ದೇಹದ ಇಂದ್ರಿಯಗಳನ್ನು ಪ್ರಚೋದಿಸುವಂತಹ ವಿಷಯಗಳ ಬಗ್ಗೆ ಅನಾಸಕ್ತಿಯನ್ನು ತಾಳುವುದು ಹೇಗೆ ಮತ್ತು ಅಂತಹ ವಿಷಯಗಳು ಯಾವುವು ಎಂಬುದನ್ನು ಆ ವಿಷಯಗಳ ನಿಂದನೆಯ ಮೂಲಕವೇ ಇಲ್ಲಿ ತೋರ್ಪಡಿಸುತ್ತಾರೆ . ಜ್ಞಾನೇಂದ್ರಿಯ _ ಕರ್ಮೇಂದ್ರಿಯಗಳನ್ನು ಉತ್ತೇಜಿಸಿ ಮಮಕಾರ ಹುಟ್ಟಿಸುವ ವಿಷಯಗಳಲ್ಲಿ ' ರಾಗ ' ವು ಅತ್ಯಂತ ಪ್ರಬಲವಾದ

Part - 44

ಮೂಲ : ಪರಸ್ಪರಾಂಶೈರ್ಮಿಲಿತಾನಿ ಭೂತ್ವಾ ಸ್ಥೂಲಾನಿ ಚ ಸ್ಥೂಲಶರೀರ _ ಹೇತವಃ | ಮಾತ್ರಾ ಸ್ತದೀಯಾ ವಿಷಯಾ ಭವಂತಿ ಶಬ್ದಾದಯಃ ಪಂಚ ಸುಖಾಯ ಭೋಕ್ತುಃ || ೭೪ || ಪ್ರತಿಪದಾರ್ಥ : ಪರಸ್ಪರ _ ಅಂಶೈಃ = ಪರಸ್ಪರ ಅಂಶಗಳಿಂದ , ಮಿಲಿತಾನಿ = ಸೇರಿಕೊಂಡಿರುವ , ಸ್ಥೂಲಾನಿ ಚ ಭೂತ್ವಾ = ಸ್ಥೂಲಗಳಾಗಿ , ಸ್ಥೂಲಶರೀರ _ ಹೇತವಃ = ಸ್ಥಳಶರೀರಕ್ಕೆ ಕಾರಣವಾಗುತ್ತದೆ , ತದೀಯಾಃ ಮಾತ್ರಾಃ = ಅವುಗಳ ಸೂಕ್ಷ್ಮಾಂಶಗಳಾದ , ಶಬ್ದಾದಯಃ ಪಂಚ = ಶಬ್ದವೇ ಮೊದಲಾದ ಐದು , ಭೋಕ್ತುಃ ಸುಖಾಯ = ಭೋಗಿಸುವವನ ( ಜೀವನ ) ಸುಖಕ್ಕಾಗಿ , ವಿಷಯಾ ಭವಂತಿ = ವಿಷಗಳಾಗುತ್ತವೆ . ತಾತ್ಪರ್ಯ : ಈ ಸೂಕ್ಷ್ಮಭೂತಗಳು ಪರಸ್ಪರ ಅಂಶಗಳಲ್ಲಿ ಮಿಶ್ರವಾಗಿ ಸ್ಥೂಲಗಳಾಗಿ ಸ್ಥೂಲ ಶರೀರಕ್ಕೆ ಕಾರಣವಾಗುತ್ತವೆ . ಇವುಗಳ ಸೂಕ್ಷ್ಮಾಂಶಗಳಾದ ಅಥವಾ ಗುಣಗಳಾದ ಶಬ್ದವೇ ಮೊದಲಾದ ಐದು ಅಂಶಗಳು ' ಜೀವ ' ನ ಸುಖಕ್ಕೆ ವಿಷಯಗಳಾಗುತ್ತವೆ . ವಿವರಣೆ : ಸಪ್ತಧಾತುಗಳು , ವಿವಿಧ ಅಂಗೋಪಾಂಗಳಿಂದ ಕೂಡಿ ನಾನು , ನನ್ನದು ಎಂಬ ಮಮಕಾರಕ್ಕೆ ( ಮೋಹಕ್ಕೆ ) ಆಸ್ಪದವಾಗಿರುವ ದೇಹವನ್ನು ಪಂಡಿತರು ಸ್ಥೂಲ ಶರೀರ ಎಂದು ಹೇಳಿರುವುದನ್ನು ತಿಳಿದೆವು . ಆಕಾಶಾದಿ ಪಂಚಭೂತಗಳು ಪರಸ್ಪರ ಸೇರಿಕೊಂಡು ಸ್ಥೂಲಗಳಾಗಿ ಸ್ಥೂಲ ಶರೀರಕ್ಕೆ ಕಾರಣವಾಗುತ್ತದೆ . ಶಬ್ದವೇ ಮೊದಲಾದ ಐದು ಗುಣಗಳು ಈ ಪಂಚಭೂತಗಳ ಸೂಕ್ಷ್ಮಾಂಶಗಳಾಗಿದ್ದು ಸ್ಥೂಲ ಶರೀರದ ' ಜೀವ