ಪೋಸ್ಟ್‌ಗಳು

ಸೆಪ್ಟೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Part -60

ಮೂಲ: ಸ್ಥೂಲಸ್ಯ ಸಂಭವ -ಜರಾ-ಮರಣಾನಿ ಧರ್ಮಾಃ  ಸ್ಥೌಲ್ಯಾದಯೋ ಬಹುವಿಧಾಃ ಶಿಶುತಾದ್ಯವಸ್ಥಾಃ | ವರ್ಣಾಶ್ರಮಾದಿ-ನಿಯಮಾ ಬಹುssಮಯಾಃ ಸ್ಯುಃ ಪೂಜಾವಮಾನ-ಬಹುಮಾನ-ಮುಖಾ ವಿಶೇಷಾಃ ||೯೦|| ಪ್ರತಿಪದಾರ್ಥ : ಸ್ಥೂಲಸ್ಯ = ಸ್ಥೂಲಶರೀರಕ್ಕೆ , ಸಂಭವ-ಜರಾ-ಮರಣಾನಿ = ಹುಟ್ಟು-ಮುಪ್ಪು-ಸಾವು (ಇವು) , ಸ್ಥೌಲ್ಯಾದಯಃ=ಸ್ಥೂಲತ್ವ ಮೊದಲಾದ, ಬಹುವಿಧಾಃ=ಬಹು ವಿಧವಾದ, ಧರ್ಮಾಃ=ಲಕ್ಷಣಗಳು ; ಶಿಶುತಾದಿ-ಅವಸ್ಥಾಃ=ಶಿಶುತ್ವ ಮೊದಲಾದ ಅವಸ್ಥೆಗಳು, ವರ್ಣಾಶ್ರಮಾದಿ-ನಿಯಮಾಃ = ವರ್ಣಾಶ್ರಮಗಳೇ ಮೊದಲಾದ ನಿಯಮಗಳು, ಬಹುಧಾ-ಆಮಯಾಃ=ನಾನಾವಿಧವಾದ ರೋಗಗಳು, ಪೂಜಾ-ಅವಮಾನ-ಬಹುಮಾನ-ಮುಖಾಃ=ಪೂಜೆ-ಅವಮಾನ-ಬಹುಮಾನ-ಮುಂತಾದ, ವಿಶೇಷಾಃ=ವಿಶೇಷಗಳು, ಸ್ಯುಃ=ಇವೆ. ತಾತ್ಪರ್ಯ: ಹುಟ್ಟು-ಮುಪ್ಪು-ಸಾವು ಮುಂತಾದವು ಸ್ಥೂಲ ಶರೀರದ ಧರ್ಮ ಅಥವಾ ಲಕ್ಷಣಗಳು. ಬಾಲ್ಯ, ಕೌಮಾರ, ಯೌವನ ಮೊದಲಾದವು ಅದರ ಅವಸ್ಥೆಗಳು. ಇದಕ್ಕೆ ಜಾತಿ ಹಾಗೂ ಆಶ್ರಮ ನಿಯಮಗಳಿದ್ದು ನಾನಾ ಬಗೆಯ ರೋಗಗಳನ್ನು ಅನುಭವಿಸುತ್ತದಲ್ಲದೆ ಸತ್ಕಾರ, ತಿರಸ್ಕಾರ, ಹೊಗಳಿಕೆ ಮೊದಲಾದ ವಿಶೇಷಗಳೂ ಇವೆ. ವಿವರಣೆ: ಸ್ಥೂಲಶರೀರದ ಅಂತರ್ಬಾಹ್ಯ ಸಂಸಾರವನ್ನು ಈ ಶ್ಲೋಕದಲ್ಲಿ ವಿವರವಾಗಿ ತೆರೆದಿಡುತ್ತಾರೆ.  ಹುಟ್ಟುವುದು, ಬದುಕುವುದು (ಇರುವುದು) , ಬೆಳೆಯುವುದು, ಹೊಂದಿಕೊಳ್ಳುವುದು (ಪರಿಣಮಿಸುವುದು), ಕ್ಷಯವಾಗುವುದು ಮತ್ತು ಸಾಯುವುದು (ನಾಶವಾಗುವುದು) ಇವು ಶರೀರದ ಆರು ವಿಕಾರಗಳೆಂದು ಮಹರ್ಷಿ ಯಾಸ್ಕರು ತಮ್ಮ  ಉಪನಿಷದ್ಭಾಷ್ಯಗ

Part - 59

ಮೂಲ: ಸರ್ವೋsಪಿ ಬಾಹ್ಯಸಂಸಾರಃ ಪುರುಷಸ್ಯ ಯದಾಶ್ರಯಃ | ವಿದ್ಧಿ ದೇಹಮಿದಂ ಸ್ಥೂಲಂ ಗೃಹವದ್ ಗೃಹಮೇಧಿನಃ || ೮೯|| ಪ್ರತಿಪದಾರ್ಥ: ಪುರುಷಸ್ಯ = ಪುರುಷನಿಗೆ (ಮನುಷ್ಯ), ಸರ್ವಃ ಅಪಿ ಬಾಹ್ಯಸಂಸಾರಃ = ಎಲ್ಲ ಹೊರಗಿನ ವ್ಯವಸ್ಥೆಯೂ(ಸಂಸಾರವು), ಯದಾಶ್ರಯಃ = ಯಾವುದನ್ನು ನೆಚ್ಚಿಕೊಂಡಿದೆಯೋ, ಇದಂ ಸ್ಥೂಲಂ ದೇಹಂ = ಇಂತಹ ಸ್ಥೂಲ ಶರೀರವನ್ನು, ಗೃಹಮೇಧಿನಃ = ಗೃಹಸ್ಥನ, ಗೃಹವತ್ = ಮನೆಯಂತೆ, ವಿದ್ಧಿ = ತಿಳಿ. ತಾತ್ಪರ್ಯ: ಮನುಷ್ಯನ (ಬಾಹ್ಯಸಂಸಾರ) ಹೊರಗಿನ ಎಲ್ಲ ಆಗುಹೋಗುಗಳು ಯಾವುದನ್ನು ನೆಚ್ಚಿಕೊಂಡಿದೆಯೋ, ಅಂಥ ಈ ಸ್ಥೂಲಶರೀರವನ್ನು ಗೃಹಸ್ಥನ ಮನೆ ಎಂದು ತಿಳಿ. ವಿವರಣೆ: ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಸೂರು ಎನ್ನುವುದು ತುಂಬ ಮುಖ್ಯವಾದುದು. ಎಲ್ಲರೂ ಅವರ ಅನುಕೂಲ, ಆದಾಯದ ಇತಿಮಿತಿಯ ಅನುಸಾರ ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಬದುಕಿರುವಾಗ ನಾನು ನಿರ್ಮಿಸಿದ ಮನೆ, ನನ್ನ ಇಚ್ಚೆಗೆ ತಕ್ಕಂತೆಯೇ ಅಲಂಕೃತಗೊಂಡ ಗೃಹವಿದು ಎಂಬ ಭಾವ ಇದ್ದೇ ಇರುತ್ತದೆ. ಏನೇ ಅಹಂಭಾವವಿದ್ದರೂ ಜಗತ್ತನ್ನು ಬಿಟ್ಟು ತೆರಳುವಾಗ ಮನೆ, ಮಂದಿರಗಳಾವುದೂ ನಮ್ಮ ಜತೆ ಬರುವುದಿಲ್ಲ. ಯಾರೂ ಅದನ್ನು ತನ್ನ ಆತ್ಮವೆಂದು ಪೋಷಿಸುವುದಿಲ್ಲ (ಪೋಷಣೆ ಸರ್ವಥಾ ಸಲ್ಲದು ಎನ್ನುವುದು ಪರೋಕ್ಷ ನಿರೂಪಣೆ). ಹಾಗೆಯೇ ಸೂಕ್ಷ್ಮ ಭೂತಗಳಿಂದ ರೂಪುಗೊಂಡ ಈ ಸ್ಥೂಲಶರೀರದಲ್ಲಿ 'ನಾನು' ‘ನನ್ನದು' ಎಂಬ ಅಭಿಮಾನವನ್ನು ಎಂದಿಗೂ ಮಾಡಬಾರದು ಎಂದು ಹೇಳುತ್ತಾರೆ. ಸ್ಥೂಲದೇಹದಿಂದ ಆತ್

Parf - 58

ಮೂಲ: ಬಾಹ್ಯೇಂದ್ರಿಯೈಃ ಸ್ಥೂಲಪದಾರ್ಥ-ಸೇವಾಂ ಸ್ರಕ್-ಚಂದನ-ಸ್ತ್ರ್ಯಾದಿ-ವಿಚಿತ್ರರೂಪಾಮ್ | ಕರೋತಿ ಜೀವಃ ಸ್ವಯಮೇತದಾತ್ಮನಾ ತಸ್ಮಾತ್ ಪ್ರಶಸ್ತಿರ್ವಪುಷೋsಸ್ಯ ಜಾಗರೇ || ಪ್ರತಿಪದಾರ್ಥ: ಜೀವಃ = ಜೀವಾತ್ಮನು, ಬಾಹ್ಯೇಂದ್ರಿಯೈಃ = ಹೊರ ಇಂದ್ರಿಯಗಳಿಂದ, ಸ್ರಕ್-ಚಂದನ = ಹೂವಿನ ಮಾಲೆ ಮತ್ತು ಚಂದನ, ಸ್ತ್ರೀ-ಆದಿ-ವಿಚಿತ್ರರೂಪಾಂ = ಹೆಣ್ಣು ಮೊದಲಾಗಿ ಬೇರೆ ರೂಪವುಳ್ಳ, ಸ್ಥೂಲಪದಾರ್ಥ-ಸೇವಾಂ = ಸ್ಥೂಲಪದಾರ್ಥಗಳ ಸೇವೆಯನ್ನು, ಏತದಾತ್ಮನಾ = ಹಾಗೆ ಅಭಿಮಾನದಿಂದ ಪಡೆದಿರುವ (ಈ ಶರೀರದಿಂದಲೇ), ಸ್ವಯಂ = ತಾನೇ, ಕರೋತಿ = ಮಾಡುತ್ತಾನೆ, ತಸ್ಮಾತ್ = ಆದುದರಿಂದ, ಅಸ್ಯ ವಪುಷಃ = ಈ ಶರೀರಕ್ಕೆ, ಜಾಗರೇ = ಎಚ್ಚರಿಕೆಯ ಅವಸ್ಥೆಯಲ್ಲಿ, ಪ್ರಶಸ್ತಿಃ = ಆದ್ಯತೆ ಇರುತ್ತದೆ. ತಾತ್ಪರ್ಯ: ಸ್ಥೂಲ ಶರೀರವನ್ನು ಪಡೆದವನು ದೇಹಾಭಿಮಾನ ಮತ್ತು ತನ್ನ ಇಂದ್ರಿಯಗಳಿಂದ ಪ್ರೇರಿತನಾಗಿ ಹೂವು(ಹೂಮಾಲೆ), ಚಂದನ, ಸ್ತ್ರೀ ಮುಂತಾದ ಬೇರೆ ಬೇರೆ ಸ್ಥೂಲಪದಾರ್ಥಗಳ ಸೇವೆಯನ್ನು ತಾನಾಗಿಯೇ ಮಾಡುತ್ತಾನೆ. ಹಾಗಾಗಿ ಶರೀರಕ್ಕೆ ಜಾಗ್ರದಾವಸ್ಥೆಯಲ್ಲಿ ಪ್ರಾಮುಖ್ಯತೆ ಇರುತ್ತದೆ. ವಿವರಣೆ: ಪಂಚೀಕೃತವಾಗಿ (ಪ್ರಾಣಿವರ್ಗದಲ್ಲಿ)ಹುಟ್ಟಿರುವ ಸ್ಥೂಲಶರೀರವು ದೇಹಾತ್ಮನ ಭೋಗಕ್ಕೆ ತನ್ನ ಎಚ್ಚರಿಕೆಯ ಅವಸ್ಥೆಯಲ್ಲಿ ಆಶ್ರಯವಾಗಿರುತ್ತದೆ ಎಂದು ಹೇಳಿದ್ದನ್ನು 'ಬಾಹ್ಯೇಂದ್ರಿಯೈ...’ ಎಂಬ ಶ್ಲೋಕದಲ್ಲಿ ವಿವರಿಸುತ್ತಾರೆ. ಕಣ್ಣು, ಕಿವಿ, ಬಾಯಿ, ಚರ್ಮ ಮುಂತಾದ ಇಂದ್ರಿಯಗಳ ಮೂಲಕ ಹೊರ ಪ

Part -57

ಮೂಲ : ಪಂಚೀಕೃತೇಭ್ಯೋ ಭೂತೇಭ್ಯಃ ಸ್ಥೂಲೇಭ್ಯಃ ಪೂರ್ವಕರ್ಮಣಾ | ಸಮುತ್ಪನ್ನಮಿದಂ ಸ್ಥೂಲಂ ಭೋಗಾಯತನಮಾತ್ಮನಃ | ಅವಸ್ಥಾ ಜಾಗರಸ್ತಸ್ಯ ಸ್ಥೂಲಾರ್ಥಾನುಭವೋ ಯತಃ || ೮೭ || ಪ್ರತಿಪದಾರ್ಥ : ಪಂಚೀಕೃತೇಭ್ಯಃ = ಪಂಚೀಕರಣವಾದ , ಸ್ಥೂಲೇಭ್ಯಃ = ಸ್ಥೂಲವಾದ , ಭೂತೇಭ್ಯಃ = ಭೂತಗಳಿಂದ , ಪೂರ್ವಕರ್ಮಣಾ = ಹಿಂದಿನ ಕರ್ಮಗಳಿಂದ , ಸಮುತ್ಪನ್ನಂ = ಚೆನ್ನಾಗಿ ಹುಟ್ಟಿದ , ಇದಂ ಸ್ಥೂಲಂ = ಈ ಸ್ಥೂಲ ( ಶರೀರವು ), ಆತ್ಮನಃ = ಆತ್ಮನ , ಭೋಗಾಯತನಂ = ಅನುಭವಕ್ಕೆ ಆಶ್ರಯವಾಗಿದೆ , ತಸ್ಯ = ಅದಕ್ಕೆ , ಜಾಗರಃ = ಜಾಗ್ರತ್ತು , ಅವಸ್ಥಾ = ಅವಸ್ಥೆಯಾಗಿದೆ , ಯತಃ = ಏಕೆಂದರೆ , ಸ್ಥೂಲ _ ಅರ್ಥ _ ಅನುಭವಃ = ಸ್ಥೂಲವಸ್ತುಗಳ ಅನುಭವವವು ಆಗುತ್ತದೆ . ತಾತ್ಪರ್ಯ : ಪಂಚೀಕೃತವಾದ ಸ್ಥೂಲಭೂತಗಳಿಂದ ಉತ್ಪನ್ನವಾಗಿರುವ ಈ ಸ್ಥೂಲಶರೀರವು ಪೂರ್ವಕರ್ಮಾನುಸಾರ ಹುಟ್ಟಿ ಆತ್ಮನ ಭೋಗಕ್ಕೆ ಆಶ್ರಯವಾಗಿದೆ . ಶರೀರದ ಎಚ್ಚರಿಕೆಯ ಅವಸ್ಥೆಯಲ್ಲಿ ಸ್ಥೂಲವಸ್ತುಗಳ ಅನುಭವವು ಉಂಟಾಗುತ್ತದೆ . ವಿವರಣೆ : ಈ ಶ್ಲೋಕವನ್ನು ಬಿಡಿಯಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ . ಪಂಚೀಕರಣ : ( ಪಂಚೀಕೃತೇಭ್ಯೋ ಭೂತೇಭ್ಯಃ ಸ್ಥೂಲೇಭ್ಯಃ ) = ಭೂಮಿ , ನೀರು , ಬೆಂಕಿ , ಗಾಳಿ , ಆಕಾಶ ಇವುಗಳನ್ನು ಜಗತ್ತಿನಲ್ಲಿ ಪಂಚಭೂತಗಳೆಂದು ಗುರುತಿಸಲಾಗಿದೆ . ಸೃಷ್ಟಿಪೂರ್ವದಲ್ಲಿ ( ಹಾಗೆ ಸುಮ್ಮನೆ : ಬಿಗ್ ಬ್ಯಾಂಗ್ ಗಿಂತಲೂ ಮೊದಲು ಎಂದುಕೊಳ್ಳೋಣ ) ಸೂಕ

Part -56

ಮೂಲ : ತ್ವಜ್ಮಾಂಸ _ ರುಧಿರ _ ಸ್ನಾಯು _ ಮೇದೋ _ ಮಜ್ಜಾಸ್ಥಿ _ ಸಂಕುಲಮ್ | ಪೂರ್ಣಂ ಮೂತ್ರಪುರೀಷಾಭ್ಯಾಂ ಸ್ಥೂಲಂ ನಿಂದ್ಯಮಿದಂ ವಪುಃ || ೮೬ || ಪ್ರತಿಪದಾರ್ಥ : ತ್ವಕ್ _ ಮಾಂಸ = ಚರ್ಮ _ ಮಾಂಸ , ರುಧಿರ = ರಕ್ತ , ಸ್ನಾಯು =( ಮಾಂಸ ) ಖಂಡ , ಮೇದಃ = ಕೊಬ್ಬು , ಮಜ್ಜಾ = ಮಜ್ಜೆ , ಅಸ್ಥಿ = ಮೂಳೆ , ಸಂಕುಲಮ್ = ( ಇವುಗಳಿಂದ ) ಕೂಡಿರುವ , ಮೂತ್ರ ಪುರೀಷಾಭ್ಯಾಂ = ಮಲಮೂತ್ರಗಳಿಂದ , ಪೂರ್ಣಂ = ತುಂಬಿರುವ , ಸ್ಥೂಲಂ = ಸ್ಥೂಲವು , ನಿದ್ಯಂ = ನಿಂದನೆಗೆ ಅರ್ಹವಾದ , ಇದಂ ವಪುಃ = ಈ ಶರೀರ . ತಾತ್ಪರ್ಯ : ಚರ್ಮ , ಮಾಂಸ , ರಕ್ತ , ಸ್ನಾಯು , ಕೊಬ್ಬು , ಮಜ್ಜೆ ಮತ್ತು ಮೂಳೆಗಳಿಂದ ಕೂಡಿ ಮಲಮೂತ್ರಾದಿಗಳಿಂದ ತುಂಬಿರುವ ದೇಹವೆಂಬ ಈ ಸ್ಥೂಲ ಶರೀರವು ಕೂಡ ನಿಂದನೆಗೆ ಅರ್ಹವಾದುದೇ ಆಗಿದೆ . ವಿವರಣೆ : ದೇಹಾಸಕ್ತಿಯ ನಿಂದನೆಯ ಬಳಿಕ ಸ್ಥೂಲ ಶರೀರವೂ ಹೇಗೆ ನಿಂದ್ಯಯೋಗ್ಯವಾಗಿದೆ ಎನ್ನುವುದನ್ನು ಈ ಶ್ಲೋಕದಲ್ಲಿ ವಿವರಿಸುತ್ತಾರೆ . ಚರ್ಮ , ಮಾಂಸ , ಮಜ್ಜೆ (Bone marrow fluid) ಇತ್ಯಾದಿಗಳಿಂದ ಕೂಡಿರುವ ದೇಹವನ್ನು ಸ್ಥೂಲ ಶರೀರವೆಂದು ತಿಳಿಯಲಾಗಿದೆ . ಇಂತಹ ಶರೀರವೂ ಮಲಮೂತ್ರಾದಿಗಳಿಂದ ತುಂಬಿರುವುದರಿಂದ ನಿಂದನೆಗೆ ಅರ್ಹವಾದುದಾಗಿದೆ . ಶರೀರದ ಮೇಲಿನ ಆಸಕ್ತಿಯನ್ನು ತ್ಯಜಿಸಲು ಇದು ಮುಖ್ಯ ಕಾರಣವಾಗುತ್ತದೆ ಎಂದು ಹೇಳುತ್ತಾರೆ . ಯಾರಿಗೆ ತನ್ನ ದೇಹದಿಂದ ಹುಟ್ಟುವ ಬೆವರಿನ ವಾಸನೆಯು ಬಾಧಿಸಿ ಅ

Part -55

  ಮೂಲ : ಮೋಹ ಏವ ಮಹಾಮೃತ್ಯುರ್ಮುಮುಕ್ಷೋರ್ವಪುರಾದಿಷು | ಮೋಹೋ ವಿನಿರ್ಜಿತೋ ಯೇನ ಸ ಮುಕ್ತಿಪದಮರ್ಹತಿ || ೮೫ || ಪ್ರತಿಪದಾರ್ಥ : ಮುಮುಕ್ಷೋಃ = ಮುಮುಕ್ಷುವಿಗೆ , ವಪುರಾದಿಷು = ಶರೀರವೇ ಮೊದಲಾದುವುಗಳಲ್ಲಿ , ಮೋಹಃ ಏವ = ಮೋಹವೇ , ಮಹಾಮೃತ್ಯುಃ = ಮಹಾಮರಣವು , ಯೇನ = ಯಾರಿಂದ , ಮೋಹಃ = ಮೋಹವು , ವಿನಿರ್ಜಿತಃ = ಜಯಿಸಲ್ಪಟ್ಟಿದೆಯೋ , ಸಃ = ಅವನು , ಮುಕ್ತಿಪದಂ = ಮೋಕ್ಷಸ್ವರೂಪವನ್ನು , ಅರ್ಹತಿ = ಹೊಂದಲು ಯೋಗ್ಯನಾಗುತ್ತಾನೆ . ತಾತ್ಪರ್ಯ : ಶರೀರದಿಂದ ಮೊದಲಾಗಿ ಹುಟ್ಟುವ ಮೋಹವೇ ಮುಮುಕ್ಷುವಿಗೆ ಮಹಾಮರಣವನ್ನು ತಂದಿಡುತ್ತದೆ . ಯಾರು ಅಂತಹ ಮೋಹವನ್ನು ಗೆಲ್ಲುತ್ತಾನೋ ಅವನು ಮೋಕ್ಷ ಸ್ವರೂಪವನ್ನು ಹೊಂದಲು ಅರ್ಹನಾಗುತ್ತಾನೆ . ವಿವರಣೆ : ದೇಹಾಸಕ್ತಿಯೇ ಮುಮುಕ್ಷುವಿಗೆ ಮೃತ್ಯುಸಮಾನವಾಗುತ್ತದೆ ಎಂದು ಹೇಳುತ್ತಾರೆ . ಶರೀರದಿಂದ ಮೊದಲಾಗಿ ಬ್ರಹ್ಮದವರೆಗಿನ ( ದೇಹಾದಿ ಬ್ರಹ್ಮಪರ್ಯಂತಮ್ ) ಎಲ್ಲ ಮಮಕಾರಗಳನ್ನು ಬಿಟ್ಟು , ಅದರ ಮೇಲಿನ ಮೋಹಾಕಾಂಕ್ಷೆಯನ್ನು ಯಾರು ತ್ಯಜಿಸುವನೋ ಆತನು ಮಾತ್ರ ಸಾಕ್ಷಾತ್ಕಾರಕ್ಕೆ ಅರ್ಹನಾಗುತ್ತಾನೆ , ಇನ್ಯಾರಿಂದಲೂ ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಕಡ್ಡಿ ಮುರಿದಂತೆ ಹೇಳಿರುತ್ತಾರೆ . ಮೃತನಾದವನು ಹೇಗೆ ನಿಶ್ಚಲನಾಗಿ ಬಿದ್ದಿರುತ್ತಾನೋ ಹಾಗೆ ಮೋಹದ ಪಾಶಕ್ಕೆ ಸಿಲುಕುವ ಮುಮುಕ್ಷುವು ಮರಣವನ್ನು ಹೊಂದಿದಂತಯೇ ಸರಿ ಎಂದು ವಿವರಿಸುತ್ತಾರೆ . ಯಾವುದೇ ವಸ್ತು ಅಥವಾ ವ್ಯಕ

Part - 54

  ಮೂಲ : ಶರೀರಪೋಷಣಾರ್ಥೀಸನ್ ಯ ಆತ್ಮಾನಂ ದಿದೃಕ್ಷತಿ | ಗ್ರಾಹಂ ದಾರು _ ಧಿಯಾ ಧೃತ್ವಾ ನದೀಂ ತರ್ತುಂ ಸ ಗಚ್ಛತಿ || ೮೪ || ಪ್ರತಿಪದಾರ್ಥ : ಯಃ = ಯಾರು , ಶರೀರಪೋಷಣಾರ್ಥೀಸನ್ = ದೇಹ ಪೋಷಣೆಯನ್ನು ಬಯಸುವವನಾಗಿ , ಆತ್ಮಾನಂ = ಆತ್ಮನನ್ನೂ , ದಿದೃಕ್ಷತಿ = ಕಾಣಲು ಅಪೇಕ್ಷಿಸುವವನೂ , ಸಃ = ಅವನು , ಗ್ರಾಹಂ = ಮೊಸಳೆಯನ್ನು , ದಾರು _ ಧಿಯಾ = ಮರವೆಂದು ತಿಳಿದು , ಧೃತ್ವಾ = ಹಿಡಿದುಕೊಂಡು , ನದೀಂ = ನದಿಯನ್ನು , ತರ್ತುಂ = ದಾಟಲು , ಗಚ್ಛತಿ = ಹೋಗುತ್ತಾನೆ . ತಾತ್ಪರ್ಯ : ಯಾರು ಶರೀರಪೋಷಣೆಯನ್ನು ಮಾಡುತ್ತಾ ಆತ್ಮಜ್ಞಾನವನ್ನೂ ಪಡೆಯಲು ಬಯಸುವನೋ , ಅವನು ಮೊಸಳೆಯನ್ನು ಮರವೆಂದು ತಿಳಿದು ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ನದಿಯನ್ನು ದಾಟಲು ಹೋದಂತಾಗುತ್ತದೆ . ವಿವರಣೆ : ದೇಹ ಪೋಷಣೆಯನ್ನು ಮಾಡುವುದರಿಂದ ಅದರೊಳಗಿರುವ ಆತ್ಮನನ್ನೂ ತೃಪ್ತಿಪಡಿಸಿದಂತಾಗುತ್ತದೆ ಎಂಬ ಭಾವನೆಯುಳ್ಳವರು ಸ್ವಸ್ವರೂಪವನ್ನು ತಿಳಿಯಲು ಶಕ್ತರಾಗುವುದಿಲ್ಲ , ಏಕೆಂದರೆ ಶರೀರ ತೃಪ್ತಿಯಿಂದ ಆತ್ಮನು ಪೋಷಿತನಾಗುವುದಿಲ್ಲ ಎಂದು ಸದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳು ತಮ್ಮ ವ್ಯಾಖ್ಯಾನದಲ್ಲಿ ಸ್ಪಷ್ಟಪಡಿಸಿರುತ್ತಾರೆ . ನದಿಯನ್ನು ದಾಟಲು ಬಯಸುವವರು ದೋಣಿ ಮುಂತಾದ ಸಾಧನವನ್ನು ಬಳಸುತ್ತಾರೆ . ಯಾವುದೂ ದೊರಕದಿದ್ದರೆ ಮರದ ದಿಮ್ಮಿಗಳನ್ನು ಉಪಯೋಗಿಸಿ ತೆಪ್ಪವನ್ನು ಕಟ್ಟುವ ಪದ್ಧತಿಯೂ ಇದೆ . ಕಷ್ಟಕಾಳದಲ್ಲಿ ಕಟ್ಟಿಗೆಯ ತು

Part - 53

ಮೂಲ : ಅನುಕ್ಷಣಂ ಯತ್ಪರಿಹೃತ್ಯ ಕೃತ್ಯಂ ಅನಾದ್ಯವಿದ್ಯಾಕೃತ _ ಬಂಧಮೋಕ್ಷಣಮ್ | ದೇಹಃ ಪರಾರ್ಥೋ s ಯಮಮುಷ್ಯ ಪೋಷಣೇ ಯಃ ಸಜ್ಜತೇ ಸ ಸ್ವಮನೇನ ಹಂತಿ || ೮೩ || ಪ್ರತಿಪದಾರ್ಥ : ಯತ್ = ಯಾವ , ಅನುಕ್ಷಣಂ = ಪ್ರತಿಕ್ಷಣವೂ , ಕೃತ್ಯಂ = ಮಾಡಬೇಕಾಗಿರುವ , ಅನಾದಿ _ ಅವಿದ್ಯಾಕೃತ _ ಬಂಧಮೋಕ್ಷಣಂ = ಅನಾದಿಯಾದ ಅವಿದ್ಯೆಯಿಂದ ಮಾಡಲ್ಪಟ್ಟ ಸಂಸಾರಬಂಧದ ಬಿಡುಗಡೆಯನ್ನು , ಪರಿಹೃತ್ಯ = ಬಿಟ್ಟು , ಅಯಃ ದೇಹಃ = ಈ ದೇಹವು , ಪರಾರ್ಥಃ = ಪರಪ್ರಯೋಜನವಾದ್ದು , ಯಃ = ಯಾವನು , ಅಮುಷ್ಯ = ಇದರ , ಪೋಷಣೇ = ಪೋಷಣೆಯಲ್ಲಿ , ಸಜ್ಜತೇ = ಆಸಕ್ತನಾಗುತ್ತಾನೋ , ಸಃ = ಅವನು , ಅನೇನ = ಇದರಿಂದ , ಸ್ವಂ = ತನ್ನನ್ನು , ಹಂತಿ = ಕೊಂದುಕೊಳ್ಳುತ್ತಾನೆ . ತಾತ್ಪರ್ಯ : ಪ್ರತಿಕ್ಷಣವೂ ಆಲೋಚಿಸಿ ವಿಷಯವಸ್ತುಗಳನ್ನು ತ್ಯಜಿಸಿ ಸಂಸಾರ ಬಂಧನದಿಂದ ಬಿಡುಗಡೆಗೆ ಯತ್ನಿಸದೆ ಬೇರೆಯವರಿಗೆ ಪ್ರಯೋಜನವಾಗುವ ಈ ಶರೀರದ ಪೋಷಣೆಯಲ್ಲೇ ಯಾರು ಆಸಕ್ತನಾಗುವನೋ , ಆತನು ಅದರಿಂದಲೇ ತನ್ನ ನಾಶಕ್ಕೆ ಕಾರಣವಾಗುತ್ತಾನೆ . ವಿವರಣೆ : ವಿಷಯವಸ್ತುಗಳಿಂದ ಸರ್ವಥಾ ವಿಮುಖರಾಗಬೇಕು ಎಂದು ಬಗೆಬಗೆಯಾಗಿ ತಿಳಿಸಿದ ಬಳಿಕ ಗುರುವು ದೇಹಾಸಕ್ತಿಯ ನಿಂದೆಗೆ ಮುಂದಾಗುತ್ತಾರೆ . ' ಅನುಕ್ಷಣ ' ಎಂಬಲ್ಲಿ ತತ್ ಕ್ಷಣ ಮತ್ತು ಪ್ರತಿಕ್ಷಣ ( ಯಾವಾಗಲೂ ) ಎಂಬ ಎರಡು ಅರ್ಥವನ್ನೂ ಕಲ್ಪಿಸಿಕೊಳ್ಳಬಹುದು ಎಂದು ವ್ಯಾಖ್ಯಾನಕಾರರು ಹೇಳಿರುತ್ತಾರೆ . ವಿಷಯದ