ಪೋಸ್ಟ್‌ಗಳು

ನವೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾಗ -೧೭

मूलम् - ಮೂಲ श्रोत्रियोऽवृजिनोऽकामहतो यो ब्र्ह्मवित्तमः । ब्रह्मण्युपरतः शान्तो निरिन्धन इवानलः। अहेतुक-दयासिन्धुः बन्धुरानमतां सताम्॥३४॥ ಶ್ರೋತ್ರಿಯೋಽವೃಜಿನೋಽಕಾಮಹತೋ ಯೋ ಬ್ರಹ್ಮವಿತ್ತಮಃ| ಬ್ರಹ್ಮಣ್ಯುಪರತಃ ಶಾಂತೋ ನಿರಿಂಧನ ಇವಾನಲಃ | ಅಹೇತುಕ-ದಯಾಸಿಂಧುರ್ಬಂಧುರಾನಮತಾಂ ಸತಾಮ್ ||೩೪|| ಪ್ರತಿಪದಾರ್ಥ: (ಯಃ =ಯಾರು, ಶ್ರೋತ್ರಿಯೋ=ಶ್ರೋತ್ರಿಯನೋ(ಶಾಸ್ತ್ರಾರ್ಥಗಳ ವಿವೇಚನೆಯುಳ್ಳವನು), ಅವೃಜಿನಃ=ಪಾಪವಿಲ್ಲದವನು, ಅಕಾಮಹತಃ=ಬಯಕೆಗಳಿಲ್ಲದವನು,  ಬ್ರಹ್ಮವಿತ್ತಮಃ=ಜ್ಞಾನಿಗಳಲ್ಲಿ ಶ್ರೇಷ್ಠನು, ಬ್ರಹ್ಮಣಿ=ಬ್ರಹ್ಮದಲ್ಲಿ, ಉಪರತಃ=ನೆಲಸಿರುವವನು, ನಿರಿಂಧನಃ ಅನಲಃ ಇವ = ಉರುವಲಿಲ್ಲದ ಬೆಂಕಿಯಂತೆ,  ಶಾಂತಃ= ಶಾಂತನೂ, ಅಹೇತುಕ ದಯಾಸಿಂಧುಃ=ಯಾವ ನಿಮಿತ್ತವೂ ಇಲ್ಲದ ದಯಾಸಿಂಧುವೂ, ಆನಮತಾಂ ಸತಾಮ್= ನಮಿಸುತ್ತಿರುವ ಸತ್ಪುರುಷರಿಗೆ, ಬಂಧುಃ = ಬಾಂಧವನೂ..... (ಆಗಿರುವವನು) ) ತಾತ್ಪರ್ಯ : ಯಾರು ಶ್ರೋತ್ರಿಯನೋ, ಪಾಪರಹಿತನೋ, ಬಯಕೆಗಳೇ ಇಲ್ಲದವನೋ, ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠನೋ, ಕೇವಲ ಬ್ರಹ್ಮದಲ್ಲಿ ಮನಸನ್ನು ನೆಟ್ಟಿರುವವನೋ, ಕಟ್ಟಿಗೆಯಲ್ಲಿ ಉರಿದು ಆರಿಹೋದ ಬೆಂಕಿಯಂತೆ (ಉರುವಲೇ ಇಲ್ಲದ) ಶಾಂತನಾಗಿರುವವನೂ, ಯಾವ ನಿಮಿತ್ತವೂ ಇಲ್ಲದೆ ದಯಾಸಿಂಧುವಾಗಿರುವವನೋ, ಶರಣು ಬಂದ ಸಜ್ಜನರಿಗೆ ಬಂಧುವಂತಿರುವವನೋ .....) ವಿವರಣೆ : ಜ್ಞಾನಾರ್ಥಿಯಾಗಿ ಗುರುವಿನ ಬಳಿಸಾರಬೇಕು ಎಂದು ತಿಳಿಸಿದ ನಂ

ಭಾಗ -೧೬

मूलम्  - ಮೂಲ मोक्षकारणसामग्र्यां भक्तिरेव गरियसी । स्वस्वरूपानुसन्धानं भक्तिरित्यभिधीयते ॥३२॥ ಮೋಕ್ಷಕಾರಣಸಾಮಗ್ರ್ಯಾಂ ಭಕ್ತಿರೇವ ಗರೀಯಸೀ | ಸ್ವಸ್ವರೂಪಾನುಸಂಧಾನಂ ಭಕ್ತಿರಿತ್ಯಭಿಧೀಯತೇ ||೩೨|| ಪ್ರತಿಪದಾರ್ಥ :- (ಮೋಕ್ಷಕಾರಣ = ಬಿಡುಗಡೆಗೆ ಕಾರಣವಾಗಿರುವ, ಸಾಮಗ್ರ್ಯಾಂ= ಸಲಕರಣೆಗಳಲ್ಲಿ(ಸಾಧನಗಳಲ್ಲಿ), ಭಕ್ತಿಃ ಏವ = ಭಕ್ತಿಯೇ, ಗರೀಯಸೀ = ದೊಡ್ಡದು(ಶ್ರೇಷ್ಠವಾದುದು). ಸ್ವಸ್ವರೂಪಾನುಸಂಧಾನಂ = ತನ್ನನ್ನುತಾನು ತಿಳಿಯುವುದು, ಭಕ್ತಿಃ ಇತಿ= ಭಕ್ತಿಯೆಂದು, ಅಭಿಧೀಯತೇ = ಹೇಳಲ್ಪಡುತ್ತದೆ ) ತಾತ್ಪರ್ಯ : ಮೋಕ್ಷಕ್ಕೆ (ಬಿಡುಗಡೆಗೆ) ಸಹಾಯಕವಾಗಿರುವ ಸಾಧನ-ಸಲಕರಣೆಗಳಲ್ಲಿ ಭಕ್ತಿಯೂ ಸೇರಿದ್ದು ಇದೇ ಶ್ರೇಷ್ಠವಾದುದಾಗಿರುತ್ತದೆ. ತನ್ನ ನಿಜವಾದ ಸ್ವರೂಪವನ್ನು , ತನ್ನತನವನ್ನು ತಿಳಿದುಕೊಳ್ಳುವುದೇ ಭಕ್ತಿಯೆಂದು ಹೇಳಲ್ಪಟ್ಟಿದೆ. ವಿವರಣೆ : ಇಹದ ಬಂಧನದಿಂದ ಬಿಡಿಸಿಕೊಂಡು ಆತ್ಮಜ್ಞಾನವನ್ನು ಪಡೆಯಲು ಸಾಧನ ಚತುಷ್ಟಯಗಳ ಅಗತ್ಯವನ್ನು ಈಗಾಗಲೇ ವಿವರವಾಗಿ ತಿಳಿದಿದ್ದೇವೆ. ಇದರ ಜೊತೆಗೆ ಭಕ್ತಿಯೂ ಸಹ ತುಂಬ ಹಿರಿದಾದುದು ಎಂದು ಆಚಾರ್ಯರು ಹೇಳುತ್ತಾರೆ. ’ ಭಕ್ತಿ’ ಎಂದರೆ, ತನ್ಮಯರಾಗಿ ಫಲಾಪೇಕ್ಷೆಯಿಂದ ಮಾಡುವ ಸಗುಣ ಬ್ರಹ್ಮೋಪಾಸನೆಯಾಗಲೀ, ನಿತ್ಯಕರ್ಮಾನುಷ್ಠಾನಗಳಾಗಲೀ ಅಥವಾ ಇನ್ಯಾವುದನ್ನೋ ಕುರಿತು ಚಿಂತಿಸುವುದಾಗಲೀ ಅಲ್ಲದೆ ಕೇವಲ ತನ್ನನ್ನು ತಾನು ತಿಳಿಯುವುದು ಅಥವಾ ತನ್ನತನದ ಹುರುಳು-ತಿರುಳನ್ನು