ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Part - 69

ಮೂಲ : ಅಂಧತ್ವ _ ಮಂದತ್ವ _ ಪಟುತ್ವ _ ಧರ್ಮಾಃ ಸೌಗುಣ್ಯ _ ವೈಗುಣ್ಯ _ ವಶಾದ್ಧಿ ಚಕ್ಷುಷಃ | ಬಾಧಿರ್ಯ _ ಮೂಕತ್ವ _ ಮುಖಾಸ್ತಥೈವ ಶ್ರೋತ್ರಾದಿಧರ್ಮಾ ನ ತು ವೇತ್ತುರಾತ್ಮನಃ ||೧೦೦|| ಪ್ರತಿಪದಾರ್ಥ : ಅಂಧತ್ವ = ಕುರುಡುತನ , ಮಂದತ್ವ = ಮಂದನೋಟ , ಪಟುತ್ವ = ಚುರುಕು ನೋಟ , ಧರ್ಮಾಃ = ಇವೇ ಮೊದಲಾದ ಧರ್ಮಗಳು ; ಚಕ್ಷುಷಃ = ಕಣ್ಣಿನ , ಸೌಗುಣ್ಯ = ಉತ್ತಮವಾಗಿರುವುದು , ವೈಗುಣ್ಯ = ಅವಗುಣ , ವಶಾತ್ ಹಿ = ಇವುಗಳಿಂದಲೇ ಉಂಟಾಗುತ್ತದೆ ; ತಥಾ ಏವ = ಹಾಗೆಯೇ , ಬಾಧಿರ್ಯ _ ಮೂಕತ್ವ - ಮುಖಾಃ = ಕಿವುಡು ಮೂಕತನ ಮೊದಲಾದವು , ಶ್ರೋತ್ರಾದಿ ಧರ್ಮಾಃ = ಕಿವಿಯೇ ಮೊದಲಾದವುಗಳ ಧರ್ಮವು , ವೇತ್ತುಃ = ಜ್ಞಾತೃವಾದ , ಆತ್ಮನಃ = ಆತ್ಮನ , ನ ತು = ಧರ್ಮವಲ್ಲ . ತಾತ್ಪರ್ಯ : ಕಣ್ಣಿನ ಸೌಗುಣ್ಯದಿಂದ ತೀಕ್ಷ್ಣತ್ವವೂ ವೈಗುಣ್ಯದಿಂದ ಕುರುಡುತನ ಹಾಗೂ ಮಂದತ್ವವೂ ಉಂಟಾಗುತ್ತದೆ . ಹಾಗೆಯೇ ಕಿವುಡು , ಮೂಕತನ ಮೊದಲಾದವು ಕಿವಿ , ವಾಗಿಂದ್ರಿಗಳ ಧರ್ಮವೇ ಹೊರತು ಜ್ಞಾತೃವಾದ ಆತ್ಮನ ಧರ್ಮವಲ್ಲ . ವಿವರಣೆ : ಕಠೋಪನಿಷತ್ತಿನಲ್ಲಿ ' ಸೂರ್ಯೋ ಯಥಾ ಸರ್ವಲೋಕಸ್ಯ ಚಕ್ಷುರ್ನ ಲಿಪ್ಯತೇ ಚಾಕ್ಷುಷೈರ್ಬಾಹ್ಯದೋಷೈಃ | ಏಕಸ್ತಥಾ ಸರ್ವಭೂತಾಂತರಾತ್ಮಾ ನ ಲಿಪ್ಯತೇ ಲೋಕ ದುಃಖೇನ ಬಾಹ್ಯಃ || ‘ ಎಂಬ ವಾಕ್ಯವು ಬರುತ್ತದೆ . ಎಲ್ಲ ಲೋಕಗಳನ್ನು ತನ್ನ ದಿವ್ಯ ತೇಜಸ್ಸಿನಿಂದ ನೋಡುವ ಅಂದರೆ ಬೆಳಗುವ ಸೂರ್ಯನಿಗೆ ಯಾವ ಲೋಕದಲ್ಲಿ ಸಂಭವಿಸುವ ಗು