ಪೋಸ್ಟ್‌ಗಳು

2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾಗ ೨೨

मूलम्-ಮೂಲ विद्वान् स तस्मा उपसत्तिमीयुषे मुमुक्षवे साधु यथोक्तकारिणे। प्रशान्तचित्ताय शमान्विताय तत्वोपदेशं कृपयैव कुर्यात् ॥४३॥ ವಿದ್ವಾನ್ ಸ ತಸ್ಮಾ ಉಪಸತ್ತಿಮೀಯುಷೇ ಮುಮುಕ್ಷವೇ ಸಾಧು ಯಥೋಕ್ತಕಾರಿಣೇ | ಪ್ರಶಾಂತಚಿತ್ತಾಯ ಶಮಾನ್ವಿತಾಯ ತತ್ವೋಪದೇಶಂ ಕೃಪಯೈವ ಕುರ್ಯಾತ್ |೪೩ | ಪ್ರತಿಪದಾರ್ಥ :- (ಸಃ ವಿದ್ವಾನ್ = ಆ ವಿದ್ವಾಂಸನು, ಉಪಸತ್ತಿಮ್ ಈಯುಷೇ = ತಿಳಿವನ್ನು ಬಯಸಿರುವ, ಮುಮುಕ್ಷವೇ = ಮುಮುಕ್ಷವಾದ, ಸಾಧು-ಯಥೋಕ್ತ-ಕಾರಿಣೇ = ಹೇಳಿದಂತೆ ಸರಿಯಾಗಿ ನೆಡೆಯುವ(ಮಾಡುವ), ಪ್ರಶಾಂತ ಚಿತ್ತಾಯ = ನಿರ್ಮಲ ಮನಸ್ಕನಾದ, ಶಮಾನ್ವಿತಾಯ = ಶಮದಮಾದಿ ಗುಣಗಳಿಂದ ಸಂಪನ್ನನಾದ, ತಸ್ಮೈ = ಆ ಅಪೇಕ್ಷಿಗೆ, ಕೃಪಯಾ ಏವ = ಕರುಣೆಯಿಂದಲೇ, ತತ್ವೋಪದೇಶಂ -ಕುರ್ಯಾತ್ = ತತ್ವೋಪದೇಶವನ್ನು ಮಾಡಬೇಕು ) ತಾತ್ಪರ್ಯ:- ಬ್ರಹ್ಮಜ್ಞಾನಿಯಾದ ಗುರುವು ಉಪದೇಶವನ್ನು ಬಯಸುತ್ತಿರುವ, ಶಮಾದಿ ಗುಣಗಳಿಂದ ಕೂಡಿರುವ , ಹೇಳಿದಂತೆ ಸರಿಯಾಗಿ ನೆಡೆಯುವ, ಒಳ್ಳೆಯ ಮನಸಿನವನಾದ , ಮುಮುಕ್ಷವಾದ ಜ್ಞಾನಾಪೇಕ್ಷಿಗೆ ಕರುಣೆಯಿಂದ ಕೃಪೆತೋರಿ ತತ್ವೋಪದೇಶವನ್ನು ಮಾಡಬೇಕು. ವಿವರಣೆ :- ಜ್ಞಾನೋಪದೇಶವನ್ನು ಬಯಸಿ ಬರುವ ಅಪೇಕ್ಷಿಯನ್ನು ಕರುಣೆಯಿಂದ ಶಿಷ್ಯನನ್ನಾಗಿ ಸ್ವೀಕರಿಸಿ ಆತನಿಗೆ ತತ್ವೋಪದೇಶವನ್ನು ಬ್ರಹ್ಮವಿದನಾದ ಗುರುವು ಮಾಡಬೇಕು ಎಂದು ಆಚಾರ್ಯರು ಈ ಶ್ಲೋಕದಲ್ಲಿ ಹೇಳಿರುತ್ತಾರೆ. ಪ್ರಕರಣದಲ್ಲಿ ಬರುವ ವಿಚಾರಗಳು ಗುರು-

ಭಾಗ ೨೧

मूलम्-ಮೂಲ कथं तरेयं भवसिन्धुमेतं का  वा गतिर्मे कतमोस्तुपायः । जाने न किञ्चित्कृपयाव मां  प्रभो संसारदुःख-क्षतिमानतुष्व ॥४१॥ ಕಥಂ ತರೇಯಂ ಭವಸಿಂಧುಮೇತಂ ಕಾ ವಾ ಗತಿರ್ಮೇ ಕತಮೋಽಸ್ತ್ಯುಪಾಯಃ | ಜಾನೇ ನ ಕಿಂಚಿತ್ ಕೃಪಯಾವ ಮಾಂ ಪ್ರಭೋ ಸಂಸಾರ ದುಃಖ -ಕ್ಷತಿಮಾತನುಷ್ವ ||೪೧|| ಪ್ರತಿಪದಾರ್ಥ : (ಏತಂ ಭವಸಿಂಧುಂ = ಈ ಸಂಸಾರಸಾಗರವನ್ನು,  ಕಥಂ ತರೇಯಂ = ಹೇಗೆ ದಾಟಬಲ್ಲೆನು ? , ಮೇ =ನನಗೆ, ಗತಿಃ=ದಾರಿಯು, ಕಾ ವಾ =ಯಾವುದು ?, ಕತಮಃ = ಯಾವ, ಉಪಾಯಃ ಅಸ್ತಿ = ಉಪಾಯವಿರುವುದು ?, ಕಿಂಚಿತ್ = ಯಾವುದನ್ನೂ , ನ ಜಾನೇ = ಅರಿಯೆನು, ಪ್ರಭೋ = ಗುರುವೆ, ಮಾಂ=ನನ್ನನ್ನು, ಕೃಪಯಾ = ಕೃಪೆತೋರಿ, ಅವ = ಕಾಪಾಡು, ಸಂಸಾರದುಃಖ-ಕ್ಷತಿಂ-ಆತನುಷ್ವ = ಸಂಸಾರದುಃಖವನ್ನು ನಾಶಮಾಡು ). ತಾತ್ಪರ್ಯ :  ಈ ಸಂಸಾರಸಾಗರವನ್ನು ಹೇಗೆ ದಾಟಬಲ್ಲೆನು ? ನನಗೆ ದಾರಿ ಯಾವುದು ? ಮೋಕ್ಷೋಪಾಯಗಳು ಯಾವುದು ? ಇದ್ಯಾವುದನ್ನೂ ನಾನರಿಯೆನು. ಹೇ ಗುರುವೆ ನನ್ನನ್ನು ಕೃಪೆತೋರಿ ಕಾಪಾಡು. ಈ ಸಂಸಾರದುಃಖವನ್ನು ನಾಶಮಾಡು. ವಿವರಣೆ : ಶಿಷ್ಯನು ಗುರುವಿನ ಮುಂದೆ ಜ್ಞಾನೋಪದೇಶವನ್ನು ನೀಡುವಂತೆ ಬೇಡಿಕೊಂಡ ನಂತರ ತನ್ನ ಭಯವನ್ನು ಅಥವಾ ಭೀತಿಯನ್ನು ಗುರುವಿನ ಮುಂದೆ ಪ್ರಕಟಪಡಿಸುತ್ತಾನೆ. ಶಿಷ್ಯನಿಗೆ ಸಂಸಾರಸಾಗರವನ್ನು ದಾಟುವುದು ಹೇಗೆ ? ಎಂಬ ಭೀತಿಯಿದೆ. ಸಾಧನ ಚತುಷ್ಟಯ ಸಂಪನ್ನನಾಗಿದ್ದರೂ ಉಪದೇಶವಾಗದ ಹೊರತು ಜ್ಞಾನದ ಹಿರಿ

ಭಾಗ - ೨೦

मूलम् - ಮೂಲ: अयं स्व्भावस्स्व्त एव यत्पर श्रमापनोदप्रवणं महात्मनाम् । सुधांशुरेष स्वयमर्क - कर्कश-प्रभाभितत्पा-मवति क्षितिं किल ॥೩೯। ಅಯಂ ಸ್ವಭಾವಃ ಸ್ವತ ಏವ ಯತ್ಪರ-ಶ್ರಮಾಪನೋದ -ಪ್ರವಣಂ  ಮಹಾತ್ಮನಾಮ್ | ಸುಧಾಂಶುರೇಷ ಸ್ವಯಮರ್ಕ-ಕರ್ಕಶ-ಪ್ರಭಾಽಭಿತಪ್ತಾಮವತಿ ಕ್ಷಿತಿಂ ಕಿಲ ||೩೯|| ಪ್ರತಿಪದಾರ್ಥ : (ಸ್ವತಃ ಏವ = ತಾವಾಗಿಯೇ, ಪರಶ್ರಮಾಪನೋದ-ಪ್ರವಣಂ ಯತ್ = ಇತರರ ಕಷ್ಟ(ಶ್ರಮ)ಪರಿಹಾರದಲ್ಲಿ ಪ್ರವೃತ್ತಿಯು ಯಾವುದೋ, ಅಯಂ = ಇದು ಮಹಾತ್ಮರ, ಸ್ವಭಾವಃ = ಸಹಜಗುಣ, ಅರ್ಕ-ಕರ್ಕಶಪ್ರಭಾ-ಅಭಿತಪ್ತಾಂ = ಸೂರ್ಯನ ಪ್ರಖರವಾದ ಬಿಸಿಲಿನಿಂದ ಬೆಂದಿರುವ, ಕ್ಷಿತಿಂ = ಭೂಮಿಯನ್ನು, ಏಷಃ ಸುಧಾಂಶುಃ = ಈ ಚಂದ್ರಮನು, ಸ್ವಯಂ = ತಾನೇ, ಅವತಿ ಕಿಲ = ರಕ್ಷಿಸುವನಲ್ಲವೆ ? ) ತಾತ್ಪರ್ಯ : ಇತರರ ಕಷ್ಟವನ್ನು, ಬೇನೆಗಳನ್ನು ಪರಿಹರಿಸುವುದರಲ್ಲಿ ತಾವಾಗಿಯೇ ಮುನ್ನುಗುವುದು ಮುಂದಾಲೋಚಿಸುವುದು ಮಹಾತ್ಮರು ಜ್ಞಾನಿಗಳೆನಿಸಿಕೊಂಡವರ ಸಹಜಗುಣವು.  ನೇಸರನ ತುಂಬ ಚುರುಕಾದ ಬಿಸಿಲಿನಿಂದ ಬೇಯುವ ಭೂಮಿಯನ್ನು ತಿಂಗಳನು ತಾನೇ ತನ್ನ  ಬೆಳಕಿನಿಂದ ತಂಪಾಗಿಸುವುದಿಲ್ಲವೆ ? . ವಿವರಣೆ : ಕಬ್ಬಿನಲ್ಲಿ ಸಿಹಿಯು ಏಕಿರಬೇಕು ಎಂಬ ಪ್ರಶ್ನೆಯೇ ಅಸಂಗತವಾಗಿಬಿಡುತ್ತದೆ. ಸಕ್ಕರೆಯಲ್ಲಿ ಸಿಹಿಯ ಕಾರಣವನ್ನು ಹುಡುಕಿದಂತೆ !.  ಕಬ್ಬಿನಲ್ಲಿ ಸಿಹಿಯು ಇರುವುದು ಹುಟ್ಟಿನಿಂದಲೇ ಬಂದುದಾಗಿರುತ್ತದೆ.  ಹಾಗೆಯೇ ಬ್ರಹ್ಮಜ್ಞಾನಿಗಳೆ

ಭಾಗ-೧೯

मूलम् - ಮೂಲ दुर्वारसंसारदवाग्नितप्तं दोधूयमानं दुरदृष्टवातैः । भीतं प्रसन्नं परिपाहि मृत्योः शरण्यमन्यं यदहं न जाने ॥३८॥ ದುರ್ವಾರ-ಸಂಸಾರ-ದವಾಗ್ನಿತಪ್ತಂ ದೋಧೂಯಮಾನಂ ದುರದೃಷ್ಟವಾತೈಃ | ಭೀತಂ ಪ್ರಪನ್ನಂ ಪರಿಪಾಹಿ ಮೃತ್ಯೋಃ ಶರಣ್ಯಮನ್ಯಂ ಯದಹಂ ನ ಜಾನೇ ||೩೭|| ಪ್ರತಿಪದಾರ್ಥ :  (ಯತ್ = ಯಾವ ಕಾರಣದಿಂದ, ಅಹಂ =ನಾನು, ಅನ್ಯಂ ಶರಣ್ಯಂ= ಬೇರೆ ಗುರುವನ್ನು(ಕಾಯುವವನನ್ನು) , ನ ಜಾನೇ=ಅರಿಯೆನೊ , (ಹೀಗಾಗಿ) ದುರ್ವಾರ-ಸಂಸಾರ-ದವಾಗ್ನಿತಪ್ತಂ = ಬಗೆಹರಿಸಲು ಆಗದಿರುವ ಬದುಕಿನ ಜಂಜಡಗಳೆಂಬ ಕಾಳ್ಗಿಚ್ಚಿನಿಂದ ಬೆಂದಿರುವ (ನೊಂದಿರುವ), ದುರದೃಷ್ಟವಾತೈಃ = ದುರದೃಷ್ಟವೆಂಬ ಬಿರುಗಾಳಿಯಿಂದ , ದೋಧೂಯಮಾನಂ = ಅದುರುತ್ತಿರುವ(ಕಂಪಿಸುತ್ತಿರುವ), ಭೀತಂ = ಹೆದರಿರುವ, ಪ್ರಪನ್ನಂ = ಶರಣು ಬಂದಿರುವ, (ನನ್ನನ್ನು) ಮೃತ್ಯೋಃ = ಇಂತಹ ಸಾವಿನಿಂದ, ಪರಿಪಾಹಿ = ಕಾಪಾಡು). ತಾತ್ಪರ್ಯ: ಪರಿಹರಿಸಲು ಆಗದಿರುವ ಸಂಸಾರವೆಂಬ ಜಂಜಡಗಳ ಕಾಳ್ಗಿಚ್ಚಿನಿಂದ ಬೆಂದು-ನೊಂದು ದುರದೃಷ್ಟವೆಂಬ ಬಿರುಗಾಳಿಯಿಂದ ಅದುರಿ-ಬೆದರಿ ನಿನ್ನಲ್ಲಿಯೇ ಶರಣು ಬಂದಿರುವ ನನ್ನನ್ನು ಈ ಸಂಸಾರವೆಂಬ ಸಾವಿನ ಮನೆಯಿಂದ ಕಾಪಾಡು; ಏಕೆಂದರೆ ಬೇರೆ ಯಾವ ಗುರುವನ್ನೂ ರಕ್ಷಕನನ್ನೂ ನಾನರಿಯೆನು . ವಿವರಣೆ: ಆತ್ಮಜ್ಞಾನವನ್ನು ಅರಸಿ ಬರುವ ಶಿಷ್ಯನು ಗುರುವಿನ ಮುಂದೆ ನಿವೇದಿಸಿಕೊಳ್ಳುತ್ತಾ ’ನಿಮ್ಮನ್ನು ಬಿಟ್ಟರೆ ಬೇರಾರೂ ನನಗೆ ದಾರಿ ತೋರುವವರಿ

ಭಾಗ-೧೮

मूलम् = ಮೂಲ स्वामिन्नमस्ते नतलोकबन्धो  करुण्यसिन्धो पतितं भवाब्धौ । मामुद्धरात्मीयकटाक्षदृष्ट्या  ऋज्व्याऽतिकारुण्यसुधाभिवृष्ट्या ॥೩೬|| ಸ್ವಾಮಿನ್ನಮಸ್ತೇ ನತಲೋಕ ಬಂಧೋ ಕಾರುಣ್ಯಸಿಂಧೋ ಪತಿತಂ ಭವಾಬ್ಧೌ  | ಮಾಮುದ್ಧರಾತ್ಮೀಯ-ಕಟಾಕ್ಷದೃಷ್ಟ್ಯಾ ಋಜ್ವ್ಯಾಽತಿಕಾರುಣ್ಯ-ಸುಧಾಭಿವೃಷ್ಟ್ಯಾ || ೩೬|| ಪ್ರತಿಪದಾರ್ಥ: (ನತಲೋಕಬಂಧೋ =ನಮಿಸುತ್ತಿರುವ ಜನರ ಬಂಧುವೆ, ಕಾರುಣ್ಯ ಸಿಂಧೋ = ಕರುಣಾಸಾಗರನೆ, ಸ್ವಾಮಿನ್ = ಸ್ವಾಮಿಯೆ-ಗುರುವೆ, ತೇ =ನಿನಗೆ, ನಮಃ= ನಮನಗಳು ;  ಭವಾಬ್ಧೌ =ಸಂಸಾರಸಾಗರದಲ್ಲಿ , ಪತಿತಂ = ಬಿದ್ದಿರುವ-ನೊಂದಿರುವ, ಮಾಂ- ನನ್ನನ್ನು, ಋಜ್ವ್ಯಾ = ಸರಳವಾದ-ಒಳ್ಳೆಯದಾದ, ಅತಿಕಾರುಣ್ಯ -ಸುಧಾಭಿವೃಷ್ಟ್ಯಾ = ಕರುಣೆಯೆಂಬ ಅಮೃತವನ್ನು ಸುರಿಸುತ್ತಿರುವ, ಆತ್ಮೀಯ-ಕಟಾಕ್ಷ-ದೃಷ್ಟ್ಯಾ = ನಿನ್ನ ಅನುಗ್ರಹದ ದೃಷ್ಟಿಯಿಂದ, ಉದ್ಧರ = ಉಧ್ಧಾರಮಾಡು. ) ತಾತ್ಪರ್ಯ : ನಮಿಸುತ್ತಿರುವ ಜನಗಳ ಬಂಧುವೂ ಕರುಣಾಸಾಗರನೂ ಆದ ಗುರುವೇ ನಿನಗೆ ನಮಸ್ಕಾರವು. ಸಂಸಾರಸಾಗರದಲ್ಲಿ ಬಿದ್ದು ಭ್ರಮೆಗೊಳಗಾಗಿರುವ ನನ್ನನ್ನು ನಿನ್ನ ಕರುಣಾಮೃತವನ್ನು ಸುರಿಸುತ್ತಿರುವ ಕಣ್ಣುಗಳಿಂದ ದಿಟ್ಟಿಸಿ- ಅನುಗ್ರಹಿಸಿ ಉದ್ಧಾರಮಾಡು. ವಿವರಣೆ: ಜ್ಞಾನಾರ್ಥಿಯು ಬ್ರಹ್ಮದ ಅರಿವನ್ನು ಪಡೆಯುವ ವಿಷಯವನ್ನು ಮತ್ತು ಪರಿಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬ್ರಹ್ಮಜ್ಞಾನಿಯಾದ ಗುರುವಿನ ಬಳಿಸಾರಿಬೇಕು ಎಂದು ಆಚಾರ್ಯರು ಹೇ