ಪೋಸ್ಟ್‌ಗಳು

ಸೆಪ್ಟೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿವೇಕ ಚೂಡಾಮಣಿ -ಭಾಗ-೧೨

ಗ್ರಂಥದ ಮುಂದುವರಿದ ಭಾಗ विरज्य विषयव्रातात् दोषदृष्ट्या मुहुर्मुहुः । स्वलक्ष्ये नियतावस्था मनसः शम उच्यते ॥२२॥ ವಿರಜ್ಯವಿಷಯವ್ರಾತಾತ್ ದೊಷದೃಷ್ಟ್ಯಾ ಮುಹುರ್ಮುಹುಃ | (= ಭೋಗವಸ್ತುಗಳಲ್ಲಿರುವ ದೋಷಗಳನ್ನು ಮತ್ತೆ-ಮತ್ತೆ ಕಂಡು ಭೋಗ ವಿಷಯಾಸಕ್ತಿಯನ್ನು ಬಿಡುವುದು) ಸ್ವಲಕ್ಷ್ಯೇ ನಿಯತಾವಸ್ಥಾ ಮನಸಃ ಶಮ ಉಚ್ಯತೇ ||೨೨॥ (=ಗುರಿಯ ಸಾಧನೆಗೆ ಮನೋನಿಗ್ರಹವನ್ನಿಟ್ಟುಕೊಳ್ಳುವುದೆ ಶಮವು ) ಸಾಧನ ಚತುಷ್ಟಯದ ಮೂರನೆಯ ಸಾಧನದ ನಿರೂಪಣೆಯನ್ನು ಮಾಡುತ್ತಾ ’ಶಮದಮಾದಿ’ ಆರು ಸಂಪತ್ತುಗಳ ವಿಚಾರವನ್ನು ಶ್ರೀ ಶಂಕರರು ವಿವರಿಸುತ್ತಾರೆ. ಮೊದಲನೆಯದಾಗಿ ’ಶಮ’ :- ಭೋಗವಸ್ತುಗಳಲ್ಲಿ ಕಂಡುಬರುವ ದೋಷಗಳನ್ನು ಗ್ರಹಿಸಿ ಅವುಗಳಲ್ಲಿ ಜಿಗುಪ್ಸೆಯನ್ನು ಹೊಂದಿ ಆತ್ಮವಿಷಯದಲ್ಲಿ ಮಾತ್ರವೇ ಮನಸ್ಸನ್ನು ತಲ್ಲೀನಗೊಳಿಸಿಕೊಳ್ಳುವುದನ್ನು ’ಶಮ’ ಎಂದು ಹೇಳುತ್ತಾರೆ. ಮನಸ್ಸನ್ನು ಹತೋಟಿಯಲ್ಲಿಡುವುದು ಎಂದರೆ, ಇಂದ್ರಿಯಯಗಳನ್ನು ನಿಗ್ರಹಿಸುವುದು ಎಂದು ತಿಳಿಯಬೇಕಾಗುತ್ತದೆ. ಮುಖ್ಯವಾಗಿ ಜ್ಞಾನೇಂದ್ರಿಯಗಳು (ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ) ವಿಷಯವಸ್ತುವಿನ ಗೊಡವೆಗೆ ಹೋಗದಂತೆ ಹತೋಟಿಯಲ್ಲಿಟ್ಟುಳ್ಳುವುದು ಎಂದು ಅರ್ಥ. ಅಪೇಯಪಾನವು ಮನೆಯಲ್ಲಿಯೂ ಆರೋಗ್ಯಕ್ಕೆ ಹಾನಿಕಾರಕ ಹೊರಗಿನ ಅಂಗಡಿಯಲ್ಲೂ ಹಾನಿಕಾರಕವೆ !. ಜಾಗ ಬದಲಾದ ಮಾತ್ರಕ್ಕೆ ಅದರ ದೋಷಗುಣವೇನೂ ಬದಲಾಗುವುದಿಲ್ಲ. ದೋಷವನ್ನು ಗ್ರಹಿಸಿ ಒಟ್ಟಾರೆಯಾಗಿ ಭೋಗಲಾಲಸೆಯನ್ನು

ವಿವೇಕ ಚೂಡಾಮಣಿ - ಭಾಗ-೧೧

ಗ್ರಂಥದ ಮುಂದುವರಿದ ಭಾಗ तद्वैराग्यं जुगुप्सा या दर्शनश्रवणादिभिः । देहादिब्र्ह्मपर्यन्ते ह्यनित्ये भोगवस्तुनि ॥२१॥ ತದ್ವೈರಾಗ್ಯಂ ಜುಗುಪ್ಸಾ ಯಾ ದರ್ಶನಶ್ರವಣಾದಿಭಿಃ | (= ನೋಡುವುದು, ಕೇಳುವುದು ಮುಂತಾದವುಗಳಿಂದ ಹುಟ್ಟುವ ವೈರಾಗ್ಯ ) ದೇಹಾದಿಬ್ರಹ್ಮಪರ್ಯಂತೇ ಹ್ಯನಿತ್ಯೇ ಭೋಗವಸ್ತುನಿ ||೨೧|| (=ದೇಹದಿಂದ ಮೊದಲಾಗಿ ಬ್ರಹ್ಮದವರೆಗಿನ ಅನಿತ್ಯವಾದ ಭೋಗವಸ್ತುಗಳಲ್ಲಿ) ಬ್ರಹ್ಮವೇ ಸತ್ಯ ಜಗತ್ತು ಮಿಥ್ಯೆ ಎಂಬ ಧೃಡ ನಿಶ್ಚಯವು ಬಂದ ನಂತರ ಜಗತ್ತಿನ ವ್ಯಾವಹಾರಿಕ, ಪ್ರಾಪಂಚಿಕ ಭೋಗವಸ್ತುಗಳ ಬಗೆಗೆ ಜಿಗುಪ್ಸೆ ಅಥವಾ ಅನಾಸಕ್ತಿಯು ಹುಟ್ಟಬೇಕು ಮತ್ತು ಅಂತಹ ವೈರಾಗ್ಯದ ಭಾವವನ್ನು ಉಂಟುಮಾಡಿಕೊಳ್ಳಬೇಕು ಎಂದು ’ಇಹಾಮುತ್ರಫಲಭೋಗವೈರಾಗ್ಯ’ ಎಂಬ ಎರಡನೆಯ ಸಾಧನದಲ್ಲಿ ಶ್ರೀ ಶಂಕರರು ನಿರೂಪಿಸುತ್ತಾರೆ. ’ಇಹ’ ಎಂದರೆ ಈ ಜಗತ್ತಿನಲ್ಲಿ ದೇಹದ ಮೂಲಕ ಮೊದಲಾಗುವ ಎಲ್ಲಾ ಪ್ರಾಪಂಚಿಕ ಸುಖ-ಭೋಗಗಳ ಮೇಲಿನ ಜಿಗುಪ್ಸೆ ಎಂದಾಗುತ್ತದೆ. ವ್ಯಾವಹರಿಕ ಜಗತ್ತಿನಲ್ಲಿ ಆಕರ್ಷಣೆಗಳು, ಭೋಗಗಳು ಹುಟ್ಟುವುದೇ ದೇಹದ ಕರ್ಮೇಂದ್ರಿಯಗಳು, ಜ್ಞಾನೇಂದ್ರಿಯಗಳ ಮೂಲಕ ಎನ್ನುವಾಗ ಅಂತಹ ಎಲ್ಲಾ ಸುಖ-ಭೋಗಗಳ ಮೇಲಿನ ಆಸಕ್ತಿಯನ್ನು ಬಿಟ್ಟು ಕೇವಲಬ್ರಹ್ಮದಲ್ಲಿ ನಿಶ್ಚಯವಾಗುವುದು ಎಂದು ತಿಳಿಯಬೇಕಾಗುತ್ತದೆ. ’ಅಮುತ್ರ’ ಅಥವಾ ಪರಲೋಕ ಎಂದರೆ ನಮ್ಮ ಪುರಾಣಗಳಲ್ಲಿ ವರ್ಣಿಸಿರುವಂತೆ ಸಿಗಬಹುದಾದ ’ಸ್ವರ್ಗ’ ಸುಖ-ಭೋಗಗಳು.  ಸ್ವರ್ಗಸುಖವನ್ನೂ ತ್ಯಜಿಸ

ವಿವೇಕ ಚೂಡಾಮಣಿ - ಭಾಗ -೧೦

ಗ್ರಂಥದ ಮುಂದುವರಿದ ಭಾಗ:- साधनान्यत्र चत्वारि कथितानि मनीषिभिः । येषु सत्स्वेव सन्निष्ठा यदभावे न सिध्यति ॥१८॥ ಸಾಧನಾನ್ಯತ್ರ ಚತ್ವಾರಿ ಕಥಿತಾನಿ ಮನೀಷಿಭಿಃ | (= ಆತ್ಮವಿದ್ಯೆಯ ಸಾಧನಗಳು ನಾಲ್ಕು) ಯೇಷು ಸತ್ಸ್ವೇವ ಸನ್ನಿಷ್ಠಾ ಯದಭಾವೇ ನ ಸಿಧ್ಯತಿ ||೧೮|| (= ಸಾಧನಗಳಿದ್ದರೆ (=ಏವ) ಸಾಧನೆಯು ಸಾಧ್ಯ, ಇಲ್ಲದಿದ್ದರೆ ಇಲ್ಲ) ವಿಚಾರದಿಂದಲೇ ಜ್ಞಾನ ಎನ್ನುವುದನ್ನು ಈಗಾಗಲೇ ತಿಳಿದಿದ್ದೇವೆ. ಆತ್ಮವಿದ್ಯೆಯ ಸಿದ್ಧಿಗೆ ಇರುವ ಸಾಧನಗಳು ನಾಲ್ಕು . ಹೆಚ್ಚೆಂದರೂ ಇಷ್ಟೆ ಕಡಿಮೆಯೆಂದರೂ ಇಷ್ಟೆ ಎನ್ನುವುದು ಸೂಚಿತ. ನಾಲ್ಕು ಸಾಧನಗಳಿದ್ದರೆ ಆತ್ಮವಿದ್ಯೆಯು ಸಿದ್ಧಿಸುತ್ತದೆ ಮತ್ತು ಇವು ಇಲ್ಲದಿದ್ದರೆ ಸಿದ್ಧಿಯೂ ಇಲ್ಲ ಎಂಬರ್ಥದದಲ್ಲಿ ಹೇಳುತ್ತಾರೆ. ಇದೊಂದು ರೀತಿಯ ವ್ಯಾವರ್ತಕ ನಿಯಮ ಎನ್ನಬಹುದು. ಪಾಯಸಕ್ಕೆ ಮೆಣಸಿನಕಾಯಿ ಒಗ್ಗರಣೆ ಹಾಕುವುದು ಪಾಯಸದ ತಯಾರಿಕೆಯ ಸಾಧನಗಳಲ್ಲಿ ಇಲ್ಲ, ಹಾಗೂ ಒಗ್ಗರಣೆ ಹಾಕಿದರೆ ಪಾಯಸದ ಸಾಂಪ್ರದಾಯಿಕ ರುಚಿಯು ಕೆಡುತ್ತದೆ !. ಇಲ್ಲೂ ಕೂಡ ಇರುವುದು ನಾಲ್ಕೇ ಸಾಧನಗಳು. ಇದೇ ಕನಿಷ್ಠ ಮತ್ತು ಗರಿಷ್ಠ ಎನ್ನುವುದು ಸೂಚಿತ. ’ಮನೀಷಿಭಿಃ’ ಎಂಬಲ್ಲಿ ವೇದಜ್ಞಾನವುಳ್ಳವರು (ಶ್ರುತಿತಾತ್ಪರ್ಯ ಜ್ಞಾನವುಳ್ಳವರು) ಎಂದು ತಿಳಿಯಬೇಕು ಎನ್ನುವುದು ಸದ್ಗುರು ಚಂದ್ರಶೇಖರ ಭಾರತಿಗಳ ಒಕ್ಕಣೆ.  ಶ್ರುತಿಯ ಅವಲಂಬನೆಯಿಲ್ಲದೆ ಸಾಧಕರಿಗೆ ನಾಲ್ಕು ಸಾಧನಗಳ ವಿಚಾರವನ್ನು ತಿಳಿಯುವುದು ಮತ್ತು ಅನುಸರಿಸ