ಪೋಸ್ಟ್‌ಗಳು

ಆಗಸ್ಟ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿವೇಕ ಚೂಡಾಮಣಿ ಭಾಗ -೯

ಗ್ರಂಥದ ಮುಂದುವರಿದ ಭಾಗ अतो विचारः कर्तव्यो जिज्ञासोरात्मवस्तुनः | समासाध्य दयासिन्धुं गुरुं ब्रह्मविदुत्तमम् ||१५ ||  ಅತೋ ವಿಚಾರಃ ಕರ್ತವ್ಯೋ ಜಿಜ್ಞಾಸೋರಾತ್ಮವಸ್ತುನಃ | (=ಆತ್ಮವಿಚಾರ ಕರ್ತವ್ಯದ ಜಿಜ್ಞಾಸೆಗಾಗಿ ) ಸಮಾಸಾಧ್ಯ ದಯಾಸಿಂಧುಂ ಗುರುಂ ಬ್ರಹ್ಮವಿದುತ್ತಮಮ್ ||೧೫|| (= ಕರುಣಾಳುವೂ, ಬ್ರಹ್ಮಜ್ಞಾನಿಯೂ ಆಗಿರುವ ಗುರುವನ್ನು ಹೊಂದವುದು) ಆತ್ಮವಿದ್ಯೆಯ ಸಿದ್ಧಿಗಾಗಿ ಗುರುವಿನ ಬಳಿಗೆ ತೆರಳಬೇಕು ಎಂದು ಈ ಹಿಂದಿನ ಶ್ಲೋಕದಲ್ಲಿ ತಿಳಿದೆವು. ಇಂದಿನ ಕಾಲದಲ್ಲಿ ಗುರುಗಳೇನೋ ಸಾಕಷ್ಟು ಇರುವರು. ಗುರುಗಳ ಶಿಷ್ಯರೂ ಅಸಂಖ್ಯರಿದ್ದಾರೆ !. ಎಂತಹವರು ಗುರು ಎನ್ನಿಸಿಕೊಳ್ಳಲು ಅರ್ಹರಾಗುತ್ತಾರೆ ? ಎಂತಹ ಗುರುವಿನ ಶಿಷ್ಯರಾಗಿ ಆತ್ಮಾಭ್ಯಾಸವನ್ನು ಮೊದಲು ಮಾಡಬೇಕು? ಎಂಬ ’ಗೊಂದಲ’ಕ್ಕೆ ಶ್ರೀ ಶಂಕರರು ಮೇಲಿನ ಶ್ಲೋಕದ ಜೊತೆಗೆ ಮುಂದಿನ ಮೂರು ಶ್ಲೋಕಗಳ ಮೂಲಕ  ಪರಿಹಾರವನ್ನು ಒದಗಿಸುತ್ತಾರೆ. ಆಸಕ್ತನು ವಿಚಾರಾಧೀನನಾಗಿ ಆತ್ಮವಸ್ತುವಿನ ಜಿಜ್ಞಾಸೆಯೇ ತನ್ನ ಕರ್ತವ್ಯವೆಂದು ತಿಳಿದು ಯೋಗ್ಯ ಗುರುವನ್ನು ಹೊಂದಬೇಕು ಎಂದು ತಿಳಿಸುತ್ತಾರೆ. ’ದಯಾಸಿಂಧುಂ’ ಎಂದು ಹೇಳುವ ಮೂಲಕ ಅಧಿಕಾರಿಯು ಕರುಣೆಯ ಸಾಗರದಂತಿರಬೇಕು ಎಂದು ಸೂಚಿಸುತ್ತಾರೆ. ಜಾಣರಿಗೆ ಕಲಿಸುವುದು ಕಷ್ಟವೇನಲ್ಲ, ಆದರೆ ದಡ್ಡರಿಗೆ ತಾಳ್ಮೆಯಿಂದ ಮತ್ತು ಕರುಣೆಯಿಂದ ಹೇಳಿಕೊಡುವ ಅಧಿಕಾರಿಯು ಅಗತ್ಯ. ಒಂದು ಹನಿ ನೀರಿಗೂ ಸಮುದ್ರವು ಆಶ್ರಯವನ್ನು ನೀಡುತ

ವಿವೇಕ ಚೂಡಾಮಣಿ ಭಾಗ -೮

ಗ್ರಂಥದ ಮುಂದುವರಿದ ಭಾಗ अर्थस्य निश्चयो दृष्टो  विचारेण हितोक्तितः। न स्नानेन न दानेन प्राणायाम शतेनवा ॥१३॥ ಅರ್ಥಸ್ಯ ನಿಶ್ಚಯೋ ದೃಷ್ಟೋ ವಿಚಾರೇಣ ಹಿತೋಕ್ತಿತಃ| (= ಒಳ್ಳೆಯ ವಚನಗಳನ್ನು ಕೇಳಿ ವಿಚಾರಮಾಡುವುದರಿಂದಲೇ ಆತ್ಮಾರ್ಥ ನಿಶ್ಚಯವು) ನ ಸ್ನಾನೇನ ನ ದಾನೇನ ಪ್ರಾಣಾಯಾಮ ಶತೇನವಾ ||೧೨|| (=ಸ್ನಾನ, ದಾನ ಮತ್ತು ನೂರಾರು ಪ್ರಾಣಾಯಾಮಗಳಿಂದಲ್ಲ) ಸದ್ಗುರುಗಳಾದವರ ಒಳ್ಳೆಯ ಮಾತುಗಳನ್ನು , ಉಪದೇಶಗಳನ್ನು ಆಲಿಸುವುದರ ಜೊತೆಗೆ ಅಂತಹ ವಿಚಾರಗಳನ್ನು ಒರೆಗೆ ಹಚ್ಚಿ ತಿಳಿದುಕೊಂಡು ವಿವೆಚನೆಯಿಂದ ನಿರ್ಣಯಿಸಿಕೊಳ್ಳುವ ಆತ್ಮಾರ್ಥವು ಮಿಗಿಲಾದುದು. ಇಂತಹ ಆತ್ಮಾರ್ಥಜ್ಞಾನವು ಕೇವಲ ಸ್ನಾನ, ದಾನ ಮತ್ತು ನೂರಾರು ಬಾರಿ ಪ್ರಾಣಾಯಾಮಗಳನ್ನು ಮಾಡುವುದರಿಂದ ಸಿದ್ಧಿಸುವುದಿಲ್ಲ ಎಂದು ತಿಳಿಸುತ್ತಾರೆ. ಆಕ್ಷೇಪ : ’ವಸ್ತುಸಿದ್ಧಿರ್ವಿಚಾರೇಣ’ ಎಂದು ಈಗಾಗಲೇ ತಿಳಿದಿರುವುದರಿಂದ ಸದ್ಗುರುಗಳ ಆಪ್ತವಚನದ ಅಗತ್ಯವಿದೆಯೆ ? ಸಮಾಧಾನ :  ಹಗ್ಗವನ್ನೇ ಹಾವೆಂದು ತಿಳಿದು ಭ್ರಮೆಯಲ್ಲಿದ್ದಾಗ ವಾಸ್ತವದ ಅರಿವು ತಂತಾನೇ ಮೂಡುವುದು ಕಷ್ಟವಾಗುತ್ತದೆ. ಆಪ್ತರೊಬ್ಬರು ಹಿತವಾದ ಮಾತುಗಳಿಂದ ಸಂದರ್ಭವನ್ನು ವಿವರಿಸಿದಾಗ ಮನಸ್ಸು ತಿಳಿಯಾಗುತ್ತದೆ. ಭ್ರಮೆಯು ತೊಲಗುತ್ತದೆ. ಶ್ಲೋಕದ ಎರಡನೆಯ ವಾಕ್ಯವನ್ನು ಯೋಗಗುರು ’ಬಾಬಾ ರಾಮದೇವರು ’ ಗಮನಿಸಿದರೆ, ಬಹುಶಃ ಅವರಿಗೆ ಕಡುಕೋಪ ಬರಬಹುದು. ವೇದಾಂತದ ವಿಚಾರವೇ ಹಾಗೆ !. ಅರ್ಜುನನು ಮ

ವಿವೇಕ ಚೂಡಾಮಣಿ - ಭಾಗ ೭

ಗ್ರಂಥದ ಮುಂದುವರಿದ ಭಾಗ चित्तस्य शुद्धये कर्म न तु वस्तूपलब्धये । वस्तुसिद्धिर्विचरेण न  किञ्चित्   कर्मकोटिभिः ॥११॥  ಚಿತ್ತಸ್ಯ ಶುದ್ಧಯೇ ಕರ್ಮ ನ ತು ವಸ್ತೂಪಲಬ್ಧಯೇ | (=ಚಿತ್ತಶುದ್ಧಿಗಾಗಿ ಕರ್ಮ; ಆತ್ಮವಸ್ತು(ಜ್ಞಾನ)ವನ್ನು ಪಡೆಯಲು ಅಲ್ಲ) ವಸ್ತುಸಿದ್ಧಿರ್ವಿಚಾರೇಣ ನ ಕಿಂಚಿತ್ ಕರ್ಮಕೋಟಿಭಿಃ ||೧೧|| (=ವೈಚಾರಿಕತೆಯಿಂದ ಜ್ಞಾನ; ಕೋಟಿ ಕರ್ಮಾಚರಣೆಯಿಂದಲ್ಲ) ಕರ್ಮಗಳನ್ನು ಆಚರಿಸುವುದರಿಂದ ಮುಕ್ತಿಯಂತೂ ದೊರೆಯುವುದಿಲ್ಲ ಎಂದಾದಲ್ಲಿ ಅವುಗಳನ್ನು ಆಚರಿಸುವುದಾದರೂ ಏಕೆ ? ಎಂಬ ಪ್ರಶ್ನೆಗೆ ಮೇಲಿನ ಶ್ಲೋಕದ ಮೂಲಕ ಶಂಕರರು ಉತ್ತರವನ್ನು ತಿಳಿಸುತ್ತಾರೆ. ’ಚಿತ್ತಶುದ್ಧಿಗಾಗಿ ಕರ್ಮ’ ಎಂದು ಹೇಳುತ್ತಾರೆ. ಬುದ್ಧಿಗೆ ಆವರಿಸುವ ಭ್ರಮೆ ಅಥವಾ ಅಜ್ಞಾನವನ್ನು ತೊಡೆದುಹಾಕಲು ಕರ್ಮಗಳನ್ನು ಆಚರಿಸಬೇಕು ಎನ್ನುತ್ತಾರೆ. ಮೊದಲು ಅಜ್ಞಾನವನ್ನು ಕಳೆದುಕೊಂಡರೆ ಜ್ಞಾನದ ಮಾರ್ಗ ಯಾವುದು ಎಂದು ತಂತಾನೇ ಕಾಣಿಸುತ್ತದೆ. ಜ್ಞಾನಸಿದ್ಧಿಗೆ ಬೇಕಾಗುವ ಧೃಡತೆ, ಏಕಾಗ್ರತೆ, ಸಹಿಷ್ಣುತೆ ಇತ್ಯಾದಿಗಳು ಮಾಡುವ ಕರ್ಮದಿಂದ ನೆಲೆಗೊಳ್ಳುತ್ತವೆ ಮತ್ತು ಸಾಧನೆಯ ಹಾದಿಗೆ ದಾರಿದೀಪವಾಗುತ್ತದೆ. ಸಮಚಿತ್ತಕ್ಕಾಗಿ ಕರ್ಮವೇ ಹೊರತು ಆತ್ಮವಸ್ತುವನ್ನು ಅಥವಾ ಆತ್ಮಜ್ಞಾನವನ್ನು ಪಡೆಯಲು ಅಲ್ಲ ಎಂದು ಹೇಳುತ್ತಾರೆ. ಮೇರುಪರ್ವತವನ್ನು ಅಥವಾ ಎವರೆಸ್ಟ್ ಅನ್ನು ಏರಬೇಕೆನ್ನುವವರು ಅದಕ್ಕೆ ಬೇಕಾಗುವ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಬೇ

ವಿವೇಕ ಚೂಡಾಮಣಿ -ಭಾಗ ೬

ಗ್ರಂಥದ ಮುಂದುವರಿದ ಭಾಗ अतो विमुक्यै प्रयतेत विद्वान् सन्यस्त बाह्यार्थ सुखस्पृहसन् | संतं महातं समुपेत्य देशिकं तेनोपदिश्टार्थ समाहितात्मा ||८|| ಅತೋ ವಿಮುಕ್ತ್ಯೈ ಪ್ರಯತೇತ ವಿದ್ವಾನ್ ಸನ್ಯಸ್ತ ಬಾಹ್ಯಾರ್ಥ ಸುಖಸ್ಪೃಹಸನ್ | ಸಂತಂ ಮಹಾತಂ ಸಮುಪೇತ್ಯ ದೇಶಿಕಂ ತೇನೋಪದಿಷ್ಟಾರ್ಥ ಸಮಾಹಿತಾತ್ಮಾ ||೮|| ದ್ರವ್ಯದಿಂದ, ವಿತ್ತದಿಂದ ಫಲದ ಮೇಲೆ ಬಯಕೆಗಳು ಉಂಟಾಗಿ ಜ್ಞಾನವರ್ಧನೆಗೆ ಅಡಚಣೆಯಾಗುವುದರಿಂದ ತಿಳುವಳಿಕೆಯುಳ್ಳವರು ಜ್ಞಾನಮಾರ್ಗದಿಂದಲೇ ಮುಮುಕ್ಷುತ್ವಕ್ಕೆ ಯತ್ನಿಸಬೇಕು ಎಂದು ಶ್ರೀ ಶಂಕರರು ಹೇಳುತ್ತಾರೆ. ಮೇಲಿನ ಶ್ಲೋಕದ ಅರ್ಥವನ್ನು ಗಮನಿಸೋಣ. ಅತೋ ವಿಮುಕ್ತ್ಯೈ ಪ್ರಯತೇತ ವಿದ್ವಾನ್ (= ವಿವೇಕಿಯು ಮುಕ್ತಿಗಾಗಿ ಯತ್ನಿಸಬೇಕು) ಸನ್ಯಸ್ತ ಬಾಹ್ಯಾರ್ಥ ಸುಖಸ್ಪೃಹಸನ್ (= ಬಾಹ್ಯ ಸುಖಗಳ ಆಸೆಯನ್ನು ಮೊದಲು ಬಿಡಬೇಕು) ಸಂತಂ ಮಹಾತಂ ಸಮುಪೇತ್ಯ ದೇಶಿಕಮ್ (=ಮಹಾತ್ಮರಾದ ಗುರುಗಳ ಸಂಗವನ್ನು ಹೊಂದಬೇಕು) ತೇನೋಪದಿಷ್ಟಾರ್ಥ ಸಮಾಹಿತಾತ್ಮಾ  (=ತನ್ನ ಇಷ್ಟಾರ್ಥ ಸಿದ್ಧಿಗಾಗಿ ಯತ್ನಿಸಬೇಕು) ಕರ್ಮದಿಂದ , ಸಂಪತ್ತಿನಿಂದ ಮುಕ್ತಿಯು ದೊರಕುವುದಿಲ್ಲವಾದ್ದರಿಂದ ತಿಳುವಳಿಕೆಯುಳ್ಳವನು (ವಿದ್ವಾನ್) ಮಹಾತ್ಮರಾದ ಗುರುಗಳ ಸಂಗವನ್ನು ಹೊಂದಿ ಅವರ ಉಪದೇಶ ತತ್ತ್ವಗಳನ್ನು ಅರಿತು ಹೊರಗಿನ ಕ್ಷಣಿಕವಾದ ವಿಷಯಗಳ ಬಗೆಗೆ ಆಸಕ್ತಿಯನ್ನು ಬಿಟ್ಟು ಆತ್ಮಸಾಕ್ಷಾತ್ಕಾರಕ್ಕಾಗಿ ಯತ್ನಿಸಬೇಕು ಎಂಬುದು ಮೇಲಿನ ಶ್ಲೋಕದ ತಿರುಳು. ’ವಿದ

ವಿವೇಕ ಚೂಡಾಮಣಿ ಭಾಗ -೫

 ಗ್ರಂಥದ ಮುಂದುವರಿದ ಭಾಗ पठन्तु    शास्त्राणि  यजन्तु   देवान् कुर्वन्तु   कर्माणि  भजन्तु  देवताः । आत्मैक्य बोधेन विना विमुक्ति- र्न सिध्यति ब्रह्म शतान्तरेपि  ॥६॥ ಪಠಂತು ಶಾಸ್ತ್ರಾಣಿ ಯಜಂತು ದೇವಾನ್ ಕುರ್ವಂತು ಕರ್ಮಾಣಿ ಭಜಂತು ದೇವತಾಃ| ಆತ್ಮೈಕ್ಯ ಬೋಧೇನ ವಿನಾ ವಿಮುಕ್ತಿ- -ರ್ನ ಸಿಧ್ಯತಿ ಬ್ರಹ್ಮ ಶತಾಂತರೇಪಿ ||೬|| ಮುಕ್ತಿಯ ಮಹತ್ವವನ್ನು ತಿಳಿಸುತ್ತಾ ಶ್ರೀ ಶಂಕರರು ಮುಂದೆ ಬಹಳ ದಿಟ್ಟವಾದ ಧೀರವಾದ ಘೋಷಣೆಯನ್ನು ಮಾಡುತ್ತಾರೆ. ಮೇಲಿನ ಶ್ಲೋಕದ ವಿವರಣೆಯನ್ನು ತಿಳಿಯುವುದರ ಮೂಲಕ ಆ ಉದ್ಘೋಷವೇನು ಎಂಬುದನ್ನು ಅರಿಯೋಣ. ಪಠಂತು ಶಾಸ್ತ್ರಾಣಿ (=ಶಾಸ್ತ್ರಗಳನ್ನು ಓದುವುದು) ,     ಯಜಂತು ದೇವಾನ್ (=ದೇವತೆಗಳನ್ನು ಪೂಜಿಸುವುದು) ಕುರ್ವಂತು ಕರ್ಮಾಣಿ (=ಕರ್ಮಗಳನ್ನು ಮಾಡುವುದು),  ಭಜಂತು ದೇವತಾ: (=ದೇವತೆಗಳನ್ನು ಸ್ತುತಿಸುವುದು) ಆತ್ಮ್ಯೆಕ್ಯ ಬೋಧೇನ ವಿನಾ ವಿಮುಕ್ತಿಃ (= ಆತ್ಮಜ್ಞಾನ(ಬ್ರಹ್ಮ ಸಾಕ್ಷಾತ್ಕಾರೆ) ವಿಲ್ಲದೆ ಮುಕ್ತಿಯಿಲ್ಲ)   ನ ಸಿಧ್ಯತಿ ಬ್ರಹ್ಮ ಶತಾಂತರೇಪಿ (= ನೂರು ಚತುರ್ಮುಖ ಬ್ರಹ್ಮರು ಆಗಿಹೋದರೂ ಸಿದ್ಧಿಸದು) "ಆರು ಶಾಸ್ತ್ರವ ಓದಿದರಿಲ್ಲ ನೂರಾರು ಪುರಾಣವ ಪಠಿಸಿದರಿಲ್ಲ" ಎಂಬ ದಾಸವಾಣಿಯನ್ನು ಕೇಳಿರುತ್ತೇವೆ.ಶಾಸ್ತ್ರಗ್ರಂಥಗಳನ್ನು ಓದುವುದರಿಂದ, ದೇವತೆಗಳನ್ನು ಪೂಜಿಸುವುದರಿಂದ, ಕರ್ಮಾನುಷ್ಠಾನಗಳನ್ನು ಆಚರಿಸುವುದರಿಂದ, ದೇವತೆಗಳನ್ನು