ಪೋಸ್ಟ್‌ಗಳು

ವಿವೇಕಚೂಡಾಮಣಿ/ಭಾಗ-70

  ಮೂಲ : ಅಂತಃಕರಣಮೇತೇಷು ಚಕ್ಷುರಾದಿಷು ವರ್ಷ್ಮಣಿ | ಅಹಮಿತ್ಯಭಿಮಾನೇನ ತಿಷ್ಠತ್ಯಾಭಾಸ _ ತೇಜಸಾ || ೧೦೨ || ಅಹಂಕಾರಃ ಸ ವಿಜ್ಞೇಯಃ ಕರ್ತಾ ಭೋಕ್ತಾಭಿಮಾನ್ಯಯಮ್ | ಸತ್ವಾದಿಗುಣಯೋಗೇನ ಚಾವಸ್ಥಾತ್ರಯಮಶ್ನುತೇ || ೧೦೩ || ವಿಷಯಾಣಾಮಾನುಕೂಲ್ಯೇ ಸುಖೀ ದುಃಖೀ ವಿಪರ್ಯಯೇ | ಸುಖಂ ದುಖಂ ಚ ತದ್ಧರ್ಮಃ ಸದಾನಂದಸ್ಯ ನಾತ್ಮನಃ || ೧೦೪ || ಪ್ರತಿಪದಾರ್ಥ : ಅಂತಃಕರಣಂ = ಅಂತಃಕರಣವು , ಏತೇಷು ಚಕ್ಷುರಾದಿಷು = ಈ ಕಣ್ಣುಗಳೇ ಮೊದಲಾದವುಗಳಲ್ಲಿಯೂ , ವರ್ಷ್ಮಣಿ = ಮತ್ತು ಶರೀರದಲ್ಲಿಯೂ , ಅಹಮ್ ಇತಿ = ನಾನು ಎಂಬ , ಅಭಿಮಾನೇನ = ಅಭಿಮಾನದಿಂದ , ಆಭಾಸ _ ತೇಜಸಾ = ಆತ್ಮನ ಪ್ರತಿಚ್ಛಾಯೆಯೊಂದಿಗೆ , ತಿಷ್ಠತಿ = ಇರುತ್ತದೆ . ( ೧೦೨ ) ಸಃ = ಅದೇ , ಅಹಂಕಾರಃ = ಅಹಂಕಾರವೆಂದು , ವಿಜ್ಞೇಯಃ = ತಿಳಿಯಬೇಕು ; ಅಯಂ = ಇದು , ಕರ್ತಾ = ಕರ್ತೃವೆಂದೂ , ಭೋಕ್ತಾ = ಭೋಕ್ತೃವೆಂದೂ , ಅಭಿಮಾನೀ = ಅಭಿಮಾನಿಯೆಂದೂ ತಿಳಿಯಬೇಕು ; ಸತ್ತ್ವಾದಿಗುಣಯೋಗೇನ = ಸತ್ವವೇ ಮೊದಲಾದ ಗುಣಗಳ ಸಂಬಂಧದಿಂದ , ಅವಸ್ಥಾತ್ರಯಂ ಚ = ಮೂರು ಅವಸ್ಥೆಗಳನ್ನು , ಅಶ್ನುತೇ = ಪಡೆಯುತ್ತದೆ . ( ೧೦೩ ) ವಿಷಯಾಣಾಂ = ವಿಷಯಗಳ , ಅನುಕೂಲ್ಯೇ = ಅನುಕೂಲತೆಯಲ್ಲಿ , ಸುಖೀ = ಸುಖಿಯೆಂದೂ , ವಿಪರ್ಯಯೇ = ಪ್ರತಿಕೂಲ ಸ್ಥಿತಿಯಲ್ಲಿ , ದುಃಖೀ = ದುಃಖಿಯೆಂದೂ ತಿಳಿಯಲಾಗುತ್ತದೆ ; ಸುಖಂ ದುಃಖಂ ಚ = ಸುಖವೂ ದುಃಖವೂ , ತತ್ _ ಧರ್ಮಃ , ಅದರ ಧರ್ಮವ

ವಿವೇಕ ಚೂಡಾಮಣಿ/ಭಾಗ-70

  ಮೂಲ : ಉಚ್ಛ್ವಾಸ _ ನಿಃಶ್ವಾಸ _ ವಿಜೃಂಭಣ _ ಕ್ಷುತ್ ಪ್ರಸ್ಯಂದನಾದ್ಯುತ್ಕ್ರಮಣಾದಿಕಾಃ ಕ್ರಿಯಾಃ | ಪ್ರಾಣಾದಿ _ ಧರ್ಮಾಣಿ ವದಂತಿ ತಜ್ಞಾಃ ಪ್ರಾಣಸ್ಯ ಧರ್ಮಾವಶನಾಪಿಪಾಸೇ || ೧೦೧ | ಪ್ರತಿಪದಾರ್ಥ : ಉಚ್ಛ್ವಾಸ _ ನಿಃಶ್ವಾಸ = ಉಸಿರನ್ನು ಒಳಗೆಳೆದುಕೊಳ್ಳುವುದು ಮತ್ತು ಬಿಡುವುದು , ವಿಜೃಂಭಣ = ಆಕಳಿಕೆ , ಕ್ಷುತ್ = ಸೀನುವುದು , ಪ್ರಸ್ಯಂದನಾದಿ = ಸ್ರವಿಸುವುದೇ ಮೊದಲಾದ , ಉತ್ಕ್ರಮಣಾದಿಕಾಃ ಕ್ರಿಯಾಃ = ಶರೀರವನ್ನು ಬಿಡುವುದು ಇತ್ಯಾದಿ ಕರ್ಮಗಳನ್ನು , ತಜ್ಞಾಃ = ಪ್ರಾಣವಿದರು , ಪ್ರಾಣಾದಿ _ ಧರ್ಮಾಣಿ = ಪ್ರಾಣವೇ ಮೊದಲಾದವುಗಳ ಧರ್ಮವೆಂದು , ವದಂತಿ = ಹೇಳುತ್ತಾರೆ ; ಅಶನಾ _ ಪಿಪಾಸೇ = ಹಸಿವು , ಬಾಯಾರಿಕೆಗಳು , ಪ್ರಾಣಸ್ಯ = ಪ್ರಾಣದ , ಧರ್ಮೌ = ಧರ್ಮಗಳು . ತಾತ್ಪರ್ಯ : ಉಸಿರನ್ನು ಒಳಗೆಳೆಯುವುದು ಮತ್ತು ಹೊರ ಬಿಡುವುದು , ಆಕಳಿಕೆ ಸೀನು ಸ್ರಾವ ಶರೀರತ್ಯಾಗ ಇವೇ ಮೊದಲಾದ ಕ್ರಿಯೆಗಳನ್ನು ಪ್ರಾಣವಿದರು ಪ್ರಾಣವೇ ಮೊದಲಾದವುಗಳ ಧರ್ಮವೆಂದು ಹೇಳುತ್ತಾರೆ . ಹಸಿವು ಬಾಯಾರಿಕೆಗಳೂ ಪ್ರಾಣದ ಧರ್ಮಗಳು . ವಿವರಣೆ : ಉಸಿರಾಟ , ಹಸಿವು , ಬಾಯಾರಿಕೆ ಎಲ್ಲವೂ ಪ್ರಾಣದ ಧರ್ಮವೇ ಹೊರತು ಆತ್ಮನಿಗೆ ಸಂಬಂಧಿಸಿದ್ದಲ್ಲ ಎಂದು ಈ ಶ್ಲೋಕದಲ್ಲಿ ಹೇಳುತ್ತಾರೆ .  ಪಂಚಪ್ರಾಣಗಳ  ಬಗ್ಗೆ ನಾವು ಹಿಂದಿನ ಶ್ಲೋಕದಲ್ಲಿ ತಿಳಿದುಕೊಂಡಿದ್ದೇವೆ . ಶರೀರತ್ಯಾಗವೂ ಒಳಗೊಂಡಂತೆ ಸಾಮಾನ್ಯವಾದ ಸೀನು , ಆಕಳಿಕೆ ಮುಂ

Part - 69

ಮೂಲ : ಅಂಧತ್ವ _ ಮಂದತ್ವ _ ಪಟುತ್ವ _ ಧರ್ಮಾಃ ಸೌಗುಣ್ಯ _ ವೈಗುಣ್ಯ _ ವಶಾದ್ಧಿ ಚಕ್ಷುಷಃ | ಬಾಧಿರ್ಯ _ ಮೂಕತ್ವ _ ಮುಖಾಸ್ತಥೈವ ಶ್ರೋತ್ರಾದಿಧರ್ಮಾ ನ ತು ವೇತ್ತುರಾತ್ಮನಃ ||೧೦೦|| ಪ್ರತಿಪದಾರ್ಥ : ಅಂಧತ್ವ = ಕುರುಡುತನ , ಮಂದತ್ವ = ಮಂದನೋಟ , ಪಟುತ್ವ = ಚುರುಕು ನೋಟ , ಧರ್ಮಾಃ = ಇವೇ ಮೊದಲಾದ ಧರ್ಮಗಳು ; ಚಕ್ಷುಷಃ = ಕಣ್ಣಿನ , ಸೌಗುಣ್ಯ = ಉತ್ತಮವಾಗಿರುವುದು , ವೈಗುಣ್ಯ = ಅವಗುಣ , ವಶಾತ್ ಹಿ = ಇವುಗಳಿಂದಲೇ ಉಂಟಾಗುತ್ತದೆ ; ತಥಾ ಏವ = ಹಾಗೆಯೇ , ಬಾಧಿರ್ಯ _ ಮೂಕತ್ವ - ಮುಖಾಃ = ಕಿವುಡು ಮೂಕತನ ಮೊದಲಾದವು , ಶ್ರೋತ್ರಾದಿ ಧರ್ಮಾಃ = ಕಿವಿಯೇ ಮೊದಲಾದವುಗಳ ಧರ್ಮವು , ವೇತ್ತುಃ = ಜ್ಞಾತೃವಾದ , ಆತ್ಮನಃ = ಆತ್ಮನ , ನ ತು = ಧರ್ಮವಲ್ಲ . ತಾತ್ಪರ್ಯ : ಕಣ್ಣಿನ ಸೌಗುಣ್ಯದಿಂದ ತೀಕ್ಷ್ಣತ್ವವೂ ವೈಗುಣ್ಯದಿಂದ ಕುರುಡುತನ ಹಾಗೂ ಮಂದತ್ವವೂ ಉಂಟಾಗುತ್ತದೆ . ಹಾಗೆಯೇ ಕಿವುಡು , ಮೂಕತನ ಮೊದಲಾದವು ಕಿವಿ , ವಾಗಿಂದ್ರಿಗಳ ಧರ್ಮವೇ ಹೊರತು ಜ್ಞಾತೃವಾದ ಆತ್ಮನ ಧರ್ಮವಲ್ಲ . ವಿವರಣೆ : ಕಠೋಪನಿಷತ್ತಿನಲ್ಲಿ ' ಸೂರ್ಯೋ ಯಥಾ ಸರ್ವಲೋಕಸ್ಯ ಚಕ್ಷುರ್ನ ಲಿಪ್ಯತೇ ಚಾಕ್ಷುಷೈರ್ಬಾಹ್ಯದೋಷೈಃ | ಏಕಸ್ತಥಾ ಸರ್ವಭೂತಾಂತರಾತ್ಮಾ ನ ಲಿಪ್ಯತೇ ಲೋಕ ದುಃಖೇನ ಬಾಹ್ಯಃ || ‘ ಎಂಬ ವಾಕ್ಯವು ಬರುತ್ತದೆ . ಎಲ್ಲ ಲೋಕಗಳನ್ನು ತನ್ನ ದಿವ್ಯ ತೇಜಸ್ಸಿನಿಂದ ನೋಡುವ ಅಂದರೆ ಬೆಳಗುವ ಸೂರ್ಯನಿಗೆ ಯಾವ ಲೋಕದಲ್ಲಿ ಸಂಭವಿಸುವ ಗು

Part - 68

ಮೂಲ : ಸರ್ವವ್ಯಾಪೃತಿ _ ಕರಣಂ _ ಲಿಂಗಮಿದಂ ಸ್ಯಾಚ್ಚಿದಾತ್ಮನಃ ಪುಂಸಃ | ವಾಸ್ಯಾದಿಕಮಿವ ತಕ್ಷ್ಣಸ್ತೇನೈವಾತ್ಮಾ ಭವತ್ಯಸಂಗೋ s ಯಮ್ || ೯೯ || ಪ್ರತಿಪದಾರ್ಥ : ತಕ್ಷ್ಣಃ = ಬಡಗಿಗೆ , ವಾಸ್ಯಾದಿಕಮ್ ಇವ = ಉಳಿ ಮೊದಲಾದವುಗಳಿಂದ , ಚಿದಾತ್ಮನಃ = ಚಿತ್ ಸ್ವರೂಪನಾದ , ಪುಂಸಃ = ಮನುಷ್ಯನಿಗೆ , ಇದಂ ಲಿಂಗಂ = ಈ ಸೂಕ್ಷ್ಮ ಶರೀರವು , ಸರ್ವವ್ಯಾಪೃತಿಕರಣಂ ಸ್ಯಾತ್ = ಸಮಸ್ತ ಪ್ರವೃತ್ತಿಗೆ ಸಾಧನವಾಗಿರುತ್ತದೆ ; ತೇನ ಏವ = ಆದುದರಿಂದಲೇ , ಅಯಮ್ ಆತ್ಮಾ = ಈ ಆತ್ಮನು , ಅಸಂಗಃ ಭವತಿ = ನಿರ್ಲಿಪ್ತನಾಗಿರುತ್ತಾನೆ . ತಾತ್ಪರ್ಯ : ಬಡಗಿಗೆ ಉಳಿ , ಸುತ್ತಿಗೆ ಮುಂತಾದ ಸಾಧನಗಳಂತೆ ಚಿದ್ರೂಪನಾದ ಆತ್ಮನಿಗೆ ಎಲ್ಲ ಪ್ರವೃತ್ತಿಗಳಿಗೂ ಸಾಧನವಾಗಿರುವುದು ಈ ಲಿಂಗಶರೀರವು . ಆದುದರಿಂದ ಆತ್ಮನು ನಿಸ್ಸಂಗನಾದವನೆಂದು ಸಂದೇಹವಿಲ್ಲದೆ ತಿಳಿಯಬಹುದು . ವಿವರಣೆ : ಬಡಗಿಯು ಎಷ್ಟೇ ಅತ್ಯುತ್ತಮ ಕೆಲಸಗಾರನಾಗಿದ್ದರೂ ಉಳಿ , ಸುತ್ತಿಗೆ ಮುಂತಾದ ಸಾಧನಗಳಿಲ್ಲದೆ ಏನೂ ಮಾಡಲಾಗುವುದಿಲ್ಲ . ಕೈಚಳಕವಿದ್ದ ಮಾತ್ರಕ್ಕೆ ಮಲಗುವ ಮಂಚ ತಾನೇ ತಯಾರಾಗುದಿಲ್ಲ , ಅದಕ್ಕೆ ಸರಿಯಾದ ಮರ , ಗರಗಸ , ನಟ್ _ ಬೋಲ್ಟ್ ಎಲ್ಲವೂ ಹೊಂದಿಕೆಯಾದಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ . ಮರಗೆಲಸಗಾರನ ತಿಳಿವಳಿಕೆಗೆ ಆಯುಧಗಳು ಸಾಧನಗಳಾಗುತ್ತವೇ ಹೊರತು , ಜ್ಞಾನಕ್ಕೆ ಪ್ರೇರಣೆಯಾಗುವುದಿಲ್ಲ . ಹಾಗೆಯೇ , ಚಿದ್ರೂಪನಾದ ಆತ್ಮನ ಎಲ್ಲ ವ್ಯಾಪಾರಕ್ಕ

Part - 67

ಮೂಲ : ಧೀಮಾತ್ರ ಕೋಪಾಧಿರಶೇಷಸಾಕ್ಷೀ ನ ಲಿಪ್ಯತೇ ತತ್ಕೃತ _ ಕರ್ಮಲೇಶೈಃ | ಯಸ್ಮಾದಸಂಗಸ್ತತ ಏವ ಕರ್ಮಭಿಃ _ ರ್ನ ಲಿಪ್ಯತೇ ಕಿಂಚಿದುಪಾಧಿನಾ ಕೃತೈಃ || ೯೮ || ಪ್ರತಿಪದಾರ್ಥ : ಧೀಮಾತ್ರಕ _ ಉಪಾಧಿಃ = ಕೇವಲ ಅಂತಃಕರಣವೆಂಬ ಉಪಾಧಿಯನ್ನು ಹೊಂದಿದವನಾದ , ಅಶೇಷ ಸಾಕ್ಷೀ = ಎಲ್ಲದಕ್ಕೂ ಸಾಕ್ಷಿಯಾದ , ( ಆತ್ಮನು ) ; ತತ್ಕೃತ _ ಕರ್ಮ _ ಲೇಶೈಃ = ಅಂತಃಕರಣದಿಂದಾದ ಕರ್ಮಲೇಶದಿಂದಲೂ , ನ ಲಿಪ್ಯತೇ = ಲಿಪ್ತನಾಗುವುದಿಲ್ಲ , ಯಸ್ಮಾತ್ = ಯಾವ ಕಾರಣದಿಂದ , ಅಸಂಗಃ = ಸಂಗರಹಿತನೊ , ತತಃ ಏವ = ಆ ಕಾರಣದಿಂದಲೇ , ಉಪಾಧಿನಾ = ಉಪಾಧಿಯಿಂದ , ಕೃತೈಃ = ಮಾಡಲಾದ , ಕರ್ಮಭಿಃ = ಕರ್ಮಗಳಿಂದ , ಕಿಂಚಿತ್ = ಸ್ವಲ್ಪವಾದರೂ , ನ ಲಿಪ್ಯತೇ = ಲಿಪ್ತನಾಗುವುದಿಲ್ಲ . ತಾತ್ಪರ್ಯ : ಕೇವಲ ಅಂತಃಕರಣವೆಂಬ ಉಪಾಧಿಯನ್ನು ಹೊಂದಿರುವ ಸರ್ವಸಾಕ್ಷಿಯಾದ ಆತ್ಮನಿಗೆ ಬುದ್ಧಿಯಿಂದ ಮಾಡಲಾಗುವ ಕರ್ಮಗಳು ಸಂಬಂಧಪಡುವುದಿಲ್ಲ ( ಅಂಟುವುದಿಲ್ಲ ). ಅವನು ( ಆತ್ಮನು ) ಸರ್ವಸಂಗ ಶೂನ್ಯವಾಗಿರುವ ಕಾರಣದಿಂದಲೇ ಉಪಾಧಿಯಿಂದ ಮಾಡಲಾಗುವ ಕರ್ಮಲೇಪವು ಕಿಂಚಿತ್ತೂ ಇರುವುದಿಲ್ಲ . ವಿವರಣೆ : ಕನಸಿನಲ್ಲಿ ( ಸ್ವಪ್ನಾವಸ್ಥೆಯಲ್ಲಿ ) ಅಂತಃಕರಣವು ಅನುಭವಗಳಿಗೆ ಸಾಕ್ಷಿಯಾಗುತ್ತದೆ , ಅಲ್ಲಿ ಎಲ್ಲ ಅವಸ್ಥೆಗಳಿಗೂ ಸಾಕ್ಷಿಯಾಗುವ ಆತ್ಮನು ಬೇರೆಯೇ ಆಗಿದ್ದುಕೊಂಡು ಪ್ರಕಾಶಿಸುತ್ತಿರುತ್ತಾನೆ ಎಂದು ಹಿಂದಿನ ಶ್ಲೋಕದಲ್ಲಿ ತಿಳಿದೆವು . ಕೇವಲ ಸಾಕ್ಷಿರೂ

Part -66

ಮೂಲ : ಸ್ವಪ್ನೋ ಭವತ್ಯಸ್ಯ ವಿಭಕ್ತ್ಯವಸ್ಥಾ ಸ್ವಮಾತ್ರಶೇಷೇಣ ವಿಭಾತಿ ಯತ್ರ | ಸ್ವಪ್ನೇತು ಬುದ್ಧಿಃ ಸ್ವಯಮೇವ ಜಾಗ್ರತ್ _ ಕಾಲೀನ _ ನಾನಾವಿಧ _ ವಾಸನಾಭಿಃ | ಕರ್ತ್ರಾದಿಭಾವಂ ಪ್ರತಿಪದ್ಯ ರಾಜತೇ ಯತ್ರ ಸ್ವಯಂಜ್ಯೋತಿರಯಂ ಪರಾತ್ಮಾ || ೯೭ || ಪ್ರತಿಪದಾರ್ಥ : ಅಸ್ಯ = ಇವನ , ವಿಭಕ್ತಿ _ ಅವಸ್ಥಾ = ಬೇರೆ ರೀತಿಯು , ಸ್ವಪ್ನಃ ಭವತಿ = ಸ್ವಪ್ನವೆನಿಸುತ್ತದೆ , ಯತ್ರ = ಎಲ್ಲಿ , ಸ್ವಮಾತ್ರಶೇಷೇಣ = ತಾನೊಬ್ಬನೇ ಶೇಷವಾಗಿ , ವಿಭಾತಿ = ಪ್ರಕಾಶಿಸುವನೋ , ಸ್ವಪ್ನೇತು = ಸ್ವಪ್ನದಲ್ಲಿ , ಬುದ್ಧಿಃ = ಅಂತಃಕರಣವು , ಸ್ವಯಮೇವ = ತಾನೊಂದೇ , ಜಾಗ್ರತ್ _ ಕಾಲೀನ = ಜಾಗ್ರದಾವಸ್ಥೆಯ , ನಾನಾವಿಧ _ ವಾಸನಾಭಿಃ = ಬೇರೆ ಬೇರೆ ವಾಸನೆಗಳಿಂದ , ಕರ್ತ್ರಾದಿಭಾವಂ = ಕರ್ತೃವೇ ಮೊದಲಾದ ಭಾವವನ್ನು ಹೊಂದಿ , ರಾಜತೇ = ಪ್ರಕಾಶಿಸುತ್ತದೆ , ಯತ್ರ = ಎಲ್ಲಿ , ಅಯಂ ಪರಾತ್ಮಾ = ಈ ಪರಮಾತ್ಮನು , ಸ್ವಯಂಜ್ಯೋತಿಃ = ಸ್ವಯಂಜ್ಯೋತಿಯು . ತಾತ್ಪರ್ಯ : ಜೀವನಿಗೆ ಸ್ವಪ್ನವು ಜಾಗ್ರತ್ತಿಗಿಂತ ಬೇರೆಯಾದ ಅವಸ್ಥೆ ; ಅಲ್ಲಿ ಅವನು ತಾನೋಬ್ಬನೇ ತೋರಿಕೊಂಡು ಪ್ರಕಾಶಿಸುತ್ತಾನೆ . ಸ್ವಪ್ನದಲ್ಲಿ ಅಂತಃಕರಣವು ತಾನೊಂದೇ ಆಗಿ ಜಾಗ್ರದಾವಸ್ಥೆಯ ನಾನಾವಿಧವಾದ ಅನುಭವಗಳ ವಾಸನೆಯಿಂದ ಕರ್ತೃವೇ ಮೊದಲಾದ ಭಾವವನ್ನು ಹೊಂದಿ ಪ್ರಕಾಶಿಸುತ್ತದೆ ; ಆದರೆ ಅಲ್ಲಿ ಪರಮಾತ್ಮನು ಸ್ವಯಂಜ್ಯೋತಿಯಾಗಿರುತ್ತಾನೆ . ವಿವರಣೆ : ಶರೀರವು ಸಾಮಾನ್ಯವ