Part -63


ಮೂಲ:

ಪ್ರಾಣಾಪಾನ_ವ್ಯಾನೋದಾನ_ಸಮಾನಾ_ಭವತ್ಯಸೌ ಪ್ರಾಣಃ |

ಸ್ವಯಮೇವ ವೃತ್ತಿಭೇದಾದ್ವಿಕೃತೇರ್ಭೇದಾತ್ ಸುವರ್ಣಸಲಿಲವತ್ ||೯೪||


ಪ್ರತಿಪದಾರ್ಥ:

ವಿಕೃತೇಃ ಭೇದಾತ್ = ವಿಕಾರಭೇದದಿಂದ, ಸುವರ್ಣ_ಸಲಿಲವತ್ = ಬಂಗಾರ_ನೀರು ಇವುಗಳಂತೆ, ಅಸೌ ಪ್ರಾಣಃ = ಈ ಪ್ರಾಣವು, ವೃತ್ತಿ ಭೇದಾತ್ = ವೃತ್ತಿ ಭೇದದಿಂದ, ಸ್ವಯಮ್ ಏವ = ತಾನೊಂದೇ , ಪ್ರಾಣ_ಅಪಾನ_ವ್ಯಾನ_ಉದಾನ_ಸಮಾನಾಃ = ಪ್ರಾಣ_ಅಪಾನ_ವ್ಯಾನ_ಉದಾನ_ಸಮಾನ, ಭವತಿ = ಆಗುತ್ತದೆ .


ತಾತ್ಪರ್ಯ:

ಬಂಗಾರ, ನೀರು ಇವು ಹೇಗೆ ಆಕಾರ_ವಿಕಾರ ಭೇದದಿಂದ ಕೂಡಿವೆಯೋ, ಹಾಗೆಯೆ ಈ ಪ್ರಾಣವು ತಾನೊಂದೇ ಆಗಿದ್ದರೂ ಕ್ರಿಯಾ ಭೇದದಿಂದ ಪ್ರಾಣ ಅಪಾನ ವ್ಯಾನ ಉದಾನ ಸಮಾನ ಎಂಬ ಹೆಸರುಗಳನ್ನು ಪಡೆಯುತ್ತದೆ.


ವಿವರಣೆ :

ಪಂಚಭೂತಗಳ ವ್ಯಷ್ಟಿಯಿಂದ ಹುಟ್ಟುವ ಸೂಕ್ಷ್ಮ ಶರೀರಕ್ಕೆ ಸೇರಿದ ಪಂಚಪ್ರಾಣಗಳ ನಿರೂಪಣೆಯನ್ನು 'ಪ್ರಾಣಾಪಾನ...’ ಎಂಬ ಶ್ಲೋಕದ ಮೂಲಕ ಮಾಡುತ್ತಾರೆ. ಬಂಗಾರವನ್ನು ಸುಮ್ಮನೆ ಚಿನ್ನ ಅಥವಾ ಸುವರ್ಣ ಎಂದ ಮಾತ್ರಕ್ಕೆ ಅದರ ಆಕಾರ ನಮಗೆ ತಿಳಿಯುವುದಿಲ್ಲ. ಬಳೆ, ಓಲೆ, ಕೊರಳಸರ, ಗೆಜ್ಜೆ ಮುಂತಾದ ಹೆಸರುಗಳಿಂದ ಕರೆದಾಗ ಅದರ ರೂಪ ಮತ್ತು ಬೆರಗು ನಮಗೆ ಗೊತ್ತಾಗುತ್ತದೆ. ನೀರನ್ನು ಯಾವ ಪಾತ್ರೆಯಲ್ಲಿ ಅಥವಾ ಪಾತ್ರದಲ್ಲಿ ಕಲ್ಪಿಸಿಕೊಳ್ಳುವೆವೋ, ಅದೇ ಆಕಾರದಲ್ಲಿ ನಮಗೆ ಕಾಣುತ್ತದೆ. ತಂಬಿಗೆಯಲ್ಲಿ ಒಂದು ಆಕಾರವಿದ್ದರೆ ಕೆರೆ, ತೊರೆ, ನದೀ, ಜಲಪಾತಗಳಲ್ಲಿ ಅನೇಕ ವಿಶೇಷ ರೂಪಗಳನ್ನು (ವಿಕಾರ)ಪಡೆಯುತ್ತದೆ. ಮಂಜುಗೆಡ್ಡೆ ಹಾಗೂ ಆವಿಯ ರೂಪವನ್ನೂ ತಳೆಯುತ್ತದೆ. ಚಿನ್ನ ಹಾಗೂ ನೀರು ಪರಿಣಾಮಭೇದದಿಂದ ಬೇರೆ ಬೇರೆಯಾಗಿ ವ್ಯವಹರಿಸಲ್ಪಡುತ್ತದೆ. ಹಾಗೆಯೆ ಪ್ರಾಣವು (ಪ್ರಾಣವಾಯು) ಒಂದೇ ಆಗಿದ್ದರೂ ಅದನ್ನು ಬಿಡಿಯಾಗಿ ತಿಳಿದುಕೊಂಡಾಗ ಪ್ರಾಮುಖ್ಯತೆ ಅರ್ಥವಾಗುತ್ತದೆ.

ಸರಳವಾಗಿ ತಿಳಿಯುವುದಾದರೆ ಪ್ರಾಣವಾಯುವು ಮೂಗು_ಬಾಯಿಯಿಂದ ಒಳ ಹೊರಗೆ ಸಂಚರಿಸುವಾಗ ಪ್ರಾಣ ಎಂದೂ, ಗುದ_ಮೂತ್ರದ್ವಾರಗಳಿಂದ ಕೆಳಕ್ಕೆ ದಬ್ಬುವುದು (ಹೊರಹಾಕುವುದು) ಅಪಾನ, ತಿಂದು_ಕುಡಿದದ್ದನ್ನು ಜೀರ್ಣಕ್ರಿಯೆಯ ಮೂಲಕ ರಕ್ತನಾಡಿಗಳಿಗೆ ಸೇರಿಸುವುದು ವ್ಯಾನ ಎಂದೂ, ಬಾಯಿ_ಮೂಗಿನ ಮೂಲಕ ಅನವಶ್ಯಕ ನೀರು, ಅಜೀರ್ಣ ಪದಾರ್ಥಗಳನ್ನು (ವಾಂತಿ,ತೇಗು!) ಮೇಲ್ಮುಖವಾಗಿ ತಳ್ಳುವುದನ್ನು ಉದಾನ ಎಂದು, ಅನ್ನರಸಾದಿಗಳನ್ನು ಜೀರ್ಣಕ್ರಿಯೆಗಾಗಿ ಜಠರದಲ್ಲಿ ಒಟ್ಟುಗೂಡಿಸಿಕೊಳ್ಳುವುದನ್ನು ಸಮಾನ ಎಂದು ಹೇಳಲಾಗಿದೆ

........................................... 

ಸಂಬಂಧವಿಲ್ಲದ ಟಿಪ್ಪಣಿ

ಚಿನ್ನದ ಆಭರಣಗಳ ಬಗ್ಗೆ ಹೇಳುವಾಗ ಹೊಯ್ಸಳರ ಕಾಲದ ದೇಗುಲಗಳಲ್ಲಿ ನಿರ್ಮಿಸಿರುವ ಶಿಲಾ ವಿಗ್ರಹಗಳಿಗೆ ಒಡವೆಗಳಿಂದಲೇ ಅಲಂಕಾರ ಮಾಡಿರುವುದನ್ನು ಕಾಣಬಹುದು. ಒಂದು ವಿಗ್ರಹದಲ್ಲಿ ೩೬ ಬಗೆಯ ಆಭರಣಗಳನ್ನು ನೋಡಬಹುದು...ಇಲ್ಲಿ ಸಾಮಾನ್ಯವಾಗಿ ಕಂಡುಬರುವುದನ್ನು ಪಟ್ಟಿ ಮಾಡಿದ್ದೇನೆ. (ಮೇಲಿನಿಂದ ಕೆಳಕ್ಕೆ)

) ಜಟಾಮುಕುಟ (ಕಿರೀಟ)

) ಕರ್ಣಕುಂಡಲ (ಕಿವಿಯೋಲೆ) _ ) ನಾಗಕುಂಡಲ ಬ) ಮಕರಕುಂಡಲ

) ಭುಜಕೀರ್ತಿ

) ಬಾಹುಬಂಧ

) ಕೈ ಬೆರಳಿನ ಉಂಗುರಗಳು

) ಕಂಠಹಾರ (ನೆಕ್ ಲೇಸ್)

) ವಕ್ಷಹಾರ (ಎದೆಯ ಮೇಲೆ ಧರಿಸುವ ಹಾರ)

) ವಕ್ಷಬಂಧ (ಎದೆ ಪಟ್ಟಿ)

೯) ಯಜ್ಞೋಪವೀತ

೧೦) ಕಟಿಬಂಧ (ಒಡ್ಯಾಣ, ಸೊಂಟದಪಟ್ಟಿ)

೧೧) ಮೇಖಲ ( ಮಿನಿ ಸ್ಕರ್ಟ್)

೧೨) ವೈಜಯಂತೀ ಮಾಲ (ಭುಜದಿಂದ ಮಂಡಿಯವರೆಗೆ ಬರುವ ಉದ್ದನೆಯ ಹಾರ)

೧೩) ಕಡಗ

೧೪) ನೂಪುರ (ಕಾಲ್ಗೆಜ್ಜೆ)

೧೫) ಕಾಲುಂಗುರ

........-

ಕಾಮೆಂಟ್‌ಗಳು

 1. I have been under the impression that Mekhala means a Belt around the waist. Is it mini skirt?!
  (My Kannada BRH writer is lost in my new OS. Can you please suggest a way to write in Kannada?)

  ಪ್ರತ್ಯುತ್ತರಅಳಿಸಿ
 2. ಕಾಕಾ

  ಮೇಖಲ ಎಂದರೆ ಬೆಲ್ಟ್ ಅಥವಾ ಬೆಲ್ಟ್ ಹಾಕಲು ಸಹಾಯಕವಾಗುವ ಲೂಪ್ ಅನ್ನು ಹೊಂದಿರುವ ಮಂಡಿಯ ಮೇಲೆ ಬರುವ ಉಡುಪು ಎಂದು ಇಲ್ಲಿ ಸಂಗ್ರಹಾಲಯದಲ್ಲಿರುವ ಕೆಲ ಪುಸ್ತಕಗಳಲ್ಲಿ ಬರೆದಿದ್ದಾರೆ.

  ಬೆಲ್ಟ್ ಗೆ ಆಗ ಸೊಂಟದ ಪಟ್ಟಿ, ಕಟಿಬಂಧ, ಇತ್ಯಾದಿ ಹೇಳಿದ್ದಾರೆ.

  ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ