Part - 49
ಮೂಲ : ಅಪಾತ _ ವೈರಾಗ್ಯವತೋ ಮುಮುಕ್ಷೂನ್ ಭವಾಬ್ದಿಪಾರಂ ಪ್ರತಿಯಾತುಮುದ್ಯತಾನ್ | ಆಶಾ _ ಗ್ರಹೋ ಮಜ್ಜಯತೇಂತರಾಲೇ ನಿಗೃಹ್ಯ ಕಂಠೇ ವಿನಿವರ್ತ್ಯ ವೇಗಾತ್ || ೭೯ || ಪ್ರತಿಪದಾರ್ಥ : ಭವಾಬ್ದಿಪಾರಂ = ಸಂಸಾರ ಸಾಗರ ವನ್ನು , ಪ್ರತಿಯಾಂತು = ಹೊಂದಲು , ಉದ್ಯತಾನ್ = ಪ್ರಯತ್ನಿಸುತ್ತಿರುವ , ಅಪಾತ _ ವೈರಾಗ್ಯವತಃ = ಮಂದ ವೈರಾಗ್ಯವುಳ್ಳ , ಮುಮುಕ್ಷೂನ್ = ಬಂಧನದಿಂದ ಬಿಡಿಸಿಕೊಳ್ಳುತ್ತಿರುವವರು ( ಸಾಧನ ಚತುಷ್ಟಯದ ಸಾಧಕರು ), ಆಶಾ _ ಗ್ರಹಃ = ಆಸೆಯೆಂಬ ಮೊಸಳೆಯ , ಕಂಠೇ = ಕೊರಳಿನಲ್ಲಿ , ನಿಗೃಹ್ಯ = ಹಿಡಿದು , ವೇಗಾತ್ = ವೇಗದ ಕಾರಣದಿಂದ , ವಿನಿವರ್ತ್ಯ = ಹಿಂದಿರುಗಿಸಿ , ಅಂತರಾಲೇ = ಮಧ್ಯದಲ್ಲಿ , ಮಜ್ಜಯತೇ = ಮುಳುಗಿಸುತ್ತದೆ . ತಾತ್ಪರ್ಯ : ಸಂಸಾರ ಸಾಗರವನ್ನು ದಾಟಲು ಆಸಕ್ತನಾಗಿದ್ದರೂ ( ಆ ದಾರಿಯಲ್ಲೇ ನಡೆದು ಬಂದಿದ್ದರೂ ) ವಿಷಯಗಳ ಪ್ರತಿ ತೀವ್ರವಾದ ವೈರಾಗ್ಯವಿಲ್ಲದಿದ್ದರೆ ಅನರ್ಥವಾಗುತ್ತದೆ . ಮಂದ ವೈರಾಗ್ಯದಿಂದ ಮುನ್ನೆಡೆಯುವವರನ್ನು ' ಆಸೆ ' ಎಂಬ ಮೊಸಳೆಯು ತನ್ನ ಹಿಡಿತಕ್ಕೆ ತೆಗೆದುಕೊಂಡು ಯಾವ ವೇಗದಲ್ಲಿ ಸಾಗಿ ಬಂದಿರುತ್ತಾರೋ ಅಷ್ಟೇ ಬೇಗ ( ಹಿಮ್ಮುಖವಾಗಿ ) ಸಾಗರ ( ಸಂಸಾರ ) ದ ಮಧ್ಯದಲ್ಲಿ ಮುಳುಗಿಸುತ್ತದೆ . ವಿವರಣೆ: ಜ್ಞಾನಿಯಾಗುವವನಿಗೆ ವೈರಾಗ್ಯ ಅಥವಾ ಜಿಗುಪ್ಸೆಯು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ನಾವು ಈಗಾಗಲೇ ಮಂದ_ಮಧ್ಯಮ_...