ಭಾಗ -೧೫
ಗ್ರಂಥದ ಮುಂದುವರಿಕೆ:- मूलम् - ಮೂಲ:- मन्दमध्यमरूपाऽपि वैराग्येण शमादिना । प्रसादेन गुरोः सेयं प्रवृद्धा सूयते फलम् ॥२९॥ ಮಂದ-ಮಧ್ಯಮ-ರೂಪಾಪಿ ವೈರಾಗ್ಯೇಣ ಶಮಾದಿನಾ | ಪ್ರಸಾದೇನ ಗುರೋಸ್ಸೇಯಂ ಪ್ರವೃದ್ಧಾ ಸೂಯತೇ ಫಲಮ್ ||೨೯| ಪ್ರತಿಪದಾರ್ಥ :- (ಮಂದ-ಮಧ್ಯಮ-ರೂಪಾ ಅಪಿ= ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ, ವೈರಾಗ್ಯೇಣ= ವಿರಾಗದಿಂದದಲೂ, ಶಮಾದಿನಾ = ಶಮಾದಿಗುಣ ಸಾಧನದಿಂದಲೂ, ಗುರೋಃ =ಗುರುವಿನ, ಪ್ರಸಾದೇನ = ಅನುಗ್ರಹದಿಂದ, ಸಾ ಇಯಂ = ಆ ಈ (ಮುಮುಕ್ಷುತ್ವವು), ಪ್ರವೃದ್ಧಾ = ಪ್ರಬಲವಾಗಿ, ಫಲಂ = ಫಲವನ್ನು , ಸೂಯತೇ = ಉಂಟುಮಾಡುತ್ತದೆ. ) ತಾತ್ಪರ್ಯ : ಇಂತಹ ಮುಮುಕ್ಷುತ್ವವು ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ವೈರಾಗ್ಯ , ಶಮಾದಿಗುಣ ಸಾಧನೆ ಮತ್ತು ಗುರುವಿನ ಅನುಗ್ರಹದಿಂದ (ಉಪದೇಶದಿಂದ) ಪ್ರಬಲವಾಗಿ ಮೋಕ್ಷರೂಪವಾದ ಫಲವು ಉಂಟಾಗುತ್ತದೆ. ವಿವರಣೆ : ಸಾಧನ ಚತುಷ್ಟಯದ ನಂತರ ಆಚಾರ್ಯರು ಮುಂದುವರಿದು ಮುಮುಕ್ಷುತ್ವದ ಬಗೆಗೆ ಹೇಳುತ್ತಾರೆ. ಮುಮುಕ್ಷುತ್ವ ಅಥವಾ ಬಿಡುಗಡೆಯ ಬಯಕೆ ಎನ್ನುವುದು ಎಲ್ಲರಲ್ಲೂ ಒಂದೇ ತೆರನಾಗಿ ಇರುವುದಿಲ್ಲ. ಕೆಲವರಿಗೆ ಮಂದ (Slow)ವಾಗಿರುತ್ತದೆ. ನಿಧಾನವಾಗಿ ಕೆಲಸ ಮಾಡುವ ಅಥವಾ ಮುಂದಿನ ವಾರವೋ ಮುಂದಿನ ತಿಂಗಳೋ ಮಾಡಿದರಾಯಿತು ಎನ್ನುವ ಮನೋಭಾವವಿರುತ್ತದೆ. ಕೆಲವರಿಗೆ ಮಧ್ಯಮ (Medium)ಸ್ಥಿತಿಯಲ್ಲಿರುತ್ತದೆ. ನಾಳೆಯೋ ನಾಡಿದ್ದೋ ಮಾಡಿದರಾಯಿತು ಎನ್ನ...