ಭಾಗ -೨೫
मूलम् - शिश्य उवाच - कृपया श्रुयतां स्वामिन् प्रश्नोयं क्रियते मया | यदुत्तरमहं श्रुत्वा कृतार्थः स्यां भवन्मुखात् || ४९ || ಮೂಲ : ಶಿಷ್ಯನು ಹೇಳಿದನು : - ಕೃಪಯಾ ಶ್ರುಯತಾಂ ಸ್ವಾಮಿನ್ ಪ್ರಶ್ನೋಯಂ ಕ್ರಿಯತೇ ಮಯಾ | ಯದುತ್ತರಮಹಂ ಶ್ರುತ್ವಾ ಕೃತಾರ್ಥಃ ಸ್ಯಾಂ ಭವನ್ಮುಖಾತ್ || ೪೯ || ಪ್ರತಿಪದಾರ್ಥ : ( ಸ್ವಾಮಿನ್ , ಮಯಾ = ಸ್ವಾಮಿ , ನನ್ನಿಂದ , ಅಯಂ ಪ್ರಶ್ನಃ = ಈ ಪ್ರಶ್ನೆಯು , ಕ್ರಿಯತೇ = ಕೇಳಲಾಗುತ್ತದೆ ( ಮಾಡಲಾಗುತ್ತದೆ ), ಕೃಪಯಾ = ಕರುಣೆಯಿಂದ , ಶ್ರೂಯತಾಂ = ಕೇಳಿಸಿಕೊಳ್ಳಿ ; ಅಹಂ = ನಾನು , ಭವನ್ಮುಖಾತ್ = ನಿಮ್ಮ ಬಾಯಿಂದ , ಯದುತ್ತರಂ = ಯಾವ ಉತ್ತರವನ್ನು , ಶ್ರುತ್ವಾ = ಕೇಳಿ , ಕೃತಾರ್ಥಃ ಸ್ಯಾಂ = ಧನ್ಯನಾಗುವೆನೊ ) ತಾತ್ಪರ್ಯ : ಶಿಷ್ಯನು ಹೇಳಿದನು : ಹೇ ಸ್ವಾಮಿಯೇ , ನಾನು ಕೇಳುವ ಪ್ರಶ್ನೆಯನ್ನು ಕರುಣೆಯಿಂದ ಕೇಳಿಸಿಕೊಳ್ಳಿ . ನಿಮ್ಮ ಬಾಯಿಂದ ನನ್ನ ಪ್ರಶ್ನೆಗಳಿಗೆ ಯಾವ ಉತ್ತರವು ಬರುವುದೋ ಅದನ್ನು ಕೇಳಿ ನಾನು ಕೃತಾರ್ಥನಾಗುತ್ತೇನೆ . ವಿವರಣೆ : ಶಿಷ್ಯನ ಭಯವನ್ನು ದೂರಮಾಡಿ ಮತ್ತು ಭಯಕ್ಕೆ ಕಾರಣಗಳನ್ನು ತಿಳಿಸಿದ ಬಳಿಕ ಶಿಷ್ಯ ( ಅಧಿಕಾರಿ ) ನಿಗೆ ಬ್ರಹ್ಮದ ಬಗೆಗೆ ತಿಳಿದುಕೊಳ್ಳಲು ಆಸಕ್ತಿಯುಂಟಾಗುತ್ತದೆ . ಅದಕ್ಕಾಗಿ ಶಿಷ್ಯನು ಗುರುವಿನ ಬಳಿ ತನಗೆ ಬೇಕಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ...