Part - 65
ಮೂಲ : ಇದಂ ಶರೀರಂ ಶ್ರು ಣು ಸೂಕ್ಷ್ಮ ಸಂಜ್ಞಿತಂ ಲಿಂಗಂ ತ್ವಪಂಚೀಕೃತಭೂತ _ ಸಂಭವಮ್ | ಸವಾಸನಂ ಕರ್ಮಫಲಾನುಭಾವಕಂ ಸ್ವಾಜ್ಞಾನತೋ s ನಾದಿರುಪಾಧಿರಾತ್ಮನಃ || ೯೬ || ಪ್ರತಿಪದಾರ್ಥ : ಸೂಕ್ಷ್ಮ ಸಂಜ್ಞಿತಂ = ಸೂಕ್ಷ್ಮವೆಂಬ ಹೆಸರುಳ್ಳ , ಅಪಂಚೀಕೃತಭೂತ _ ಸಂಭವಂ = ಪಂಚೀಕೃತವಾಗದ ಭೂತಗಳಿಂದ ಹುಟ್ಟಿದ , ಸವಾಸನಂ = ವಾಸನೆಯಿಂದ ಕೂಡಿರುವ , ಕರ್ಮಫಲಾನುಭಾವಕಂ = ಕರ್ಮಫಲಗಳ ಅನುಭವವನ್ನು ಉಂಟುಮಾಡುವ , ಇದಂ ಲಿಂಗಂ ಶರೀರಂತು , ಈ ಲಿಂಗಶರೀರದ ವಿಷಯವನ್ನು , ಶ್ರು ಣು = ಕೇಳು , ಸ್ವ _ ಜ್ಞಾನತಃ = ( ಇದು ) ತನ್ನ ಸ್ವರೂಪವನ್ನು ತಿಳಿಯದಿರುವುದರಿಂದ , ಆತ್ಮನಃ = ಆತ್ಮನಿಗೆ , ಅನಾದಿಃ = ಅನಾದಿಯಾದ , ಉಪಾಧೀಃ = ಉಪಾಧಿಯು . ತಾತ್ಪರ್ಯ : ಸೂಕ್ಷ್ಮಶರೀರವೆಂಬ ಹೆಸರುಳ್ಳ , ಪಂಚೀಕೃತವಾಗದ ಭೂತಗಳಿಂದ ಹುಟ್ಟಿದ , ವಾಸನೆಯಿಂದ ಕೂಡಿರುವ ಮತ್ತು ಕರ್ಮಫಲಗಳ ಅನುಭವವನ್ನು ಉಂಟುಮಾಡುವ ಈ ಲಿಂಗಶರೀರದ ವಿಷಯವನ್ನು ಕೇಳು ; ಇದು ಸ್ವಸ್ವರೂಪವನ್ನು ತಿಳಿಯದೇ ಇರುವುದರಿಂದ ಆತ್ಮನಿಗೆ ಎಂದೂ ಉಪಾಧಿ ಎನಿಸಿದೆ . ವಿವರಣೆ : ಸ್ಥೂಲಶರೀರದ ನಿರೂಪಣೆಯ ಬಳಿಕ ಗುರುವು 'ಇದಂ ಶರೀರಂ..' ಎಂಬ ಶ್ಲೋಕದ ಮೂಲಕ ಸೂಕ್ಷ್ಮ ಶರೀರದ ವಿವರಣೆಗೆ ಮುಂದಾಗುತ್ತಾರೆ. ಪಂಚೀಕೃತವಾಗದ ಎಂದರೆ , ಬಿಡಿಯಾಗಿರುವ ಪಂಚಭೂತಗಳಿಂದ ಹುಟ್ಟಿರುವುದು ಎಂದು ಅರ್ಥಮಾಡಿಕೊಳ್ಳಬೇಕಾಗುತ್ತದೆ . ಆಕಾಶ , ಪೃಥ್ವಿ , ಬೆಂಕಿ , ಗಾಳಿ , ನೀರು ಇ...