ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾಗ -೨೫

मूलम् - शिश्य उवाच - कृपया श्रुयतां स्वामिन् प्रश्नोयं क्रियते मया | यदुत्तरमहं श्रुत्वा कृतार्थः स्यां भवन्मुखात् || ४९ || ಮೂಲ : ಶಿಷ್ಯನು ಹೇಳಿದನು : - ಕೃಪಯಾ ಶ್ರುಯತಾಂ ಸ್ವಾಮಿನ್ ಪ್ರಶ್ನೋಯಂ ಕ್ರಿಯತೇ ಮಯಾ | ಯದುತ್ತರಮಹಂ ಶ್ರುತ್ವಾ ಕೃತಾರ್ಥಃ ಸ್ಯಾಂ ಭವನ್ಮುಖಾತ್ || ೪೯ || ಪ್ರತಿಪದಾರ್ಥ : ( ಸ್ವಾಮಿನ್ , ಮಯಾ = ಸ್ವಾಮಿ , ನನ್ನಿಂದ , ಅಯಂ ಪ್ರಶ್ನಃ = ಈ ಪ್ರಶ್ನೆಯು , ಕ್ರಿಯತೇ = ಕೇಳಲಾಗುತ್ತದೆ ( ಮಾಡಲಾಗುತ್ತದೆ ), ಕೃಪಯಾ = ಕರುಣೆಯಿಂದ , ಶ್ರೂಯತಾಂ = ಕೇಳಿಸಿಕೊಳ್ಳಿ ; ಅಹಂ = ನಾನು , ಭವನ್ಮುಖಾತ್ = ನಿಮ್ಮ ಬಾಯಿಂದ , ಯದುತ್ತರಂ = ಯಾವ ಉತ್ತರವನ್ನು , ಶ್ರುತ್ವಾ = ಕೇಳಿ , ಕೃತಾರ್ಥಃ ಸ್ಯಾಂ = ಧನ್ಯನಾಗುವೆನೊ ) ತಾತ್ಪರ್ಯ : ಶಿಷ್ಯನು ಹೇಳಿದನು : ಹೇ ಸ್ವಾಮಿಯೇ , ನಾನು ಕೇಳುವ ಪ್ರಶ್ನೆಯನ್ನು ಕರುಣೆಯಿಂದ ಕೇಳಿಸಿಕೊಳ್ಳಿ . ನಿಮ್ಮ ಬಾಯಿಂದ ನನ್ನ ಪ್ರಶ್ನೆಗಳಿಗೆ ಯಾವ ಉತ್ತರವು ಬರುವುದೋ ಅದನ್ನು ಕೇಳಿ ನಾನು ಕೃತಾರ್ಥನಾಗುತ್ತೇನೆ . ವಿವರಣೆ : ಶಿಷ್ಯನ ಭಯವನ್ನು ದೂರಮಾಡಿ ಮತ್ತು ಭಯಕ್ಕೆ ಕಾರಣಗಳನ್ನು ತಿಳಿಸಿದ ಬಳಿಕ ಶಿಷ್ಯ‌ ( ಅಧಿಕಾರಿ ) ನಿಗೆ ಬ್ರಹ್ಮದ ಬಗೆಗೆ ತಿಳಿದುಕೊಳ್ಳಲು ಆಸಕ್ತಿಯುಂಟಾಗುತ್ತದೆ . ಅದಕ್ಕಾಗಿ ಶಿಷ್ಯನು ಗುರುವಿನ ಬಳಿ ತನಗೆ ಬೇಕಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ

ಭಾಗ -೨೪

मूलम् : श्र्द्धाभक्ति ध्यानयोगान् मुमुक्षोः मुक्तेर्हेतून् वक्ति साक्षात् श्र्तेर्गीः || यो वा एतेष्वेव तिष्ठत्यमुष्य मोक्षो s विद्याकल्पिताद् देहबन्धात् ॥४७॥ ಮೂಲ : ಶ್ರದ್ಧಾಭಕ್ತಿ ಧ್ಯಾನಯೋಗಾನ್ ಮುಮುಕ್ಷೋಃ ಮುಕ್ತೇರ್ಹೇತೂನ್ ವಕ್ತಿ ಸಾಕ್ಷಾತ್ ಶ್ರುತೇರ್ಗೀಃ | ಯೋ ವಾ ಏತೇಷ್ವೇವ ತಿಷ್ಠತ್ಯಮುಷ್ಯ ಮೋಕ್ಷೋ s ವಿದ್ಯಾಕಲ್ಪಿತಾದ್ ದೇಹಬಂಧಾತ್ || ೪೭ || ಪ್ರತಿಪದಾರ್ಥ : ( ಶ್ರುತೇ ಃ = ಉಪನಿಷತ್ತಿನ , ಗೀಃ = ವಾಕ್ಯವು , ಮುಮುಕ್ಷೋಃ = ಮುಮುಕ್ಷುವಿಗೆ , ಶ್ರದ್ಧಾ ಭಕ್ತಿ ಧ್ಯಾನಯೋಗಾನ್ = ಶ್ರದ್ಧೆ ಭಕ್ತಿ ಧ್ಯಾನಯೋಗ ಇವುಗಳನ್ನು , ಮುಕ್ತೇಃ = ಮುಕ್ತಿಯ , ಹೇತೂನ್ = ಕಾರಣಗಳನ್ನಾಗಿ , ಸಾಕ್ಷಾತ್ = ಪ್ರತ್ಯಕ್ಷವಾಗಿ , ವಕ್ತಿ = ಹೇಳುತ್ತದೆ , ಯಃ ವೈ = ಯಾರು , ಏತೇಷು ಏವ = ಇವುಗಳಲ್ಲಿಯೇ , ತಿಷ್ಠತಿ = ನೆಲೆಗೊಂಡಿರುವನೋ , ಅಮುಷ್ಯ = ಆತನಿಗೆ , ಅವಿದ್ಯಾಕಲ್ಪಿತಾತ್ = ಅವಿದ್ಯೆಯಿಂದ ಕಲ್ಪಿತವಾದ , ದೇಹಬಂಧಾತ್ = ದೇಹಬಂಧನದಿಂದ , ಮೋಕ್ಷಃ = ಬಿಡುಗಡೆಯು . ) ತಾತ್ಪರ್ಯ : ಶ್ರುತಿವಾಕ್ಯವು ಶ್ರದ್ಧಾ ಭಕ್ತಿ ಧ್ಯಾನ ಯೋಗಗಳನ್ನು ಮುಕ್ತಿಕಾರಣಗಳೆಂದು ನೇರವಾಗಿ ಹೇಳುತ್ತವೆ . ಯಾರು ಇವುಗಳಲ್ಲೇ ನಿಲ್ಲುವರೋ ಅವರಿಗೆ ಅಜ್ಞಾನ ಕಲ್ಪಿತವಾದ ದೇಹಬಂಧನದಿಂದ ಬಿಡುಗಡೆಯು ಉಂಟಾಗುವುದು . ವಿವರಣೆ : ಉಪನಿಷತ್ತುಗಳಲ್ಲಿ ಶ್

ಭಾಗ -೨೩

मूलम् : अस्त्युपयो महान्कश्चित् संसारभयनाशनः । तेन तीर्त्वा भवांभोधिं परमानंदमाप्स्यसि ॥45॥ ಮೂಲ : ಅಸ್ತ್ಯುಪಾಯೋ ಮಹಾನ್ ಕಶ್ಚಿತ್ ಸಂಸಾರಭಯನಾಶನಃ | ತೇನ ತೀರ್ತ್ವಾ ಭವಾಂಭೋಧಿಂ ಪರಮಾನಂದಮಾಪ್ಸ್ಯಸಿ ||೪೫ || ಪ್ರತಿಪದಾರ್ಥ : ( ಸಂಸಾರಭಯನಾಶನಃ = ಸಂಸಾರಭಯವನ್ನು ಹೋಗಲಾಡಿಸುವ , ಮಹಾನ್ = ದೊಡ್ಡದಾದ , ಕಶ್ಚಿತ್ ಉಪಾಯಃ = ಒಂದು ಸಾಧನವು , ಅಸ್ತಿ = ಇದೆ ; ತೇನ = ಅದರಿಂದ , ಭವಾಂಭೋಧಿಂ = ಸಂಸಾರ ಸಮುದ್ರವನ್ನು , ತೀರ್ತ್ವಾ = ದಾಟಿ , ಪರಮಾನಂದಮ್ = ಪರಮಾನಂದವನ್ನು , ಅಪ್ಸ್ಯಸಿ = ಹೊಂದುವೆ . ) ತಾತ್ಪರ್ಯ : ಸಂಸಾರದ ಭಯವನ್ನು ಹೋಗಲಾಡಿಸಲು ಒಂದು ದೊಡ್ಡ ಉಪಾಯವಿದೆ . ಅದರಿಂದ ಭವಸಾಗರವನ್ನು ದಾಟಿ ಪರಮಾನಂದವನ್ನು ಹೊಂದಬಹುದು . ವಿವರಣೆ : ವಿದ್ವನ್ಮಣಿಯಾದ ಶಿಷ್ಯನಿಗೆ ಅಭಯವನ್ನು ಕೊಟ್ಟ ನಂತರ ಆತನ ಮುಂದಿನ ಸಾಧನೆಗಾಗಿ ದಾರಿಯನ್ನೂ ಗುರುವಾದವನು ತೋರಿಸಬೇಕಾಗುತ್ತದೆ . ಅದನ್ನಿಲ್ಲಿ ಆಚಾರ್ಯರು ವಿವರಿಸುತ್ತಾರೆ . ಭವಸಾಗರವನ್ನು ದಾಟುವುದೆಂದರೆ ಹೆಂಡತಿ ಮಕ್ಕಳು ಅಥವಾ ಸಂಬಂಧಿಕರ ಸಂಬಂಧಗಳನ್ನು ಕಳಚಿಕೊಂಡು ಎಲ್ಲೋ ಹೋಗಿ ಕೂರುವುದಲ್ಲ , ಅವೆಲ್ಲದರ ನಡುವೆ ಇದ್ದರೂ ಸಹ ಅವುಗಳಿಂದ ಒದಗಬಹುದಾದ ಬಂಧನಗಳಿಂದ ಬಿಡಿಸಿಕೊಳ್ಳುವುದು . ಹಾಗೆ ಬಿಡಿಸಿಕೊಳ್ಳುವುದಕ್ಕೆ ಉಪಾಯವಂತೂ ಇದ್ದೇಇದೆ . ಅವಿದ್ಯೆ ಅಥವಾ ಅಜ್ಞಾನವನ್ನು ತೊಡೆದುಕೊಳ್ಳುವುದರಿಂದ ಕೊನೆಯೇ ಇಲ್ಲ