ಪೋಸ್ಟ್‌ಗಳು

ಅಕ್ಟೋಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾಗ -೧೫

ಗ್ರಂಥದ ಮುಂದುವರಿಕೆ:- मूलम् - ಮೂಲ:- मन्दमध्यमरूपाऽपि वैराग्येण शमादिना । प्रसादेन गुरोः सेयं प्रवृद्धा सूयते फलम् ॥२९॥ ಮಂದ-ಮಧ್ಯಮ-ರೂಪಾಪಿ ವೈರಾಗ್ಯೇಣ ಶಮಾದಿನಾ | ಪ್ರಸಾದೇನ ಗುರೋಸ್ಸೇಯಂ ಪ್ರವೃದ್ಧಾ ಸೂಯತೇ ಫಲಮ್ ||೨೯| ಪ್ರತಿಪದಾರ್ಥ :- (ಮಂದ-ಮಧ್ಯಮ-ರೂಪಾ ಅಪಿ= ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ, ವೈರಾಗ್ಯೇಣ= ವಿರಾಗದಿಂದದಲೂ, ಶಮಾದಿನಾ = ಶಮಾದಿಗುಣ ಸಾಧನದಿಂದಲೂ, ಗುರೋಃ =ಗುರುವಿನ, ಪ್ರಸಾದೇನ = ಅನುಗ್ರಹದಿಂದ, ಸಾ ಇಯಂ = ಆ ಈ (ಮುಮುಕ್ಷುತ್ವವು), ಪ್ರವೃದ್ಧಾ = ಪ್ರಬಲವಾಗಿ, ಫಲಂ = ಫಲವನ್ನು , ಸೂಯತೇ = ಉಂಟುಮಾಡುತ್ತದೆ. ) ತಾತ್ಪರ್ಯ :  ಇಂತಹ ಮುಮುಕ್ಷುತ್ವವು ಮಂದ ಮಧ್ಯಮ ಸ್ಥಿತಿಯಲ್ಲಿದ್ದರೂ ವೈರಾಗ್ಯ , ಶಮಾದಿಗುಣ ಸಾಧನೆ ಮತ್ತು ಗುರುವಿನ ಅನುಗ್ರಹದಿಂದ (ಉಪದೇಶದಿಂದ) ಪ್ರಬಲವಾಗಿ ಮೋಕ್ಷರೂಪವಾದ ಫಲವು ಉಂಟಾಗುತ್ತದೆ. ವಿವರಣೆ : ಸಾಧನ ಚತುಷ್ಟಯದ ನಂತರ ಆಚಾರ್ಯರು ಮುಂದುವರಿದು ಮುಮುಕ್ಷುತ್ವದ ಬಗೆಗೆ ಹೇಳುತ್ತಾರೆ.  ಮುಮುಕ್ಷುತ್ವ ಅಥವಾ ಬಿಡುಗಡೆಯ ಬಯಕೆ ಎನ್ನುವುದು ಎಲ್ಲರಲ್ಲೂ ಒಂದೇ ತೆರನಾಗಿ ಇರುವುದಿಲ್ಲ. ಕೆಲವರಿಗೆ ಮಂದ (Slow)ವಾಗಿರುತ್ತದೆ. ನಿಧಾನವಾಗಿ ಕೆಲಸ ಮಾಡುವ ಅಥವಾ ಮುಂದಿನ ವಾರವೋ ಮುಂದಿನ ತಿಂಗಳೋ ಮಾಡಿದರಾಯಿತು ಎನ್ನುವ ಮನೋಭಾವವಿರುತ್ತದೆ. ಕೆಲವರಿಗೆ ಮಧ್ಯಮ (Medium)ಸ್ಥಿತಿಯಲ್ಲಿರುತ್ತದೆ. ನಾಳೆಯೋ ನಾಡಿದ್ದೋ ಮಾಡಿದರಾಯಿತು ಎನ್ನುವ ಮನೋಭಾವ. ಕೆಲ

ಭಾಗ -೧೪

ಗ್ರಂಥದ ಮುಂದುವರಿಕೆ.. ಆರನೆಯದು ಸಮಾಧಾನ सम्यगास्थापनं बुद्धेः शुद्धे ब्रह्मणि सर्वदा । तत्समाधानमित्युक्तं  न तु चित्तस्य लालनम् ||२७|| ಸಮ್ಯಗಾಸ್ಥಾಪನಂ ಬುದ್ಧೇಃ ಶುದ್ಧೇ ಬ್ರಹ್ಮಣಿ ಸರ್ವದಾ| (= ಬುದ್ಧಿಯನ್ನು ಶುದ್ಧ ಬ್ರಹ್ಮನಲ್ಲಿ ಯಾವಾಗಲೂ ಚೆನ್ನಾಗಿ ಇಟ್ಟುಕೊಳ್ಳುವುದು) ತತ್ ಸಮಾಧಾನಮಿತ್ಯುಕ್ತಂ ನ ತು ಚಿತ್ತಸ್ಯ ಲಾಲನಮ್ ||೨೭|| (=ಅದನ್ನು (ಇದನ್ನು) ಸಮಾಧಾನವೆಂದು ಹೇಳಿದೆಯೇ ಹೊರತು ಚಿತ್ತ ಪೋಷಣೆಯನ್ನು ಅಲ್ಲ) ಶುದ್ಧ ಬ್ರಹ್ಮದಲ್ಲಿ ಬುದ್ಥಿಯನ್ನು ಸ್ಥಿರಗೊಳಿಸುವುದು ಎಂದರೆ ಧರ್ಮಾತೀತವಾದ ನಿರ್ಗುಣ ಬ್ರಹ್ಮನಲ್ಲಿ ಬುದ್ಧಿಯನ್ನು ನಿಶ್ಚಯಗೊಳಿಸಿಕೊಳ್ಳುವುದು (ಸಮ್ಯಕ್ =ಚೆನ್ನಾಗಿ , ಆಸ್ಥಾಪನಂ = ನೆಲೆಗೊಳಿಸುವುದು) ಮತ್ತು ಇದನ್ನೇ ಸಮಾಧಾನವೆಂದು ಹೇಳಲ್ಪಟ್ಟಿದೆ. ಮನಸ್ಸಿನ ಲಾಲನೆಯು ಸಮಾಧಾನ (ಸಮ್ಯಕ್ =ಚೆನ್ನಾಗಿ, ಆಧಾನಂ= ಇಡುವುದು) ಅಲ್ಲ ಎಂದು ಮೇಲಿನ ಶ್ಲೋಕದಲ್ಲಿ ತಿಳಿಸುತ್ತಾರೆ. ಸಮಾಧಾನ ಎನ್ನುವುದಕ್ಕೆ ಶಾಂತಿ ಎನ್ನುವ ಅರ್ಥವಿದ್ದರೂ ಸಹ ಇಲ್ಲಿ, ಬ್ರಹ್ಮನಲ್ಲಿ  ನಿಶ್ಚಯಸ್ವರೂಪವಾದ ಬುದ್ಧಿಯನ್ನು ನೆಲೆಗೊಳಿಸಿಕೊಳ್ಳುವುದನ್ನು ಸಮಾಧಾನ ಎಂದು ಹೇಳಿರುತ್ತಾರೆ. ’ಚಿತ್ತಸ್ಯ ಲಾಲನಮ್’ ಎಂದರೆ ಮನಸ್ಸಿನ ಲಾಲನೆ ಅಥವಾ ಮನಸ್ಸಿಗೆ ಮುದವಾಗುವಂತೆ ನೆಡೆದುಕೊಳ್ಳುವುದು ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಚಿತ್ತ ಎನ್ನುವುದಕ್ಕೆ ಸ್ಮೃತಿ ಎನ್ನುವ ಅರ್ಥವೂ ಬರುವುದರಿಂದ ಸ್ಮೃತಿ ಅಥವಾ ನೆನ

ಭಾಗ-೧೩

ಗ್ರಂಥದ ಮುಂದುವರಿಕೆ :- सहनं सर्वदुखानां अप्रतीकारपूर्वकम् । चिन्ताविलापरहितं सा तितिक्षा निगद्यते ॥२५॥ ಸಹನಂ ಸರ್ವದುಃಖಾನಾಂ ಅಪ್ರತೀಕಾರಪೂರ್ವಕಮ್ | (=ದುಃಖಗಳಿಗೆ ಪ್ರತಿಕ್ರಿಯೆ ತೋರದೆ (ದೂರದೆ) ಎಲ್ಲವನ್ನೂ ಸಹಿಸಿಕೊಳ್ಳುವುದು) ಚಿಂತಾವಿಲಾಪರಹಿತಂ ಸಾ ತಿತಿಕ್ಷಾ ನಿಗದ್ಯತೇ ||೨೫|| (=ಚಿಂತೆ-ಶೋಕಗಳಿಂದ ಮುಕ್ತನಾಗುವುದೇ ತಿತಿಕ್ಷೆಯು) ನಾಲ್ಕನೆಯದು ತಿತಿಕ್ಷಾ ಹೊರಗಿನ ವಿಷಯಗಳು ಯಾವಾಗ ಚಿತ್ತಕ್ಕೆ ಬಾಧಿಸುವುದಿಲ್ಲವೋ ಆಗ ಚಳಿ-ಮಳೆ-ಬಿಸಿಲು ಮುಂತಾದವುಗಳಲ್ಲಿ ವ್ಯತ್ಯಾಸವು ತಿಳಿಯುವುದಿಲ್ಲ, ದ್ವಂದ್ವವೂ ಇರುವುದಿಲ್ಲ.  ಕಾಲಕ್ಕನುಸಾರವಾಗಿ ಅವುಗಳು ವಿಕೋಪದಿಂದ ಬಂದರೂ ಸಹ ಅದನ್ನೂ ಸಹಿಸಿಕೊಳ್ಳುವುದು ತಿತಿಕ್ಷೆ ಎಂದು ಮೇಲಿನ ಶ್ಲೋಕದಲ್ಲಿ ಆಚಾರ್ಯರು ಹೇಳಿರುತ್ತಾರೆ. ಸಹಿಸಿಕೊಂಡಿರುವುದು ಎಂದರೆ , ಬಂದೊದಗಿದ್ದಕ್ಕೆ ಸಾಕಷ್ಟು ಗೊಣಗಿ, ಸಿಡುಕಿ ನಂತರ ’ಅಯ್ಯೋ ನನಗ್ಯಾಕೆ’ ಎಂದು ಸುಮ್ಮನಾಗುವುದಲ್ಲ ! , ಬದಲಾಗಿ ಅಪ್ರತೀಕಾರಪೂರ್ವಕವಾಗಿ ಎಂದರೆ ಯಾವುದೇ ಪ್ರತಿಕ್ರಿಯೆಯನ್ನು ತೋರದೆ ಆಗಿದ್ದಕ್ಕೆ ಚಿಂತಿಸದೆ, ಶೋಕಿಸದೆ ದುಃಖಗಳನ್ನು ಸಹಿಸಿಕೊಂಡಿರುವುದು ಎಂದು ಅರ್ಥ.  ಪ್ರತೀಕಾರವನ್ನು ತೋರದೆ ಸಹಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸವೇನೋ ನಿಜ ಆದರೆ ಅಂತಹ ಕಷ್ಟದ ಕೆಲಸವನ್ನೇ ಆತ್ಮಾಭ್ಯಾಸಿಯು ಮಾಡಬೇಕಿರುವುದು ಎನ್ನುವುದು ಮೇಲಿನ ವಾಕ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.  ಇಲ್ಲಿ ಗಾಂಧೀಜಿಯವರ ತತ್ವ