ಪೋಸ್ಟ್‌ಗಳು

ಜುಲೈ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾಗ ೨೧

मूलम्-ಮೂಲ कथं तरेयं भवसिन्धुमेतं का  वा गतिर्मे कतमोस्तुपायः । जाने न किञ्चित्कृपयाव मां  प्रभो संसारदुःख-क्षतिमानतुष्व ॥४१॥ ಕಥಂ ತರೇಯಂ ಭವಸಿಂಧುಮೇತಂ ಕಾ ವಾ ಗತಿರ್ಮೇ ಕತಮೋಽಸ್ತ್ಯುಪಾಯಃ | ಜಾನೇ ನ ಕಿಂಚಿತ್ ಕೃಪಯಾವ ಮಾಂ ಪ್ರಭೋ ಸಂಸಾರ ದುಃಖ -ಕ್ಷತಿಮಾತನುಷ್ವ ||೪೧|| ಪ್ರತಿಪದಾರ್ಥ : (ಏತಂ ಭವಸಿಂಧುಂ = ಈ ಸಂಸಾರಸಾಗರವನ್ನು,  ಕಥಂ ತರೇಯಂ = ಹೇಗೆ ದಾಟಬಲ್ಲೆನು ? , ಮೇ =ನನಗೆ, ಗತಿಃ=ದಾರಿಯು, ಕಾ ವಾ =ಯಾವುದು ?, ಕತಮಃ = ಯಾವ, ಉಪಾಯಃ ಅಸ್ತಿ = ಉಪಾಯವಿರುವುದು ?, ಕಿಂಚಿತ್ = ಯಾವುದನ್ನೂ , ನ ಜಾನೇ = ಅರಿಯೆನು, ಪ್ರಭೋ = ಗುರುವೆ, ಮಾಂ=ನನ್ನನ್ನು, ಕೃಪಯಾ = ಕೃಪೆತೋರಿ, ಅವ = ಕಾಪಾಡು, ಸಂಸಾರದುಃಖ-ಕ್ಷತಿಂ-ಆತನುಷ್ವ = ಸಂಸಾರದುಃಖವನ್ನು ನಾಶಮಾಡು ). ತಾತ್ಪರ್ಯ :  ಈ ಸಂಸಾರಸಾಗರವನ್ನು ಹೇಗೆ ದಾಟಬಲ್ಲೆನು ? ನನಗೆ ದಾರಿ ಯಾವುದು ? ಮೋಕ್ಷೋಪಾಯಗಳು ಯಾವುದು ? ಇದ್ಯಾವುದನ್ನೂ ನಾನರಿಯೆನು. ಹೇ ಗುರುವೆ ನನ್ನನ್ನು ಕೃಪೆತೋರಿ ಕಾಪಾಡು. ಈ ಸಂಸಾರದುಃಖವನ್ನು ನಾಶಮಾಡು. ವಿವರಣೆ : ಶಿಷ್ಯನು ಗುರುವಿನ ಮುಂದೆ ಜ್ಞಾನೋಪದೇಶವನ್ನು ನೀಡುವಂತೆ ಬೇಡಿಕೊಂಡ ನಂತರ ತನ್ನ ಭಯವನ್ನು ಅಥವಾ ಭೀತಿಯನ್ನು ಗುರುವಿನ ಮುಂದೆ ಪ್ರಕಟಪಡಿಸುತ್ತಾನೆ. ಶಿಷ್ಯನಿಗೆ ಸಂಸಾರಸಾಗರವನ್ನು ದಾಟುವುದು ಹೇಗೆ ? ಎಂಬ ಭೀತಿಯಿದೆ. ಸಾಧನ ಚತುಷ್ಟಯ ಸಂಪನ್ನನಾಗಿದ್ದರೂ ಉಪದೇಶವಾಗದ ಹೊರತು ಜ್ಞಾನದ ಹಿರಿ