ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Part 27

ಮೂಲ: ಮಸ್ತಕನ್ಯಸ್ತ -ಭಾರಾದೇರ್ದುಃಖಮನ್ಯೈರ್ನಿವಾರ್ಯತೇ | ಕ್ಷುಧಾದಿಕೃತ-ದುಃಖ ತು ವಿನಾ ಸ್ವೇನ ನ ಕಶ್ಚಿತ್ ||೫೩|| ಪ್ರತಿಪದಾರ್ಥ: ಮಸ್ತಕನ್ಯಸ್ತ-ಭಾರಾದೇಃ = ತಲೆಯ ಮೇಲಿನ ಹೊರೆ (ಇತ್ಯಾದಿ) , ದುಃಖಂ = ಕಷ್ಟವು(ವನ್ನು) , ಅನ್ಯೈಃ = ಇತರ(ರು)ರಿಂದ, ನಿವಾರ್ಯತೇ = ಹೋಗಲಾಡಿಸಬಹುದು, ತು = ಆದರೆ, ಕ್ಷುಧಾದಿಕೃತ = ಹಸಿವಿನಿಂದ ಉಂಟಾಗುವ ಸಂಕಟಗಳು , ಸ್ವೇನ ವಿನಾ = ತನ್ನಿಂದಲ್ಲದೆ, ಕೇನ ಚಿತ್ ನ = ಮತ್ತಾರಿಂದಲೂ .( ಪರಿಹಾರವಾಗುವುದಿಲ್ಲ). ತಾತ್ಪರ್ಯ: ತಲೆಯ ಮೇಲಿನ ಹೊರೆಯ ಭಾರವನ್ನು ಬೇರೆ ಯಾರಾದರೂ ಕಡಿಮೆ ಮಾಡಿಕೊಡಬಹುದು. ಆದರೆ, ಹಸಿವಿನಿಂದ ಉಂಟಾಗುವ ಸಂಕಟವನ್ನು ತಾನಲ್ಲದೆ ಬೇರೆ ಯಾರೂ ಹೋಗಲಾಡಿಸಲು ಸಾಧ್ಯವಿಲ್ಲ. ವಿವರಣೆ : ಗುರುವು ಶಿಷ್ಯನಿಗೆ ಸ್ವಪ್ರಯತ್ನದ ವಿಶೇಷತೆಗಳನ್ನು ವಿವರಿಸುತ್ತಾ ಮುಂದುವರಿದು ಹೇಳುತ್ತಾರೆ.  ದೈಹಿಕ, ಮಾನಸಿಕ ಸಾಂಸಾರಿಕ ಹೊರೆಗಳನ್ನು, ಅಂದರೆ ಕಷ್ಟಸುಖಗಳನ್ನು ಮತ್ತೊಬ್ಬರ ಬಳಿ ಹೇಳಿಕೊಂಡಾಗಲೀ ಹಂಚಿಕೊಂಡಾಗಲೀ ಸಮಾಧಾನ ಪಟ್ಟುಕೊಳ್ಳಬಹುದು. ಹಾಗೆ ಹೇಳಿಕೊಳ್ಳುವುದರಿಂದ ಮನಸ್ಸಿನ ಉದ್ವೇಗ ಕಡಿಮೆಯಾಗುತ್ತದೆ ಎಂದು ಮನಃಶಾಸ್ತ್ರಜ್ಞರೂ ಅಭಿಪ್ರಾಯಪಡುತ್ತಾರೆ. ಇದಕ್ಕಾಗಿ ನೂರಾರು ಕೌನ್ಸೆಲಿಂಗ್ ಕೇಂದ್ರಗಳೂ ಇವೆ. ನಾವು ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದ್ದರೆ ಸ್ನೇಹಿತರೋ, ಬಂಧುಗಳೋ ನಮ್ಮನ್ನು ಪಾರು ಮಾಡುವ ಸಾಧ್ಯತೆಯೂ ಇರುತ್ತದೆ. ಆದರೆ, ಒಬ್ಬ ವ್ಯಕ್ತಿಗೆ ಹಸ

Part-26

ಮೂಲ : ಗುರೋವಾಚ ಧನ್ಯೋಸಿ ಕೃತಕೃತ್ಯೋಸಿ ಪಾವಿತಂ ತೇ ಕುಲಂ ತ್ವಯಾ | ಯದವಿದ್ಯಾ ಬಂಧಮುಕ್ತ್ವಾ ಬ್ರಹ್ಮೀಭವತುಮಿಚ್ಛಸಿ| ೫೧| ಪ್ರತಿಪದಾರ್ಥ: (ಗುರು ಉವಾಚ= ಗುರುವು ಹೇಳಿದನು, ಧನ್ಯಃ, ಅಸಿ= ನೀನು ಧನ್ಯನಾಗಿರುವೆ, ಕೃತಕೃತ್ಯಃ, ಅಸಿ = ಕೃತಾರ್ಥನಾಗಿರುವೆ, ತ್ವಯಾ = ನಿನ್ನಿಂದ, ತೇ ಕುಲಂ = ನಿನ್ನ ಕುಲವು, ಪಾವಿತಂ = ಪವಿತ್ರವಾಯಿತು, ಯತ್ = ಯಾವ (ಕಾರಣದಿಂದ), ಅವಿದ್ಯಾ ಬಂಧಮುಕ್ತ್ವಾ = ಅಜ್ಞಾನದ ಬಿಡುಗಡೆಯ ಮೂಲಕ, ಬ್ರಹ್ಮೀಭವಿತುಂ ಇಚ್ಛಸಿ = ಬ್ರಹ್ಮವಾಗಲೆಂದು )  ತಾತ್ಪರ್ಯ: ಗುರುವು ಹೇಳಿದನು: ನೀನು ಧನ್ಯನು, ಕೃತಕೃತ್ಯನು. ನಿನ್ನ ಕುಲವು ನಿನ್ನಿಂದ ಪಾವನವಾಯಿತು. ಏಕೆಂದರೆ, ಅಜ್ಞಾನ ಅಥವಾ ಅವಿದ್ಯಾಬಂಧನದಿಂದ ಬಿಡಿಸಿಕೊಂಡು ಬ್ರಹ್ಮವಾಗಲು ಬಯಸುತ್ತಿರುವೆ  ವಿವರಣೆ: ತಿಳಿವಳಿಕೆಯನ್ನು ಬಯಸಿ ಬರುವ ಶಿಷ್ಯನು ಕೇಳಿದ ಪ್ರಶ್ನೆಗಳಿಂದ ಗುರುವಿನ ಮನಸ್ಸು ತುಂಬಿಬರುತ್ತದೆ. ಅವೇನು ಸಾಮಾನ್ಯ ಪ್ರಶ್ನೆಗಳೆ ?. ಪ್ರಶ್ನೆಗಳ ತೂಕದಿಂದಲೆ ಅಪೇಕ್ಷಿಯ ವಿದ್ವತ್ತನ್ನೂ, ಇಲ್ಲಿಯವರೆಗಿನ ಆತನ ಸಾಧನೆಯನ್ನೂ ಗುರುವು ಅಳೆದುಬಿಡುತ್ತಾನೆ.  ಬ್ರಹ್ಮದ ಅರಿವನ್ನು ಪಡೆಯಲು ಬಯಸುತ್ತಿರುವ ನಿನ್ನ ಜನ್ಮ ಇಂದಿಗೆ ಸಾರ್ಥಕವಾಯಿತು ಹಾಗೂ ನಿನ್ನ ಕುಲವು ಪಾವನವಾಯಿತು ಎಂದು ಶಿಷ್ಯನನ್ನು ಪ್ರಶಂಸಿಸುತ್ತಾರೆ. ಏಕೆಂದರೆ ಅವಿದ್ಯೆ-ಅಜ್ಞಾನದಲ್ಲೆ ಸಿಲುಕಿ ಒದ್ದಾಡುವ ಜೀವಿಗಳಿಂತಲೂ ಭಿನ್ನವಾಗಿ ಇಲ್ಲಿ ಶ