ಪೋಸ್ಟ್‌ಗಳು

Part -52

  ಮೂಲ : ಮೋಕ್ಷಸ್ಯ ಕಾಂಕ್ಷಾ ಯದಿ ವೈ ತವಾಸ್ತಿ ತ್ಯಜಾತಿದೂರಾದ್ವಿಷಯಾನ್ ವಿಷಂ ಯಥಾ | ಪೀಯೂಷವತ್ತೋಷ _ ದಯಾ _ ಕ್ಷಮಾರ್ಜವ _ ಪ್ರಶಾಂತಿ _ ದಾಂತೀರ್ಭಜ ನಿತ್ಯಮಾದರಾತ್ || ೮೨ || ಪ್ರತಿ ಪದಾರ್ಥ : ತವಃ = ನಿನಗೆ , ಮೋಕ್ಷಸ್ಯ = ಮೋಕ್ಷದ , ಕಾಂಕ್ಷಾ = ಅಭಿಲಾಷೆಯು , ಯದಿ ಅಸ್ತಿ ವೈ = ಇದ್ದರೆ , ವಿಷಯಾನ್ = ವಿಷಯಗಳನ್ನು , ವಿಷಂ ಯಥಾ = ವಿಷದಂತೆ , ಅತಿ ದೂರಾತ್ = ತುಂಬ ದೂರದಲ್ಲಿ,  ತ್ಯಜ = ಬಿಟ್ಟುಬಿಡು , ತೋಷ _ ದಯಾ _ ಕ್ಷಮಾ _ ಆರ್ಜವ _ ಪ್ರಶಾಂತಿ _ ದಾಂತೀಃ = ಸಂತೋಷ ದಯೆ ಕ್ಷಮೆ ಸರಳತೆ ಶಮ ದಮ ಇವುಗಳನ್ನು,   ಪೀಯೂಷವತ್ = ಅಮೃತದಂತೆ , ನಿತ್ಯಂ = ನಿತ್ಯವೂ , ಆದರಾತ್ = ಪ್ರೀತಿಯಿಂದ , ಭಜ = ಸೇವಿಸು .   ತಾತ್ಪರ್ಯ : ಮೋಕ್ಷಾಪೇಕ್ಷೆಯು ನಿನ್ನಲ್ಲಿ ಹುಟ್ಟಿರುವುದು ಸತ್ಯವೇ ಆಗಿದ್ದರೆ , ವಿಷಯಗಳನ್ನು ವಿಷವೆಂದು ಗಣಿಸಿ ಹತ್ತಿರಕ್ಕೆ ಸುಳಿಯದಂತೆ ದೂರವಿರಿಸು . ಅಮೃತ ಸಮಾನವಾದ ಸಂತೋಷ , ದಯೆ , ಕರುಣೆ , ಕ್ಷಮೆ , ಸರಳತೆ , ಶಮ _ ದಮಾದಿ ಸಾಧನಗಳನ್ನು ನಿತ್ಯವೂ ಆದರದಿಂದ ಸೇವಿಸು ( ಅನುಸರಿಸು ). ವಿವರಣೆ : ಮುಮುಕ್ಷುವು ಜ್ಞಾನಸಿದ್ಧಿಗಾಗಿ ಯಾವುದನ್ನು ಕಡ್ಡಾಯವಾಗಿ ಬಿಡಬೇಕು ಮತ್ತು ಏನೇನನ್ನು ಅನುಸರಿಸಬೇಕು ಎನ್ನುವುದನ್ನು ಈ ಶ್ಲೋಕದಲ್ಲಿ ಆಚಾರ್ಯರು ಹೇಳುತ್ತಾರೆ . ಮೋಕ್ಷದ ಅಭಿಲಾಷೆಯು ಇದ್ದದ್ದೇ ಆದರೆ ಎನ್ನುವಲ್ಲಿ ' ಮೋಕ್ಷವು ಮಾತ...

Part - 51

ಮೂಲ : ವಿಷಮ _ ವಿಷಯ ಮಾರ್ಗೇ ಗಚ್ಛತೋ s ನಚ್ಛಬುದ್ದೇಃ ಪ್ರತಿಪದಮಭಯಾತೋ ಮೃತ್ಯುರಪ್ಯೇಷ ವಿದ್ಧಿ | ಹಿತ _ ಸುಜನ _ ಗುರೂಕ್ತ್ಯಾಗಚ್ಛತಃ ಸ್ವಸ್ಯ ಯುಕ್ತ್ಯಾ ಫ್ರಭವತಿ ಫಲಸಿದ್ಧಿಃ ಸತ್ಯಮಿತ್ಯೇವ ವಿದ್ಧಿ || ೮೧ || ಪ್ರತಿಪದಾರ್ಥ : ವಿಷಮ ವಿಷಯ ಮಾರ್ಗೇ = ದುರಿತವಾದ ವಿಷಯಮಾರ್ಗದಲ್ಲಿ , ಗಚ್ಛತಃ = ಹೋಗುತ್ತಿರುವ , ಅನಚ್ಛಬುದ್ಧೇಃ = ಮಲಿನಬುದ್ಧಿಯುಳ್ಳವನ , ವಿಷಃ ಮೃತ್ಯುಃ ಅಪಿ = ಈ ಸಾವೂ ಕೂಡ , ಪ್ರತಿಪದಂ = ಹೆಜ್ಜೆಹೆಜ್ಜೆಗೂ , ಅಭಿಯಾತಃ = ಹಿಂಬಾಲಿಸುತ್ತಿರುವುದು , ವಿದ್ಧಿ = ತಿಳಿದುಕೊ :, ಹಿತ ಸುಜನ ಗುರು ಉಕ್ತ್ಯಾ = ಆತ್ಮೀಯರು ಗುರುಗಳು ಉತ್ತಮರ ಮಾತಿನಿಂದಲೂ , ಸ್ವಸ್ಯ ಯುಕ್ತ್ಯಾ = ತನ್ನ ಯುಕ್ತಿಯಿಂದಲೂ , ಗಚ್ಛತಃ = ನಡೆಯುತ್ತಿರುವವನಿಗೆ , ಫಲಸಿದ್ಧಿಃ = ಮೋಕ್ಷಸಿದ್ಧಿಯು , ಪ್ರಭವತಿಃ = ಉಂಟಾಗುತ್ತದೆ , ಸತ್ಯಂ = ಸತ್ಯವು , ಏವಂ ವಿದ್ಧಿ = ಹೀಗೆ ಎಂದು ತಿಳಿ : ತಾತ್ಪರ್ಯ : ದುರಿತವಾದ ವಿಷಯಮಾರ್ಗದಲ್ಲಿ ಹೋಗುತ್ತಿರುವ ಮಲಿನ ಬುದ್ಧಿಯುಳ್ಳವನನ್ನು ಮೃತ್ಯುವು ಹೆಜ್ಜೆಹೆಜ್ಜೆಗೂ ಹಿಂಬಾಲಿಸುತ್ತಿರುತ್ತದೆ . ಆತ್ಮೀಯರು , ಗುರುಗಳು ಹಾಗೂ ಜ್ಞಾನಿಗಳ ಉಪದೇಶದಿಂದ ಮತ್ತು ಸ್ವಂತ ಬುದ್ಧಿಯಿಂದ ನಡೆಯುವವನಿಗೆ ಮೋಕ್ಷರೂಪವಾದ ಫಲವು ಸಿದ್ಧಿಸುತ್ತದೆ . ಇದೇ ಸತ್ಯ ಎಂದು ತಿಳಿದುಕೊ . ವಿವರಣೆ : ವಿಷಯನಿಂದನೆಯ ಪರಾಕಾಷ್ಠೆಯನ್ನು ನಾವು ಈ ಶ್ಲೋಕದಲ್ಲಿ ಕಾಣಬಹ...

Part - 50

ಮೂಲ : ವಿಷಯಾಖ್ಯ _ ಗ್ರಹೋ ಯೇನ ಸುವಿರಕ್ತ್ಯಸಿನಾ ಹತಃ | ಸ ಗಚ್ಛತಿ ಭವಾಂಭೋಧೇಃ ಪಾರಂ ಪ್ರತ್ಯೂಹ _ ವರ್ಜಿತಃ || ೮೦ || ಪ್ರತಿಪದಾರ್ಥ : ಯೇನ = ಯಾರಿಂದ , ವಿಷಯಾಖ್ಯ _ ಗ್ರಹಃ = ವಿಷಯಾಭಿಲಾಷೆ ಎಂಬ ಮೊಸಳೆಯು , ಸುವಿರಕ್ತಿ _ ಅಸಿನಾ = ದೃಢವೈರಾಗ್ಯವೆಂಬ ಕತ್ತಿಯಿಂದ , ಹತಃ = ಕೊಲ್ಲಲ್ಪಡುತ್ತದೆಯೋ , ಸಃ = ಆತನು , ಪ್ರತ್ಯೂಹ ವರ್ಜಿತಃ = ವಿಘ್ನಗಳಿಂದ ಬಿಡುಗಡೆಹೊಂದಿ , ಭವಾಂಭೋಧೇಃ = ಸಂಸಾರ ಸಾಗರದ , ಪಾರಂ = ತೀರವನ್ನು , ಗಚ್ಛತಿ = ಹೊಂದುತ್ತಾನೆ . ತಾತ್ಪರ್ಯ : ಯಾರು ದೃಢವಾದ ವೈರಾಗ್ಯ ಎನ್ನುವ ಕತ್ತಿಯಿಂದ ವಿಷಯಾಭಿಲಾಷೆ ಎಂಬ ಮೊಸಳೆಯನ್ನು ಕೊಲ್ಲುವನೋ , ಆತನು ಯಾವ ತೊಂದರೆಗಳಿಗೂ ಸಿಲುಕದೆ ಸಂಸಾರ ಸಮುದ್ರವನ್ನು ದಾಟಿ ಪರತೀರವನ್ನು ಹೊಂದುತ್ತಾನೆ . ವಿವರಣೆ : ರಾಜನಾಗಲು ಬಯಸುವವನು ಯುದ್ಧ ಮಾಡಬೇಕಾಗುತ್ತದೆ . ಆಗ ಕದನಕ್ಕೆ ಬೇಕಾಗುವ ಸಲಕರಣೆಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಂಡು ಸೈನ್ಯವನ್ನು ಮುನ್ನೆಡೆಸಿ ಶತ್ರುಗಳನ್ನು ನಾಶಮಾಡಿ ವಿಜಯವನ್ನು ಪಡೆಯುವುದು ವೀರೋಚಿತ ಮಾರ್ಗವಾಗಿರುತ್ತದೆ . ಅರಸನು ಧೈರ್ಯವಂತಾನಾಗಿದ್ದು , ಸಾಕಷ್ಟು ಕಾಲಾಳು , ಕುದುರೆ , ಆನೆ ಎಲ್ಲವೂ ಇದ್ದು ಸಹ ಕತ್ತಿ , ಗುರಾಣಿ ಇತ್ಯಾದಿ ಯುದ್ಧೋಪಕರಣಗಳು ತುಕ್ಕು ಹಿಡಿದು ಹಾಳಾಗಿದ್ದರೆ ಆತನು ಯಾವ ಸಮರವನ್ನು ಗೆಲ್ಲಲು ಸಾಧ್ಯವಾಗುತ್ತದೆ !. ದೇಶದಲ್ಲಿ ಸೈನಿಕರ ಸಂಖ್ಯೆ ಬಹಳಷ್ಟಿರಬೇಕು , ...

Part - 49

ಮೂಲ : ಅಪಾತ _ ವೈರಾಗ್ಯವತೋ ಮುಮುಕ್ಷೂನ್ ಭವಾಬ್ದಿಪಾರಂ ಪ್ರತಿಯಾತುಮುದ್ಯತಾನ್ | ಆಶಾ _ ಗ್ರಹೋ ಮಜ್ಜಯತೇಂತರಾಲೇ ನಿಗೃಹ್ಯ ಕಂಠೇ ವಿನಿವರ್ತ್ಯ ವೇಗಾತ್ || ೭೯ || ಪ್ರತಿಪದಾರ್ಥ : ಭವಾಬ್ದಿಪಾರಂ = ಸಂಸಾರ ಸಾಗರ ವನ್ನು , ಪ್ರತಿಯಾಂತು = ಹೊಂದಲು , ಉದ್ಯತಾನ್ = ಪ್ರಯತ್ನಿಸುತ್ತಿರುವ , ಅಪಾತ _ ವೈರಾಗ್ಯವತಃ = ಮಂದ ವೈರಾಗ್ಯವುಳ್ಳ , ಮುಮುಕ್ಷೂನ್ = ಬಂಧನದಿಂದ ಬಿಡಿಸಿಕೊಳ್ಳುತ್ತಿರುವವರು ( ಸಾಧನ ಚತುಷ್ಟಯದ ಸಾಧಕರು ), ಆಶಾ _ ಗ್ರಹಃ = ಆಸೆಯೆಂಬ ಮೊಸಳೆಯ , ಕಂಠೇ = ಕೊರಳಿನಲ್ಲಿ , ನಿಗೃಹ್ಯ = ಹಿಡಿದು , ವೇಗಾತ್ = ವೇಗದ ಕಾರಣದಿಂದ , ವಿನಿವರ್ತ್ಯ = ಹಿಂದಿರುಗಿಸಿ , ಅಂತರಾಲೇ = ಮಧ್ಯದಲ್ಲಿ , ಮಜ್ಜಯತೇ = ಮುಳುಗಿಸುತ್ತದೆ . ತಾತ್ಪರ್ಯ : ಸಂಸಾರ ಸಾಗರವನ್ನು ದಾಟಲು ಆಸಕ್ತನಾಗಿದ್ದರೂ ( ಆ ದಾರಿಯಲ್ಲೇ ನಡೆದು ಬಂದಿದ್ದರೂ ) ವಿಷಯಗಳ ಪ್ರತಿ ತೀವ್ರವಾದ ವೈರಾಗ್ಯವಿಲ್ಲದಿದ್ದರೆ ಅನರ್ಥವಾಗುತ್ತದೆ . ಮಂದ ವೈರಾಗ್ಯದಿಂದ ಮುನ್ನೆಡೆಯುವವರನ್ನು ' ಆಸೆ ' ಎಂಬ ಮೊಸಳೆಯು ತನ್ನ ಹಿಡಿತಕ್ಕೆ ತೆಗೆದುಕೊಂಡು ಯಾವ ವೇಗದಲ್ಲಿ ಸಾಗಿ ಬಂದಿರುತ್ತಾರೋ ಅಷ್ಟೇ ಬೇಗ ( ಹಿಮ್ಮುಖವಾಗಿ ) ಸಾಗರ ( ಸಂಸಾರ ) ದ ಮಧ್ಯದಲ್ಲಿ ಮುಳುಗಿಸುತ್ತದೆ . ವಿವರಣೆ: ಜ್ಞಾನಿಯಾಗುವವನಿಗೆ ವೈರಾಗ್ಯ ಅಥವಾ ಜಿಗುಪ್ಸೆಯು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ನಾವು ಈಗಾಗಲೇ   ಮಂದ_ಮಧ್ಯಮ_...

Part - 48

ಮೂಲ : ವಿಷಯಾಶಾ _ ಮಹಾಪಾಶಾದ್ಯೋ ವಿಮುಕ್ತಃ ಸುದುಸ್ತ್ಯಜಾತ್ | ಸ ಏವ ಕಲ್ಪತೇ ಮುಕ್ತ್ಯೈ ನಾನ್ಯಃ ಷಟ್ _ ಶಾಸ್ತ್ರವೇದ್ಯಪಿ || ೭೮ || ಪ್ರತಿಪದಾರ್ಥ : ಸುದುಸ್ತ್ಯಜಾತ್ = ಬಿಡಿಸಿಕೊಳ್ಳಲು ಅಶಕ್ಯವಾಗಿರುವ , ವಿಷಯಾಶಾ _ ಮಹಾಪಾಶಾತ್ = ವಿಷಯಾಭಿಲಾಷೆ ಎಂಬ ಮಹಾಪಾಶದಿಂದ , ಯಃ = ಯಾರು , ವಿಮುಕ್ತಃ = ಮುಕ್ತನಾಗುತ್ತಾನೋ , ಸಃ ಏವ = ಅವನೇ , ಮುಕ್ತ್ಯೈ = ಮುಕ್ತಿಗೆ , ಕಲ್ಪತೇ = ಅರ್ಹನಾಗುತ್ತಾನೆ , ಷಟ್ _ ಶಾಸ್ತ್ರವೇದೀ ಅಪಿ = ಆರು ಶಾಸ್ತ್ರಗಳನ್ನು ಬಲ್ಲವನಾದರೂ , ಅನ್ಯಃ = ಮತ್ತೊಬ್ಬನು , ನ = ಆಗುವುದಿಲ್ಲ ( ಅರ್ಹ ). ತಾತ್ಪರ್ಯ : ತ್ಯಜಿಸಲು ಸರ್ವಥಾ ಅಶಕ್ಯವಾಗಿರುವ ವಿಷಯಾಭಿಲಾಷೆಯಿಂದ ಯಾರು ಬಿಡುಗಡೆ ಹೊಂದುವನೋ ಅವನೇ ಮೋಕ್ಷಕ್ಕೆ ಅರ್ಹನಾಗುತ್ತಾನೆ . ಆರು ಶಾಸ್ತ್ರಗಳನ್ನು ತಿಳಿದವನಿಗೂ ಇಂತಹ ಅರ್ಹತೆಯು ದುರ್ಲಭವಾಗಿರುತ್ತದೆ . ವಿವರಣೆ : ಅನರ್ಥಕಾರಿಯಾದ ವಿಷಯಗಳಲ್ಲೂ ಮನುಷ್ಯನು ಮೋಹವನ್ನಿಟ್ಟುಕೊಳ್ಳುತ್ತಾನೆ . ಅದರಿಂದ ಪಾಠವನ್ನು ಕಲಿತರೂ ವಿಷಯಾಭಿಲಾಷೆಯನ್ನು ಬಿಡಲು ಅಶಕ್ಯನಾಗುತ್ತಾನೆ . ಇಂತಹ ಪುರುಷನು ( ಪುರುಷತ್ವದ ಬಗ್ಗೆ ಮೊದಲನೆಯ ಭಾಗದಲ್ಲೇ ವಿವರಣೆಯಿದೆ ) ಆರು ಶಾಸ್ತ್ರಗಳನ್ನು ಬಲ್ಲವನಾದರೂ ಮೋಕ್ಷಕ್ಕೆ ಅರ್ಹನಾಗುವುದಿಲ್ಲ . ಬಿಡಲು ಅಸಾಧ್ಯವಾದ ವಿವಿಧ ರೀತಿಯ ಪ್ರಲೋಭನೆಗಳಿಂದ ಯಾರು ವಿಮುಖನಾಗುತ್ತಾನೋ ಆತನೇ ಸಾಕ್ಷಾತ್ಕಾರದ ಚಿಂತನೆಗೆ ಅರ್ಹನಾಗು...

Part - 47

ಮೂಲ : ದೋಷೇಣ ತೀವ್ರೋ ವಿಷಯಃ ಕೃಷ್ಣಸರ್ಪವಿಷಾದಪಿ | ವಿಷಂ ನಿಹಂತಿ ಭೋಕ್ತಾರಂ ದ್ರಷ್ಟಾರಂ ಚಕ್ಷುಷಾ s ಪ್ಯಯಮ್ || ೭೭ || ಪ್ರತಿಪದಾರ್ಥ : ದೋಷೇಣ = ದೋಷದಿಂದ , ತೀವ್ರಃ = ತೀಕ್ಷ್ಣವಾದದ್ದು , ವಿಷಯಃ = ವಿಷಯಗಳು , ಕೃಷ್ಣಸರ್ಪವಿಷಾತ್ _ ಅಪಿ = ಕಾಳಸರ್ಪದ ವಿಷಕ್ಕಿಂತಲೂ , ವಿಷಂ = ವಿಷವು , ನಿಹಂತಿ = ಕೊಲ್ಲುವುದು , ಭೋಕ್ತಾರಂ = ತಿನ್ನುವವನನ್ನು , ಅಯಂ = ಇದು , ಚಕ್ಷುಷಾ = ಕಣ್ಣಿನಿಂದ , ದ್ರಷ್ಟಾರಮ್ _ ಅಪಿ = ನೋಡುವವನನ್ನು ಸಹ . ತಾತ್ಪರ್ಯ : ಕಾಳಸರ್ಪದ ವಿಷಕ್ಕಿಂಲೂ ವಿಷಯ ( ಭೋಗವಸ್ತು ) ವು ದೋಷದಲ್ಲಿ ತೀಕ್ಷ್ಣವಾದುದು . ವಿಷವು ತಿಂದವನನ್ನು ಮಾತ್ರ ಕೊಲ್ಲುತ್ತದೆ . ವಿಷಯವು ಕಣ್ಣಿನಿಂದ ನೋಡಿದವರನ್ನೂ ನಾಶಮಾಡುತ್ತದೆ . ವಿವರಣೆ : ವಿಷಯವಸ್ತುಗಳ ( ಶಬ್ದಾದಿ ಪಂಚ ) ಅನುಭವವು ಹೇಗೆ ನಾಶಕ್ಕೆ ಕಾರಣವಾಗುತ್ತದೆ ಎಂಬುದನ್ನು ಹಿಂದಿನ ಶ್ಲೋಕದಲ್ಲಿ ತಿಳಿದುಕೊಂಡೆವು . ಇಲ್ಲಿ ಇನ್ನೂ ಮುಂದುವರಿದು , ಅಂತಹ ಗುಣಗಳನ್ನು ಕಣ್ಣಾರೆ ಕಂಡರೂ ಸಾಕು ಮೃತ್ಯುವಿನ ಮನೆಯ ಬಾಗಿಲು ತಟ್ಟಬೇಕಾಗುತ್ತದೆ , ಏಕೆಂದರೆ ಕಾಳಸರ್ಪದ ವಿಷಕ್ಕಿಂತಲೂ ಹೆಚ್ಚು ಪರಿಣಾಮವು ಭೋಗವಸ್ತುಗಳನ್ನು ನೋಡುವುದರಿಂದಲೇ ಆಗುತ್ತದೆ ಎನ್ನುತ್ತಾರೆ . ಕಾಳಿಂಗಸರ್ಪದ ವಿಷವು ಅತ್ಯಂತ ಘೋರವಾದುದೆಂಬುದು ತಿಳಿದಿರುವ ಸಂಗತಿಯೇ ಆಗಿದೆ . ಇಂದ್ರಿಯ ಗ್ರಾಹ್ಯವಾದ ರೂಪಾದಿ ಗುಣಗಳಿಂದ ಹುಟ್ಟುವ ಭೋಗವಸ್ತುಗಳ ಮೇಲಿನ...

Part - 46

ಮೂಲ : ಶಬ್ದಾದಿಭಿಃ ಪಂಚಭಿರೇವ ಪಂಚ ಪಂಚತ್ವಮಾಪುಃ ಸ್ವಗುಣೇನ ಬದ್ಧಾಃ | ಕುರಂಗ _ ಮಾತಂಗ _ ಪತಂಗ _ ಮೀನ _ ಭೃಂಗಾ ನರಃ ಪಂಚಭಿರಂಚಿತಃ ಕಿಮ್ || ೭೬ || ಪ್ರತಿಪದಾರ್ಥ : ಶಬ್ದಾದಿಭಿಃ = ಶಬ್ದವೇ ಮೊದಲಾದ , ಪಂಚಭಿಃ _ ಏವ _ ಪಂಚ = ಐದು ವಿಷಯಗಳಿಂದ , ಪಂಚತ್ವಂ = ಸಾವನ್ನು , ಆಪುಃ = ಹೊಂದುತ್ತವೆ , ಸ್ವಗುಣೇನ = ತಮ್ಮ ವಿಷಯಾಭಿಲಾಷೆಯ , ಬದ್ಧಾಃ = ಪಾಶದಿಂದ ಬಂಧಿತವಾಗಿ , ಕುರಂಗ _ ಮಾತಂಗ _ ಪತಂಗ = ಜಿಂಕೆ , ಆನೆ , ಚಿಟ್ಟೆ ( ಮಿಡತೆ ), ಮೀನ _ ಭೃಂಗಾ = ಮೀನು ಮತ್ತು ದುಂಬಿ , ಪಂಚಭಿಃ _ ಅಂಚಿತಃ = ಪಂಚೇಂದ್ರಿಯಗಳಿಂದ ಉತ್ತೇಜಿತನಾಗುವ ( ಕೂಡಿರುವ ), ನರಃ _ ಕಿಂ = ಮಾನವನ ಬಗ್ಗೆ ಹೇಳುವುದೇನಿದೆ ? ತಾತ್ಪರ್ಯ : ಜಿಂಕೆ , ಆನೆ , ಚಿಟ್ಟೆ , ಮೀನು ಮತ್ತು ದುಂಬಿಯು ಶಬ್ದವೇ ಮೊದಲಾದ ಪಂಚ ವಿಷಯಗಳ ಪಾಶಕ್ಕೆ ಸಿಲುಕಿ , ತಮ್ಮನ್ನು ಸೆಳೆಯುವ ಯಾವುದೋ ಒಂದು ಗುಣಕ್ಕೆ ಮನಸೋತು ಸಾವಿಗೀಡಾಗುತ್ತವೆ . ಹಾಗಾಗಿ ವಿವಿಧ ಇಂದ್ರಿಯಗಳಿಂದ ಕೂಡಿರುವ ಮನುಷ್ಯನ ಬಗ್ಗೆ ಏನು ಹೇಳುವುದು ?. ವಿವರಣೆ : ಜಿಂಕೆಯನ್ನು ಹಿಡಿಯಲು ಅಥವಾ ಬೇಟೆಯಾಡಲು ಅದು ಓಡದಂತೆ ತಡೆಯುವುದು ತುಂಬ ಮುಖ್ಯವಾಗುತ್ತದೆ . ಬೇಟೆಗಾರರು ಹರಿಣವು ಮನಸೋಲುವ ಶಬ್ದಗಳನ್ನು ಹೊರಡಿಸಿ ಅದು ಆಲಿಸುತ್ತಾ ನಿಲ್ಲುವಂತೆ ಮಾಡಿ ಹೊಡೆಯುತ್ತಾರೆ ( ಶಾಸ್ತ್ರೀಯ ಸಂಗೀತವನ್ನು ಜಿಂಕೆಗಳು ತದೇಕಚಿತ್ತದಿಂದ ಆಲಿಸುತ್ತವೆ ಎಂಬ ಮಾತಿದೆ ) . ಕಾ...