ಪೋಸ್ಟ್‌ಗಳು

ಭಾಗ -೨೫

मूलम् - शिश्य उवाच - कृपया श्रुयतां स्वामिन् प्रश्नोयं क्रियते मया | यदुत्तरमहं श्रुत्वा कृतार्थः स्यां भवन्मुखात् || ४९ || ಮೂಲ : ಶಿಷ್ಯನು ಹೇಳಿದನು : - ಕೃಪಯಾ ಶ್ರುಯತಾಂ ಸ್ವಾಮಿನ್ ಪ್ರಶ್ನೋಯಂ ಕ್ರಿಯತೇ ಮಯಾ | ಯದುತ್ತರಮಹಂ ಶ್ರುತ್ವಾ ಕೃತಾರ್ಥಃ ಸ್ಯಾಂ ಭವನ್ಮುಖಾತ್ || ೪೯ || ಪ್ರತಿಪದಾರ್ಥ : ( ಸ್ವಾಮಿನ್ , ಮಯಾ = ಸ್ವಾಮಿ , ನನ್ನಿಂದ , ಅಯಂ ಪ್ರಶ್ನಃ = ಈ ಪ್ರಶ್ನೆಯು , ಕ್ರಿಯತೇ = ಕೇಳಲಾಗುತ್ತದೆ ( ಮಾಡಲಾಗುತ್ತದೆ ), ಕೃಪಯಾ = ಕರುಣೆಯಿಂದ , ಶ್ರೂಯತಾಂ = ಕೇಳಿಸಿಕೊಳ್ಳಿ ; ಅಹಂ = ನಾನು , ಭವನ್ಮುಖಾತ್ = ನಿಮ್ಮ ಬಾಯಿಂದ , ಯದುತ್ತರಂ = ಯಾವ ಉತ್ತರವನ್ನು , ಶ್ರುತ್ವಾ = ಕೇಳಿ , ಕೃತಾರ್ಥಃ ಸ್ಯಾಂ = ಧನ್ಯನಾಗುವೆನೊ ) ತಾತ್ಪರ್ಯ : ಶಿಷ್ಯನು ಹೇಳಿದನು : ಹೇ ಸ್ವಾಮಿಯೇ , ನಾನು ಕೇಳುವ ಪ್ರಶ್ನೆಯನ್ನು ಕರುಣೆಯಿಂದ ಕೇಳಿಸಿಕೊಳ್ಳಿ . ನಿಮ್ಮ ಬಾಯಿಂದ ನನ್ನ ಪ್ರಶ್ನೆಗಳಿಗೆ ಯಾವ ಉತ್ತರವು ಬರುವುದೋ ಅದನ್ನು ಕೇಳಿ ನಾನು ಕೃತಾರ್ಥನಾಗುತ್ತೇನೆ . ವಿವರಣೆ : ಶಿಷ್ಯನ ಭಯವನ್ನು ದೂರಮಾಡಿ ಮತ್ತು ಭಯಕ್ಕೆ ಕಾರಣಗಳನ್ನು ತಿಳಿಸಿದ ಬಳಿಕ ಶಿಷ್ಯ‌ ( ಅಧಿಕಾರಿ ) ನಿಗೆ ಬ್ರಹ್ಮದ ಬಗೆಗೆ ತಿಳಿದುಕೊಳ್ಳಲು ಆಸಕ್ತಿಯುಂಟಾಗುತ್ತದೆ . ಅದಕ್ಕಾಗಿ ಶಿಷ್ಯನು ಗುರುವಿನ ಬಳಿ ತನಗೆ ಬೇಕಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ...

ಭಾಗ -೨೪

मूलम् : श्र्द्धाभक्ति ध्यानयोगान् मुमुक्षोः मुक्तेर्हेतून् वक्ति साक्षात् श्र्तेर्गीः || यो वा एतेष्वेव तिष्ठत्यमुष्य मोक्षो s विद्याकल्पिताद् देहबन्धात् ॥४७॥ ಮೂಲ : ಶ್ರದ್ಧಾಭಕ್ತಿ ಧ್ಯಾನಯೋಗಾನ್ ಮುಮುಕ್ಷೋಃ ಮುಕ್ತೇರ್ಹೇತೂನ್ ವಕ್ತಿ ಸಾಕ್ಷಾತ್ ಶ್ರುತೇರ್ಗೀಃ | ಯೋ ವಾ ಏತೇಷ್ವೇವ ತಿಷ್ಠತ್ಯಮುಷ್ಯ ಮೋಕ್ಷೋ s ವಿದ್ಯಾಕಲ್ಪಿತಾದ್ ದೇಹಬಂಧಾತ್ || ೪೭ || ಪ್ರತಿಪದಾರ್ಥ : ( ಶ್ರುತೇ ಃ = ಉಪನಿಷತ್ತಿನ , ಗೀಃ = ವಾಕ್ಯವು , ಮುಮುಕ್ಷೋಃ = ಮುಮುಕ್ಷುವಿಗೆ , ಶ್ರದ್ಧಾ ಭಕ್ತಿ ಧ್ಯಾನಯೋಗಾನ್ = ಶ್ರದ್ಧೆ ಭಕ್ತಿ ಧ್ಯಾನಯೋಗ ಇವುಗಳನ್ನು , ಮುಕ್ತೇಃ = ಮುಕ್ತಿಯ , ಹೇತೂನ್ = ಕಾರಣಗಳನ್ನಾಗಿ , ಸಾಕ್ಷಾತ್ = ಪ್ರತ್ಯಕ್ಷವಾಗಿ , ವಕ್ತಿ = ಹೇಳುತ್ತದೆ , ಯಃ ವೈ = ಯಾರು , ಏತೇಷು ಏವ = ಇವುಗಳಲ್ಲಿಯೇ , ತಿಷ್ಠತಿ = ನೆಲೆಗೊಂಡಿರುವನೋ , ಅಮುಷ್ಯ = ಆತನಿಗೆ , ಅವಿದ್ಯಾಕಲ್ಪಿತಾತ್ = ಅವಿದ್ಯೆಯಿಂದ ಕಲ್ಪಿತವಾದ , ದೇಹಬಂಧಾತ್ = ದೇಹಬಂಧನದಿಂದ , ಮೋಕ್ಷಃ = ಬಿಡುಗಡೆಯು . ) ತಾತ್ಪರ್ಯ : ಶ್ರುತಿವಾಕ್ಯವು ಶ್ರದ್ಧಾ ಭಕ್ತಿ ಧ್ಯಾನ ಯೋಗಗಳನ್ನು ಮುಕ್ತಿಕಾರಣಗಳೆಂದು ನೇರವಾಗಿ ಹೇಳುತ್ತವೆ . ಯಾರು ಇವುಗಳಲ್ಲೇ ನಿಲ್ಲುವರೋ ಅವರಿಗೆ ಅಜ್ಞಾನ ಕಲ್ಪಿತವಾದ ದೇಹಬಂಧನದಿಂದ ಬಿಡುಗಡೆಯು ಉಂಟಾಗುವುದು . ವಿವರಣೆ : ಉಪನಿಷತ್ತುಗಳಲ್ಲಿ ಶ್...

ಭಾಗ -೨೩

मूलम् : अस्त्युपयो महान्कश्चित् संसारभयनाशनः । तेन तीर्त्वा भवांभोधिं परमानंदमाप्स्यसि ॥45॥ ಮೂಲ : ಅಸ್ತ್ಯುಪಾಯೋ ಮಹಾನ್ ಕಶ್ಚಿತ್ ಸಂಸಾರಭಯನಾಶನಃ | ತೇನ ತೀರ್ತ್ವಾ ಭವಾಂಭೋಧಿಂ ಪರಮಾನಂದಮಾಪ್ಸ್ಯಸಿ ||೪೫ || ಪ್ರತಿಪದಾರ್ಥ : ( ಸಂಸಾರಭಯನಾಶನಃ = ಸಂಸಾರಭಯವನ್ನು ಹೋಗಲಾಡಿಸುವ , ಮಹಾನ್ = ದೊಡ್ಡದಾದ , ಕಶ್ಚಿತ್ ಉಪಾಯಃ = ಒಂದು ಸಾಧನವು , ಅಸ್ತಿ = ಇದೆ ; ತೇನ = ಅದರಿಂದ , ಭವಾಂಭೋಧಿಂ = ಸಂಸಾರ ಸಮುದ್ರವನ್ನು , ತೀರ್ತ್ವಾ = ದಾಟಿ , ಪರಮಾನಂದಮ್ = ಪರಮಾನಂದವನ್ನು , ಅಪ್ಸ್ಯಸಿ = ಹೊಂದುವೆ . ) ತಾತ್ಪರ್ಯ : ಸಂಸಾರದ ಭಯವನ್ನು ಹೋಗಲಾಡಿಸಲು ಒಂದು ದೊಡ್ಡ ಉಪಾಯವಿದೆ . ಅದರಿಂದ ಭವಸಾಗರವನ್ನು ದಾಟಿ ಪರಮಾನಂದವನ್ನು ಹೊಂದಬಹುದು . ವಿವರಣೆ : ವಿದ್ವನ್ಮಣಿಯಾದ ಶಿಷ್ಯನಿಗೆ ಅಭಯವನ್ನು ಕೊಟ್ಟ ನಂತರ ಆತನ ಮುಂದಿನ ಸಾಧನೆಗಾಗಿ ದಾರಿಯನ್ನೂ ಗುರುವಾದವನು ತೋರಿಸಬೇಕಾಗುತ್ತದೆ . ಅದನ್ನಿಲ್ಲಿ ಆಚಾರ್ಯರು ವಿವರಿಸುತ್ತಾರೆ . ಭವಸಾಗರವನ್ನು ದಾಟುವುದೆಂದರೆ ಹೆಂಡತಿ ಮಕ್ಕಳು ಅಥವಾ ಸಂಬಂಧಿಕರ ಸಂಬಂಧಗಳನ್ನು ಕಳಚಿಕೊಂಡು ಎಲ್ಲೋ ಹೋಗಿ ಕೂರುವುದಲ್ಲ , ಅವೆಲ್ಲದರ ನಡುವೆ ಇದ್ದರೂ ಸಹ ಅವುಗಳಿಂದ ಒದಗಬಹುದಾದ ಬಂಧನಗಳಿಂದ ಬಿಡಿಸಿಕೊಳ್ಳುವುದು . ಹಾಗೆ ಬಿಡಿಸಿಕೊಳ್ಳುವುದಕ್ಕೆ ಉಪಾಯವಂತೂ ಇದ್ದೇಇದೆ . ಅವಿದ್ಯೆ ಅಥವಾ ಅಜ್ಞಾನವನ್ನು ತೊಡೆದುಕೊಳ್ಳುವುದರಿಂದ ಕೊನೆಯೇ ಇಲ್ಲ...

ಭಾಗ ೨೨

मूलम्-ಮೂಲ विद्वान् स तस्मा उपसत्तिमीयुषे मुमुक्षवे साधु यथोक्तकारिणे। प्रशान्तचित्ताय शमान्विताय तत्वोपदेशं कृपयैव कुर्यात् ॥४३॥ ವಿದ್ವಾನ್ ಸ ತಸ್ಮಾ ಉಪಸತ್ತಿಮೀಯುಷೇ ಮುಮುಕ್ಷವೇ ಸಾಧು ಯಥೋಕ್ತಕಾರಿಣೇ | ಪ್ರಶಾಂತಚಿತ್ತಾಯ ಶಮಾನ್ವಿತಾಯ ತತ್ವೋಪದೇಶಂ ಕೃಪಯೈವ ಕುರ್ಯಾತ್ |೪೩ | ಪ್ರತಿಪದಾರ್ಥ :- (ಸಃ ವಿದ್ವಾನ್ = ಆ ವಿದ್ವಾಂಸನು, ಉಪಸತ್ತಿಮ್ ಈಯುಷೇ = ತಿಳಿವನ್ನು ಬಯಸಿರುವ, ಮುಮುಕ್ಷವೇ = ಮುಮುಕ್ಷವಾದ, ಸಾಧು-ಯಥೋಕ್ತ-ಕಾರಿಣೇ = ಹೇಳಿದಂತೆ ಸರಿಯಾಗಿ ನೆಡೆಯುವ(ಮಾಡುವ), ಪ್ರಶಾಂತ ಚಿತ್ತಾಯ = ನಿರ್ಮಲ ಮನಸ್ಕನಾದ, ಶಮಾನ್ವಿತಾಯ = ಶಮದಮಾದಿ ಗುಣಗಳಿಂದ ಸಂಪನ್ನನಾದ, ತಸ್ಮೈ = ಆ ಅಪೇಕ್ಷಿಗೆ, ಕೃಪಯಾ ಏವ = ಕರುಣೆಯಿಂದಲೇ, ತತ್ವೋಪದೇಶಂ -ಕುರ್ಯಾತ್ = ತತ್ವೋಪದೇಶವನ್ನು ಮಾಡಬೇಕು ) ತಾತ್ಪರ್ಯ:- ಬ್ರಹ್ಮಜ್ಞಾನಿಯಾದ ಗುರುವು ಉಪದೇಶವನ್ನು ಬಯಸುತ್ತಿರುವ, ಶಮಾದಿ ಗುಣಗಳಿಂದ ಕೂಡಿರುವ , ಹೇಳಿದಂತೆ ಸರಿಯಾಗಿ ನೆಡೆಯುವ, ಒಳ್ಳೆಯ ಮನಸಿನವನಾದ , ಮುಮುಕ್ಷವಾದ ಜ್ಞಾನಾಪೇಕ್ಷಿಗೆ ಕರುಣೆಯಿಂದ ಕೃಪೆತೋರಿ ತತ್ವೋಪದೇಶವನ್ನು ಮಾಡಬೇಕು. ವಿವರಣೆ :- ಜ್ಞಾನೋಪದೇಶವನ್ನು ಬಯಸಿ ಬರುವ ಅಪೇಕ್ಷಿಯನ್ನು ಕರುಣೆಯಿಂದ ಶಿಷ್ಯನನ್ನಾಗಿ ಸ್ವೀಕರಿಸಿ ಆತನಿಗೆ ತತ್ವೋಪದೇಶವನ್ನು ಬ್ರಹ್ಮವಿದನಾದ ಗುರುವು ಮಾಡಬೇಕು ಎಂದು ಆಚಾರ್ಯರು ಈ ಶ್ಲೋಕದಲ್ಲಿ ಹೇಳಿರುತ್ತಾರೆ. ಪ್ರಕರಣದಲ್ಲಿ ಬರುವ ವಿಚಾರ...

ಭಾಗ ೨೧

मूलम्-ಮೂಲ कथं तरेयं भवसिन्धुमेतं का  वा गतिर्मे कतमोस्तुपायः । जाने न किञ्चित्कृपयाव मां  प्रभो संसारदुःख-क्षतिमानतुष्व ॥४१॥ ಕಥಂ ತರೇಯಂ ಭವಸಿಂಧುಮೇತಂ ಕಾ ವಾ ಗತಿರ್ಮೇ ಕತಮೋಽಸ್ತ್ಯುಪಾಯಃ | ಜಾನೇ ನ ಕಿಂಚಿತ್ ಕೃಪಯಾವ ಮಾಂ ಪ್ರಭೋ ಸಂಸಾರ ದುಃಖ -ಕ್ಷತಿಮಾತನುಷ್ವ ||೪೧|| ಪ್ರತಿಪದಾರ್ಥ : (ಏತಂ ಭವಸಿಂಧುಂ = ಈ ಸಂಸಾರಸಾಗರವನ್ನು,  ಕಥಂ ತರೇಯಂ = ಹೇಗೆ ದಾಟಬಲ್ಲೆನು ? , ಮೇ =ನನಗೆ, ಗತಿಃ=ದಾರಿಯು, ಕಾ ವಾ =ಯಾವುದು ?, ಕತಮಃ = ಯಾವ, ಉಪಾಯಃ ಅಸ್ತಿ = ಉಪಾಯವಿರುವುದು ?, ಕಿಂಚಿತ್ = ಯಾವುದನ್ನೂ , ನ ಜಾನೇ = ಅರಿಯೆನು, ಪ್ರಭೋ = ಗುರುವೆ, ಮಾಂ=ನನ್ನನ್ನು, ಕೃಪಯಾ = ಕೃಪೆತೋರಿ, ಅವ = ಕಾಪಾಡು, ಸಂಸಾರದುಃಖ-ಕ್ಷತಿಂ-ಆತನುಷ್ವ = ಸಂಸಾರದುಃಖವನ್ನು ನಾಶಮಾಡು ). ತಾತ್ಪರ್ಯ :  ಈ ಸಂಸಾರಸಾಗರವನ್ನು ಹೇಗೆ ದಾಟಬಲ್ಲೆನು ? ನನಗೆ ದಾರಿ ಯಾವುದು ? ಮೋಕ್ಷೋಪಾಯಗಳು ಯಾವುದು ? ಇದ್ಯಾವುದನ್ನೂ ನಾನರಿಯೆನು. ಹೇ ಗುರುವೆ ನನ್ನನ್ನು ಕೃಪೆತೋರಿ ಕಾಪಾಡು. ಈ ಸಂಸಾರದುಃಖವನ್ನು ನಾಶಮಾಡು. ವಿವರಣೆ : ಶಿಷ್ಯನು ಗುರುವಿನ ಮುಂದೆ ಜ್ಞಾನೋಪದೇಶವನ್ನು ನೀಡುವಂತೆ ಬೇಡಿಕೊಂಡ ನಂತರ ತನ್ನ ಭಯವನ್ನು ಅಥವಾ ಭೀತಿಯನ್ನು ಗುರುವಿನ ಮುಂದೆ ಪ್ರಕಟಪಡಿಸುತ್ತಾನೆ. ಶಿಷ್ಯನಿಗೆ ಸಂಸಾರಸಾಗರವನ್ನು ದಾಟುವುದು ಹೇಗೆ ? ಎಂಬ ಭೀತಿಯಿದೆ. ಸಾಧನ ಚತುಷ್ಟಯ ಸಂಪನ್ನನಾಗಿದ್ದರೂ ಉಪದೇಶವಾಗ...