Part 27
  ಮೂಲ:     ಮಸ್ತಕನ್ಯಸ್ತ -ಭಾರಾದೇರ್ದುಃಖಮನ್ಯೈರ್ನಿವಾರ್ಯತೇ |   ಕ್ಷುಧಾದಿಕೃತ-ದುಃಖ ತು ವಿನಾ ಸ್ವೇನ ನ ಕಶ್ಚಿತ್ ||೫೩||     ಪ್ರತಿಪದಾರ್ಥ:     ಮಸ್ತಕನ್ಯಸ್ತ-ಭಾರಾದೇಃ = ತಲೆಯ ಮೇಲಿನ ಹೊರೆ (ಇತ್ಯಾದಿ) , ದುಃಖಂ = ಕಷ್ಟವು(ವನ್ನು) , ಅನ್ಯೈಃ = ಇತರ(ರು)ರಿಂದ, ನಿವಾರ್ಯತೇ = ಹೋಗಲಾಡಿಸಬಹುದು, ತು = ಆದರೆ, ಕ್ಷುಧಾದಿಕೃತ = ಹಸಿವಿನಿಂದ ಉಂಟಾಗುವ ಸಂಕಟಗಳು , ಸ್ವೇನ ವಿನಾ = ತನ್ನಿಂದಲ್ಲದೆ, ಕೇನ ಚಿತ್ ನ = ಮತ್ತಾರಿಂದಲೂ .( ಪರಿಹಾರವಾಗುವುದಿಲ್ಲ).     ತಾತ್ಪರ್ಯ:     ತಲೆಯ ಮೇಲಿನ ಹೊರೆಯ ಭಾರವನ್ನು ಬೇರೆ ಯಾರಾದರೂ ಕಡಿಮೆ ಮಾಡಿಕೊಡಬಹುದು. ಆದರೆ, ಹಸಿವಿನಿಂದ ಉಂಟಾಗುವ ಸಂಕಟವನ್ನು ತಾನಲ್ಲದೆ ಬೇರೆ ಯಾರೂ ಹೋಗಲಾಡಿಸಲು ಸಾಧ್ಯವಿಲ್ಲ.     ವಿವರಣೆ :     ಗುರುವು ಶಿಷ್ಯನಿಗೆ ಸ್ವಪ್ರಯತ್ನದ ವಿಶೇಷತೆಗಳನ್ನು ವಿವರಿಸುತ್ತಾ ಮುಂದುವರಿದು ಹೇಳುತ್ತಾರೆ.  ದೈಹಿಕ, ಮಾನಸಿಕ ಸಾಂಸಾರಿಕ ಹೊರೆಗಳನ್ನು, ಅಂದರೆ ಕಷ್ಟಸುಖಗಳನ್ನು ಮತ್ತೊಬ್ಬರ ಬಳಿ ಹೇಳಿಕೊಂಡಾಗಲೀ ಹಂಚಿಕೊಂಡಾಗಲೀ ಸಮಾಧಾನ ಪಟ್ಟುಕೊಳ್ಳಬಹುದು. ಹಾಗೆ ಹೇಳಿಕೊಳ್ಳುವುದರಿಂದ ಮನಸ್ಸಿನ ಉದ್ವೇಗ ಕಡಿಮೆಯಾಗುತ್ತದೆ ಎಂದು ಮನಃಶಾಸ್ತ್ರಜ್ಞರೂ ಅಭಿಪ್ರಾಯಪಡುತ್ತಾರೆ. ಇದಕ್ಕಾಗಿ ನೂರಾರು ಕೌನ್ಸೆಲಿಂಗ್ ಕೇಂದ್ರಗಳೂ ಇವೆ. ನಾವು ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದ್ದರೆ ಸ್ನೇಹಿತರೋ, ಬಂಧುಗಳೋ ನಮ್ಮನ್ನು ಪಾರು ಮಾಡುವ ಸಾಧ್ಯತೆಯೂ ಇರುತ್ತದೆ. ಆದರೆ, ಒಬ್ಬ ವ್ಯಕ್ತಿಗ...